ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಆಡಿ ತನ್ನ ಹೊಸ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್‌ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.94 ಕೋಟಿಗಳಾಗಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್

ಆಡಿ ಕಂಪನಿಯು ಆರ್‍ಎಸ್7 ಸ್ಪೋರ್ಟ್‌ಬ್ಯಾಕ್‌ಗಾಗಿ ಅಧಿಕೃತವಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದೆ. ಈ ಆಡಿ ಆರ್‍ಎಸ್7 ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಆನ್ ಲೈನ್ ಅಥವಾ ಡೀಲರ್ ಬಳಿ ಟೋಕನ್ ಮೊತ್ತ ರೂ.10 ಲಕ್ಷ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಆರ್‍ಎಸ್ 7 ಕಾರಿನಲ್ಲಿ 4.0-ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್

ಈ ಎಂಜಿನ್ ಅನ್ನು ಮೈಲ್ಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 592 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಹಿಂದಿನ ಮಾದರಿ 560 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತಿತ್ತು.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್

ಹೊಸ ಆರ್‍ಎಸ್7 ಕಾರಿನ ಎಂಜಿನ್ ನೊಂದಿಗೆ 8-ಸ್ಪೀಡ್ ಟಾರ್ಕ್ ಕರ್ನವಾಟರ್ ಅನ್ನು ಜೋಡಿಸಲಾಗಿದೆ. ಬ್ರ್ಯಾಂಡ್‌ನ ಆಡಿ ಕ್ವಾಟ್ರೋ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಮೂಲಕ ಎಲ್ಲಾ ಟಯರುಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್

ಈ ಆಡಿ ಆರ್‍ಎಸ್7 ಮಾದರಿಯು ಕೇವಲ 3.6 ಸೆಕೆಂಡುಗಳಲ್ಲಿ 100 ಕಿ.ಮೀ ಕ್ರಮಿಸುತ್ತದೆ. ಈ ಹೊಸ ಕಾರಿನಲ್ಲಿರುವ ಲೋ ಸಿಲೂಯೆಟ್, ಬಾನೆಟ್, ಮುಂಭಾಗದ ಡೋರುಗಳು ಮತ್ತು ಅದರ ಬೂಟ್ ಲೀಡ್ ಗಳು ಸ್ಟ್ಯಾಂಡರ್ಡ್ ಆಡಿ ಎ7 ಮಾದರಿಗಳಂತಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್

ಆರ್‍ಎಸ್7 ಕಾರು ದೊಡ್ಡ ಏರ್ ಟೆಕ್ ಮತ್ತು ಬ್ಲ್ಯಾಕ್ ಹನಿಕಾಂಬ್ ನೊಂದಿಗೆ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ. ಹೊಸ ಆರ್‍ಎಸ್7 ಕಾರಿನ ಹಿಂಭಾಗದ ಬಂಪರ್ ನೊಂದಿಗೆ ದೊಡ್ಡ ಡಿಫ್ಯೂಸರ್ ಮತ್ತು 21 ಇಂಚಿನ ರಿಮ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಬ್ರ್ಯಾಂಡ್ 22 ಇಂಚಿನ ರಿಮ್‌ಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಒಂದು ಆಯ್ಕೆಯಾಗಿ ನೀಡುತ್ತದೆ.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್

ಹೊಸ ಆಡಿ ಆರ್‍ಎಸ್7 ಕಾರಿನ ಒಳಾಂಗಣದ ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್ ಟಚ್‌ಸ್ಕ್ರೀನ್ ವಿನ್ಯಾಸ, ಅಲ್ಕಾಂಟರಾ ಅಪ್ಹೋಲ್ಸ್ಟರಿ ಮತ್ತು ದೊಡ್ಡ ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದಿರುವ ಆರ್ಎಸ್ ನಿರ್ದಿಷ್ಟ ಸ್ಟೀಯರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್

ಆಡಿ ಆರ್‍ಎಸ್7 ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಪೋರ್ಟ್ಸ್ ಸೆಡಾನ್ ಗಳಲ್ಲಿ ಒಂದಾಗಿದೆ. ಹೊಸ ಆಡಿ ಆರ್‍ಎಸ್7 ಕಾರು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಸ್ಪೋರ್ಟ್ಸ್ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೆವೆ.

ಭಾರತದಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಆಡಿ ಆರ್‍ಎಸ್7 ಸ್ಪೋರ್ಟ್‌ಬ್ಯಾಕ್

ಈ ಹೊಸ ಆಡಿ ಆರ್‍ಎಸ್7 ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಎಎಂಜಿ ಇ63 ಮತ್ತು ಬಿಎಂಡಬ್ಲ್ಯು ಎಂ5 ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಈ ಆಡಿ ಆರ್‍ಎಸ್7 ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ.

More from DriveSpark

Article Published On: Thursday, July 16, 2020, 13:51 [IST]
English summary
Audi RS7 Sportback Launched In India At Rs 1.94 Crore. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+