ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಬಿಎಂಡಬ್ಲ್ಯೂ ಇಂಡಿಯಾ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಹೊಸ ತಲೆಮಾರಿನ ಎಕ್ಸ್6 ಎಸ್‍ಯುವಿಯ ಅಧಿಕೃತ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಮೂರನೇ ತಲೆಮಾರಿನ ಈ ಎಸ್‍ಯುವಿ-ಕೂಪ್ ಭಾರತದಲ್ಲಿ ಈ ತಿಂಗಳ 11ರಂದು ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಈ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿಯ ಬುಕ್ಕಿಂಗ್ ಅನ್ನು ಕಳೆದ ಜನವರಿ ತಿಂಗಳಲ್ಲಿ ಪ್ರಾರಂಭಿಸಿದ್ದರು. ಭಾರತದಲ್ಲಿ ಕರೋನಾ ಭೀತಿಯಿಂದ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿತ್ತು. ಈ ಕಾರಣದಿಂದಾಗಿ ಬಿಎಂಡಬ್ಲ್ಯೂ ಎಸ್‍ಯುವಿಯ ಬಿಡುಗಡೆಯು ವಿಳಂಬವಾಗಿದೆ. ಈ ಮೂರನೇ ತಲೆಮಾರಿನ ಬಿಎಂಡಬ್ಲ್ಯೂ ಎಕ್ಸ್6 ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ಒಂದು ವರ್ಷದ ಹಿಂದೆ ಬಿಡುಗಡೆಗೊಳಿಸಿದ್ದರು. ಭಾರತಕ್ಕೆ ಎಕ್ಸ್6 ಎಸ್‍ಯುವಿಯನ್ನು ಸಿಬಿಯು ಮೂಲಕ ತರಲಾಗುತ್ತದೆ.

ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿಯು ಎಕ್ಸ್‌ಲೈನ್ ಮತ್ತು ಎಂ ಸ್ಪೋರ್ಟ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಮೂರನೇ ತಲೆಮಾರಿನ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿಯನ್ನು ಹಿಂದಿನ ಮಾದರಿಗೆ ಹೋಲಿಸಿದರೆ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಹೊಸ ಬಿಎಂಡಬ್ಲ್ಯೂ ಎಕ್ಸ್6 ಬ್ರ್ಯಾಂಡ್ ನ ಡಬಲ್-ಕಿಡ್ನಿ ಗ್ರಿಲ್ ಅನ್ನು ಹೊಂದಿದೆ. ಬಿಎಂಡಬ್ಲ್ಯೂನ ಲೇಸರ್ ಲೈಟ್ ನೊಂದಿಗೆ ಹೊಸ ಅಡಾಪ್ಟಿವ್ ಎಲ್ಇಡಿ ಹೆಡ್ ಲೈಟ್ ಗಳನ್ನು ಹೊಂದಿದೆ. ಈ ಬಿಎಂಡಬ್ಲ್ಯೂ ಎಕ್ಸ್6 ಮರುರೂಪಿಸಿದ ಟೈಲ್ ಲೈಟ್ ಗಳು ಮತ್ತು ಡ್ಯುಯಲ್ ಎಕ್ಸಾಸ್ಟ್ ಅನ್ನು ಅಳವಡಿಸಿದ್ದಾರೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಇದು ಕೂಪ್ ಎಸ್‍ಯುವಿಯು ಅದರೂ ಸಿಲೂಯೆಟ್ ಅನ್ನು ಉಳಿಸಿಕೊಳ್ಳಲಾಗಿದೆ.

ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿಯ ಇಂಟಿರಿಯರ್ ನಲ್ಲಿ ವೆರ್ನಾಸ್ಕಾ ಲೆದರ್ ಅಪ್ಹೋಲ್ಸ್ಟರಿಯನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ, ಮಸಾಜ್ ಫಂಕ್ಷನ್‌ನೊಂದಿಗೆ ಪವರ್-ಚಾಲಿತ ಸೀಟುಗಳು, ನಾಲ್ಕು ಮಾದರಿಯ ಕ್ಲೈಮೇಂಟ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಇದರೊಂದಿಗೆ ಇಂಟಿರಿಯರ್ ನಲ್ಲಿ ವಿಲ್ಕಿನ್ಸ್‌ನ ಪ್ರೀಮಿಯಂ ಆಡಿಯೊ ಸಿಸ್ಟಂ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಮತ್ತು ಬ್ರ್ಯಾಂಡ್ ನ ಇತ್ತೀಚಿನ ಕನೆಕ್ಟಿವಿಟಿ ತಂತ್ರಜ್ಞಾನವಿರುವ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸಹ ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಬಿಎಂಡಬ್ಲ್ಯೂ ಎಕ್ಸ್6 ಮಾದರಿಯಲ್ಲಿ ಒಟ್ಟು ನಾಲ್ಕು ಮಾದರಿಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಬಿಎಂಡಬ್ಲ್ಯೂ ಎಕ್ಸ್6 ಮಾದರಿಯಲ್ಲಿ ಎಕ್ಸ್‌ಡ್ರೈವ್ 40 ಐ 3.0-ಲೀಟರ್, ಆರು ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿದೆ.

MOST READ: ಹೊಸ ಸ್ಕೋಡಾ ವಿಷನ್ ಇನ್ ಎಸ್‍‍‍ಯುವಿಯ ಪೇಟೆಂಟ್ ಚಿತ್ರ ಬಹಿರಂಗ

ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಈ ಎಂಜಿನ್ 340 ಹೆಚ್‌ಪಿ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8 ಸ್ಪೀಡಿನ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ಟಯರುಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಮಾದರಿಯಲ್ಲಿ ಎಂ 50 ಐ' 4.4-ಲೀಟರ್ ವಿ 8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 400 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು 3.0-ಲೀಟರ್ ಆರು ಸಿಲಿಂಡರ್ ಡೀಸೆಲ್ ಮೋಟರ್ ಮತ್ತು 'ಎಕ್ಸ್‌ಡ್ರೈವ್ 30 ಡಿ' 3.0 ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಕೂಡ ಹೊಂದಿದೆ,

ಬಿಡುಗಡೆಯಾಗಲಿದೆ ಹೊಸ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯಲ್ಲಿ ಎಕ್ಸ್‌ಡ್ರೈವ್ 30 ಡಿ ಡೀಸೆಲ್ ಎಂಜಿನ್ ಜೊತೆಗೆ ಎಕ್ಸ್‌ಡ್ರೈವ್ 40 ಐ 'ನೀಡುವ ಸಾಧ್ಯತೆಯಿದೆ. ಭಾರತದಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಜಿಎಲ್ಇ ಕೂಪೆ ಮತ್ತು ಆಡಿ ಕ್ಯೂ8 ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

More from DriveSpark

Article Published On: Tuesday, June 9, 2020, 12:35 [IST]
English summary
New BMW X6 India Launch On June 11. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+