ಬಿಡುಗಡೆಯಾಯ್ತು ಐಷಾರಾಮಿ 2020ರ ಆಡಿ ಎ8 ಎಲ್ ಕಾರು
ಜರ್ಮನಿಯ ಐಷಾರಾಮಿ ಕಾರು ತಯಾರಕರಾದ ಆಡಿ ಕಂಪನಿಯು ತನ್ನ 2020ರ ಎ8 ಎಲ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. 2020ರ ಎ8 ಎಲ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.56 ಕೋಟಿಗಳಾಗಿದೆ.

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿರುವ ಮಾದರಿಗಿಂತ ಬಿಡುಗಡೆಯಾಗಿರುವ ಹೊಸ ಆಡಿ ಎ8 ಎಲ್ ಕಾರು 37 ಎಂಎಂ ಉದ್ದ ಮತ್ತು 17 ಎಂಎಂ ಎತ್ತರವನ್ನು ಹೊಂದಿದೆ. ಹೊಸ ಆಡಿ ಎ8 ಎಲ್ ಕಾರು ಹಿಂದಿನ ಮಾದರಿಗಿಂತ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಕಾರಿನ ಮುಂಭಾಗ ಗ್ರಿಲ್ ಅನ್ನು ಹೊಂದಿದೆ, ಸ್ಲಿಕ್ ಹೆಚ್‍ಡಿ ಮ್ಯಾಟ್ರಿಕ್ಸ್ ಎಲ್‍ಇಡಿ ಹೆಡ್‍ಲ್ಯಾಂಪ್‍ಗಳನ್ನು ಹೊಂದಿದ್ದು, ಇದನ್ನು ಕ್ರೋಮ್‍ಗಳಿಂದ ಅಲಂಕರಿಸಲಾಗಿದೆ.

ಅಂದವಾಗಿ ವಿನ್ಯಾಸಗೊಳಿಸಲಾದ ಸ್ಲಿಮ್ ಎಲ್‍ಇಡಿ ಟೇಲ್ ಲ್ಯಾಂಪ್‍ಗಳನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಕಾರಿನ ಇಂಟಿರಿಯರ್‍ನಲ್ಲಿ ವರ್ಚುವಲ್ ಕಾಕ್‍ಪಿಟ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮಧ್ಯದ ಕನ್ಸೋಲ್‍ನಲ್ಲಿ 10.1 ಇಂಚಿನ ಇನ್ಫೋಟೇನ್‍ಮೆಂಟ್ ಟಚ್‍ಸ್ಕ್ರೀನ್ ಮತ್ತು ಕ್ಲೈಮೆಂಟ್ ಕಂಟ್ರೂಲ್ ಮತ್ತು ಮಲ್ಟಿಮೀಡಿಯಾ ಸ್ಕ್ರೀನ್ ಅನ್ನು ಹೊಂದಿದೆ.

ಹೊಸ ಆಡಿ ಎ8 ಎಲ್ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ 8 ಏರ್‍ಬ್ಯಾಗ್‍ಗಳು, ಇಬಿಡಿಯೊಂದಿಗೆ ಎಬಿಎಸ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‍ಗಳು ಮತ್ತು 360 ಡಿಗ್ರಿ ಕ್ಯಾಮೆರಾ ಜೊತೆಯಲ್ಲಿ 3ಡಿ ವ್ಯೂ ಅನ್ನು ಹೊಂದಿದೆ.

ಜರ್ಮನ್ ಮಾರ್ಕ್‍ನ ಪ್ರಮುಖ ಸೆಡಾನ್ ಆಗಿರುವುದರಿಂದ ಆಡಿ ಎ8 ಎಲ್ ಕಾರಿನ ರೇರ್ ಸೀಟಿನಲ್ಲಿ ಮನರಂಜನೆಗಾಗಿ ಡ್ಯುಯಲ್ ಟಚ್‍ಸ್ಕ್ರೀನ್ ಅನ್ನು ಅಳವಡಿಸಳಾಗಿದೆ. ಫ್ರಂಟ್ ಸೀಟಿನಲ್ಲಿ ಫುಟ್ ಮಸಾಜರ್‍ಗಳನ್ನು ಹೊಂದಿದೆ. ಆಡಿ ಎ8 ಎಲ್ ಕಾರು ಲಾಂಗ್ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಹೊಸ ಆಡಿ ಎ8 ಎಲ್ ಕಾರು 3.0 ಲೀಟರ್ ವಿ6 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 340 ಬಿಹೆಚ್‍ಪಿ ಪವರ್ ತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 8 ಸ್ಫೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಹೊಸ ಆಡಿ ಎ8 ಎಲ್ ಕಾರು ಕೇವಲ 5.7 ಸೆಕೆಂಡುಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ.

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರು 6.3 ಲೀಟರ್ ಡಬ್ಲ್ಯು 12 ಲಾಂಗಿಟ್ಯೂಡಿನಲ್ ಎಂಜಿನ್ ಅನ್ನು ಹೊಂದಿದೆ. ಇದು 12-ಸಿಲಿಂಡರ್ ಎಂಜಿನ್ ಆಗಿದ್ದು ಅದನ್ನು ಡಬ್ಲ್ಯೂ-ಓರಿಯಂಟೇಶನ್‌ನಲ್ಲಿ ಇರಿಸಲಾಗಿದೆ.

ಕಳೆದ 2019ರಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ತುಂಬಾ ನಿರಾಸೆ ಮೂಡಿಸಿದ ವರ್ಷವಾಗಿದೆ. ಕಳೆದ ಹಲವು ತಿಂಗಳುಗಳ ಕಾಲ ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತವಾಗಿರುವುದರಿಂದ ಕಾರುಗಳ ಮಾರಾಟವು ಕಡಿಮೆಯಾಗಿದೆ. ಇದಕ್ಕೆ ಆಡಿ ಕಂಪನಿ ಸಹ ಹೊರತಲ್ಲ. ಆಡಿ ಕಂಪನಿಯ ಕಾರುಗಳ ಮಾರಾಟವು ಕಡಿಮೆಯಾಗಿವೆ. ಆಡಿ ಕಂಪನಿಯು ತನ್ನ 2020ರ ಆಡಿ ಎಲ್ ಕಾರ್ ಅನ್ನು ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಗೊಳಿಸಬೇಕಾಗಿತ್ತು.

ಆದರೆ ಆಡಿ ಮಾರಾಟದಲ್ಲಿ ಇಳಿಕೆಯಾಗಿರುವುದರಿಂದ ಬಿಡುಗಡೆಗೊಳಿಸುವುದು ತಡವಾಗಿದೆ. ಇದೀಗ 2020ರ ಆಡಿ ಎಲ್8 ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. 2020ರ ಆಡಿ ಎಲ್8 ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 7 ಸೀರೀಸ್ ಫೇಸ್‍ಲಿಫ್ಟ್, ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್, ಲೆಕ್ಸಕ್ಸ್ ಎಲ್‍ಎಸ್ 500ಹೆಚ್ ಮತ್ತು ಎಕ್ಸ್‌ಜೆ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.


Click it and Unblock the Notifications