ಬಿಡುಗಡೆಯಾಗಲಿದೆ ಹೊಸ ಆಡಿ ಎ8 ಎಲ್ ಕಾರು

ಜರ್ಮನಿಯ ಐಷಾರಾಮಿ ಕಾರು ತಯಾರಕರಾದ ಆಡಿ ಕಂಪನಿಯು ತನ್ನ 2020ರ ಎ8 ಎಲ್ ಕಾರನ್ನು ಮುಂದಿನ ಫೆಬ್ರವರಿ 3ಕ್ಕೆ ಬಿಡುಗಡೆಗೊಳಿಸಲಿದೆ ಎಂದು ಬಹಿರಂಗಪಡಿಸಿದೆ. ಆಡಿ ಎ8 ಎಲ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.5 ಕೋಟಿ ಎಂದು ನಿರೀಕ್ಷಿಬಹುದು.

ಫೆಬ್ರವರಿ 3ಕ್ಕೆ ಬಿಡುಗಡೆಯಾಗಲಿದೆ ಹೊಸ ಆಡಿ ಎ8 ಎಲ್ ಕಾರು

ಕಳೆದ 2019ರಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ತುಂಬಾ ನಿರಾಸೆ ಮೂಡಿಸಿದ ವರ್ಷವಾಗಿದೆ. ಕಳೆದ ಹಲವು ತಿಂಗಳುಗಳ ಕಾಲ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತವಾಗಿರುವುದರಿಂದ ಕಾರುಗಳ ಮಾರಾಟವು ಕಡಿಮೆಯಾಗಿದೆ. ಇದಕ್ಕೆ ಆಡಿ ಕಂಪನಿ ಸಹ ಹೊರತಲ್ಲ. ಆಡಿ ಕಂಪನಿಯ ಕಾರುಗಳ ಮಾರಾಟವು ಕಡಿಮೆಯಾಗಿವೆ. ಆಡಿ ಕಂಪನಿಯು ತನ್ನ 2020ರ ಆಡಿ ಎಲ್‍ ಕಾರ್ ಅನ್ನು ಈ ವರ್ಷದ ಅಂತ್ಯದಲ್ಲಿ ಬಿಡುಗಡೆಗೊಳಿಸಬೇಕಾಗಿತ್ತು. ಆದರೆ ಆಡಿ ಮಾರಾಟದಲ್ಲಿ ಇಳಿಕೆಯಾಗಿರುವುದರಿಂದ ಬಿಡುಗಡೆಗೊಳಿಸುವುದು ತಡವಾಗಿದೆ.

ಫೆಬ್ರವರಿ 3ಕ್ಕೆ ಬಿಡುಗಡೆಯಾಗಲಿದೆ ಹೊಸ ಆಡಿ ಎ8 ಎಲ್ ಕಾರು

ಇದೀಗ 2020ರ ಆಡಿ ಎಲ್8 ಕಾರ್ ಅನ್ನು ಮುಂದಿನ ಫೆಬ್ರವರಿ 3ಕ್ಕೆ ಬಿಡುಗಡೆಗೊಳಿಸಲಾಗುವುದು ಎಂದು ಆಡಿ ಕಂಪನಿಯು ಬಹಿರಂಗಪಡಿಸಿದೆ. ಅಂತರರಾಷ್ಟ್ರೀಯ ಮಾದರಿಯಾದ ನಾಲ್ಕನೇ ತಲೆಮಾರಿನ ಆಡಿ ಎ8 ಎಲ್ ಕಾರು ಲಾಂಗ್ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಫೆಬ್ರವರಿ 3ಕ್ಕೆ ಬಿಡುಗಡೆಯಾಗಲಿದೆ ಹೊಸ ಆಡಿ ಎ8 ಎಲ್ ಕಾರು

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿರುವ ಮಾದರಿಗಿಂತ 37 ಎಂಎಂ ಉದ್ದ ಮತ್ತು 17 ಎಂಎಂ ಎತ್ತರವನ್ನು ಹೊಂದಿದೆ. ಹೊಸ ಆಡಿ ಎ8 ಎಲ್ ಕಾರು ಹಿಂದಿನ ಮಾದರಿಗಿಂತ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಕಾರಿನ ಮುಂಭಾಗ ಗ್ರಿಲ್ ಅನ್ನು ಹೊಂದಿದೆ, ಸ್ಲಿಕ್ ಹೆಚ್‍ಡಿ ಮ್ಯಾಟ್ರಿಕ್ಸ್ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳನ್ನು ಹೊಂದಿದ್ದು, ಇದನ್ನು ಕ್ರೋಮ್‍‍ಗಳಿಂದ ಅಲಂಕರಿಸಲಾಗಿದೆ.

ಫೆಬ್ರವರಿ 3ಕ್ಕೆ ಬಿಡುಗಡೆಯಾಗಲಿದೆ ಹೊಸ ಆಡಿ ಎ8 ಎಲ್ ಕಾರು

ಅಂದವಾಗಿ ವಿನ್ಯಾಸಗೊಳಿಸಲಾದ ಹಿಂಭಾಗದಲ್ಲಿ ಸ್ಲಿಮ್ ಎಲ್‍ಇಡಿ ಟೇಲ್ ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ. ಕಾರಿನ ಇಂಟಿರಿಯರ್‍‍ನಲ್ಲಿ ವರ್ಚುವಲ್ ಕಾಕ್‍‍ಪಿಟ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮಧ್ಯದ ಕನ್ಸೋಲ್‍ನಲ್ಲಿ 10.1 ಇಂಚಿನ ಇನ್ಫೋಟೇನ್‍‍ಮೆಂಟ್ ಟಚ್‍‍ಸ್ಕ್ರೀನ್ ಮತ್ತು ಕ್ಲೈಮೆಂಟ್ ಕಂಟ್ರೂಲ್ ಮತ್ತು ಮಲ್ಟಿಮೀಡಿಯಾ ಸ್ಕ್ರೀನ್ ಅನ್ನು ಹೊಂದಿದೆ.

ಫೆಬ್ರವರಿ 3ಕ್ಕೆ ಬಿಡುಗಡೆಯಾಗಲಿದೆ ಹೊಸ ಆಡಿ ಎ8 ಎಲ್ ಕಾರು

ಹೊಸ ಕಾರಿನಲ್ಲಿ ವಿವಿಧ ರೀತಿಯ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ 3.0 ಲೀಟರ್ ವಿ6 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ. ಇನ್ನೂ 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ.

ಫೆಬ್ರವರಿ 3ಕ್ಕೆ ಬಿಡುಗಡೆಯಾಗಲಿದೆ ಹೊಸ ಆಡಿ ಎ8 ಎಲ್ ಕಾರು

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರು 6.3 ಲೀಟರ್ ಡಬ್ಲ್ಯು 12 ಲಾಂಗಿಟ್ಯೂಡಿನಲ್ ಎಂಜಿನ್‌ ಅನ್ನು ಹೊಂದಿದೆ. ಇದು 12-ಸಿಲಿಂಡರ್ ಎಂಜಿನ್ ಆಗಿದ್ದು ಅದನ್ನು ಡಬ್ಲ್ಯೂ-ಓರಿಯಂಟೇಶನ್‌ನಲ್ಲಿ ಇರಿಸಲಾಗಿದೆ.

ಫೆಬ್ರವರಿ 3ಕ್ಕೆ ಬಿಡುಗಡೆಯಾಗಲಿದೆ ಹೊಸ ಆಡಿ ಎ8 ಎಲ್ ಕಾರು

ಆಡಿ ಕಂಪನಿಯು ತನ್ನ ಪ್ರಮುಖ ಎಸ್‍‍ಯು‍ವಿ ಕ್ಯೂ8 ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಕ್ಯೂ8 ಎಸ್‍‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.33 ಕೋಟಿಗಳಾಗಿದೆ. ಕ್ಯೂ8 ಎಸ್‍ಯು‍ವಿಯು 3.0 ಬಿಎಸ್-6 ಟಿಎಫ್‍‍ಎಸ್‍ಐ 48 ವಿ ಮೈಲ್ಡ್ ಹೈಬ್ರಿಡ್ ಎಂಜಿನ್ ಅನ್ನು ಹೊಂದಿದೆ.

ಫೆಬ್ರವರಿ 3ಕ್ಕೆ ಬಿಡುಗಡೆಯಾಗಲಿದೆ ಹೊಸ ಆಡಿ ಎ8 ಎಲ್ ಕಾರು

2020ರ ಆಡಿ ಎಲ್8 ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು 7 ಸೀರೀಸ್ ಫೇಸ್‍‍ಲಿಫ್ಟ್ , ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್, ಲೆಕ್ಸಕ್ಸ್ ಎಲ್‍ಎಸ್ 500ಹೆಚ್‍ ಮತ್ತು ಎಕ್ಸ್‌ಜೆ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Article Published On: Thursday, January 16, 2020, 8:45 [IST]
English summary
New Audi A8 L launch on February 3. Read in Kannada
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+