ಅಂಬಾನಿ ಮನೆಯಿಂದ ಅಪರೂಪಕ್ಕೆ ಹೊರಬರುವ ಐಷಾರಾಮಿ ಕಾರುಗಳಿವು
ಭಾರತದ ಅತಿ ದೊಡ್ಡ ಶ್ರೀಮಂತರಾದ ಮುಖೇಶ್ ಅಂಬಾನಿ ವಿಶ್ವದ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇತರ ಶ್ರೀಮಂತರಂತೆ ಮುಖೇಶ್ ಅಂಬಾನಿರವರು ಮಾತ್ರವಲ್ಲದೇ ಅವರ ಕುಟುಂಬ ಸದಸ್ಯರೂ ಸಹ ದುಬಾರಿ ಐಷಾರಾಮಿ ಕಾರುಗಳ ಕ್ರೇಜ್ ಹೊಂದಿದ್ದಾರೆ.

ಮುಖೇಶ್ ಅಂಬಾನಿ ಹಾಗೂ ಕುಟುಂಬ ಸದಸ್ಯರು ಹಲವಾರು ಬಾರಿ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವಾಗ ಕಣ್ಣಿಗೆ ಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವಾರು ವೀಡಿಯೊಗಳು ಕಾಲಕಾಲಕ್ಕೆ ವೈರಲ್ ಆಗಿವೆ. ಆದರೆ ಅಂಬಾನಿ ಕುಟುಂಬದವರ ಬಳಿ ನಾವು ನೋಡಿರದ ಕೆಲವು ಅಪರೂಪದ ಕಾರುಗಳಿವೆ.

ಆ ಕಾರುಗಳಲ್ಲಿ ಅಂಬಾನಿ ಕುಟುಂಬದವರು ಅಪರೂಪಕ್ಕೆ ಹೊರಬರುತ್ತಾರೆ. ಅಂಬಾನಿ ಕುಟುಂಬವು ಲ್ಯಾಂಬೊರ್ಗಿನಿ ಅವೆಂಟಡಾರ್ ಎಸ್ ಕಾರ್ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆಯಾದರೂ ಅಂಬಾನಿ ಕುಟುಂಬದ ಸದಸ್ಯರು ಯಾರೂ ಈ ಕಾರಿನಲ್ಲಿ ಕಾಣಿಸಿಕೊಂಡಿಲ್ಲ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಅಂಬಾನಿ ಕುಟುಂಬದವರು ಫೆರಾರಿ 812 ಸೂಪರ್‌ಫಾಸ್ಟ್ ಮತ್ತು ಮೆಕ್‌ಲಾರೆನ್ 520 ಎಸ್ ಸ್ಪೈಡರ್ ಕಾರುಗಳನ್ನು ಹೊಂದಿದ್ದಾರೆ. ಮನೀಶ್ ಜೈನ್ ಎಂಬುವವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಈ ಎರಡೂ ಕಾರುಗಳು ಅಂಬಾನಿಯವರ ಮನೆಯೊಳಗೆ ಪ್ರವೇಶಿಸುವುದನ್ನು ಕಾಣಬಹುದು.

ಇದು ಭಾರತದ ಅತ್ಯಂತ ಐಷಾರಾಮಿ ಮನೆಯಾಗಿದೆ. ಈ ಎರಡೂ ಕಾರುಗಳನ್ನು ಎಕ್ಸೊಟಿಕ್ ಕಾರ್ಸ್ ಎಂಬ ಕಂಪನಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ಕಂಪನಿಯು ಮುಖೇಶ್ ಅಂಬಾನಿ ಕುಟುಂಬದ ಒಡೆತನದಲ್ಲಿದೆ. ಮುಖೇಶ್ ಅಂಬಾನಿ ಕುಟುಂಬವು ಹೊಂದಿರುವ ಎಲ್ಲಾ ಕಾರುಗಳನ್ನು ಈ ಕಂಪನಿಯ ಹೆಸರಿನಲ್ಲಿ ರಿಜಿಸ್ಟರ್ ಮಾಡಲಾಗಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮುಖೇಶ್ ಅಂಬಾನಿ ಕುಟುಂಬದ ಬಳಿ ಇರುವ ರೋಲ್ಸ್ ರಾಯ್ಸ್ ಕಲಿನನ್, ಲ್ಯಾಂಬೊರ್ಗಿನಿ ಉರುಸ್ ಹಾಗೂ ಟೆಸ್ಲಾ ಮಾಡೆಲ್ ಎಸ್ ಕಾರುಗಳನ್ನು ಈ ಕಂಪನಿಯ ಹೆಸರಿನಲ್ಲಿ ರಿಜಿಸ್ಟರ್ ಮಾಡಲಾಗಿದೆ. ಈ ಲೇಖನದಲ್ಲಿ ಫೆರಾರಿ 812 ಸೂಪರ್‌ಫಾಸ್ಟ್ ಹಾಗೂ ಮೆಕ್ಲಾರೆನ್ 520 ಎಸ್ ಸ್ಪೈಡರ್ ಕಾರುಗಳ ಬಗೆಗಿನ ವಿವರಗಳನ್ನು ನೋಡೋಣ.

ಫೆರಾರಿ 812 ಸೂಪರ್‌ಫಾಸ್ಟ್
ಫೆರಾರಿ 812 ಸೂಪರ್‌ಫಾಸ್ಟ್ ಕಾರು ಭಾರತದಲ್ಲಿ 2018ರಲ್ಲಿ ಬಿಡುಗಡೆಯಾಯಿತು. ಇದರ ಬೆಲೆ ಎಕ್ಸ್ ಶೋರೂಂ ದರದಂತೆ ರೂ.5.50 ಕೋಟಿಗಳಾಗುತ್ತದೆ. ಮುಖೇಶ್ ಅಂಬಾನಿ ಕುಟುಂಬದ ಬಳಿಯಿರುವ ಫೆರಾರಿ 812 ಸೂಪರ್‌ಫಾಸ್ಟ್ ಕಾರು ಕೆಂಪು ಬಣ್ಣವನ್ನು ಹೊಂದಿದೆ. ಈ ಕಾರು ಅಪರೂಪಕ್ಕೆ ಅವರ ಮನೆಯಿಂದ ಹೊರಬರುತ್ತದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಕಾರು 6.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ವಿ 12 ಎಂಜಿನ್ ಹೊಂದಿದೆ. ಈ ಎಂಜಿನ್ 789 ಬಿಹೆಚ್‌ಪಿ ಪವರ್ ಹಾಗೂ 718 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ 7-ಸ್ಪೀಡಿನ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅಳವಡಿಸಲಾಗಿದೆ. ಈ ಕಾರು ಕೇವಲ 2.9 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಫೆರಾರಿ 812 ಸೂಪರ್‌ಫಾಸ್ಟ್ ಕಾರಿನ ಟಾಪ್ ಸ್ಪೀಡ್ 340 ಕಿ.ಮೀಗಳಾಗಿದೆ. ಈ ಕಾರು ವಿವಿಧ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ವಿಶೇಷವಾಗಿ ಸುರಕ್ಷತೆಯ ದೃಷ್ಟಿಯಿಂದ, ಫೆರಾರಿ 812 ಸೂಪರ್‌ಫಾಸ್ಟ್ ಕಾರು ಮೇರುಕೃತಿಯಾಗಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮೆಕ್ಲಾರೆನ್ 520 ಎಸ್ ಸ್ಪೈಡರ್
ಭಾರತದಲ್ಲಿ ಮೆಕ್‌ಲಾರೆನ್ 520 ಎಸ್ ಸ್ಪೈಡರ್ ಕಾರುಗಳನ್ನು ಹೊಂದಿರುವವರಲ್ಲಿ ಅಂಬಾನಿ ಕುಟುಂಬವು ಸಹ ಸೇರಿದೆ. ಅಂಬಾನಿ ಕುಟುಂಬವು ಈ ಕಾರನ್ನು ಖರೀದಿಸಿದ ನಂತರ ದೀರ್ಘಕಾಲದವರೆಗೆ ಬಳಸದೇ ಇರುವುದು ವರದಿಯಾಗಿದೆ. ಈ ಕಾರಿನಲ್ಲಿ ಅಂಬಾನಿ ಕುಟುಂಬದವರು ಅಪರೂಪಕ್ಕೆ ಓಡಾಡುತ್ತಾರೆ.

ಇದು ಭಾರತದಲ್ಲಿರುವ ಅಪರೂಪದ ಕಾರುಗಳಲ್ಲಿ ಒಂದಾಗಿದೆ. ಅಂಬಾನಿ ಕುಟುಂಬದ ಬಳಿಯಿರುವ ಮೆಕ್‌ಲಾರೆನ್ 520 ಎಸ್ ಸ್ಪೈಡರ್ ಕಾರು ಕಿತ್ತಳೆ ಬಣ್ಣವನ್ನು ಹೊಂದಿದೆ. ಈ ಕಾರಿನಲ್ಲಿ ಅಳವಡಿಸಿರುವ 3.8-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ 8 ಪೆಟ್ರೋಲ್ ಎಂಜಿನ್ 562 ಬಿಹೆಚ್‌ಪಿ ಪವರ್ ಹಾಗೂ 600 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮೆಕ್ಲಾರೆನ್ 520 ಎಸ್ ಸ್ಪೈಡರ್ ಕಾರು ಕೇವಲ 3.2 ಸೆಕೆಂಡುಗಳಲ್ಲಿ 0 - 100 ಕಿಲೋಮೀಟರ್ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರು ಕಾರ್ಬನ್-ಸೆರಾಮಿಕ್ ಬ್ರೇಕ್ ಅನ್ನು ಹೊಂದಿದೆ.


Click it and Unblock the Notifications