ಎಕ್ಸ್7 ಎಸ್‌ಯುವಿ ಆವೃತ್ತಿಯಲ್ಲಿ ಎಂಟ್ರಿ ಲೆವಲ್ ವೆರಿಯೆಂಟ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
2019ರ ಜುಲೈನಲ್ಲಿ ಮೊದಲ ಬಾರಿಗೆ ಎಕ್ಸ್7 ಎಸ್‌ಯುವಿ ಬಿಡುಗಡೆ ಮಾಡಿದ್ದ ಬಿಎಂಡಬ್ಲ್ಯು ಕಂಪನಿಯು ಇದೀಗ ಗ್ರಾಹಕರ ಬೇಡಿಕೆ ಮೇರೆಗೆ ಮತ್ತೊಂದು ಬೆಸ್ ವೆರಿಯೆಂಟ್ ಪರಿಚಯಿಸಿದ್ದು, 2020ರ ಆವೃತ್ತಿಯನ್ನು ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ.

ಎಕ್ಸ್7 ಆವೃತ್ತಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಡ್ರೈವ್30ಡಿ ಡಿಪಿಇ , ಎಕ್ಸ್‌ಡ್ರೈವ್30ಡಿ ಡಿಪಿಇ ಸಿಗ್ನೆಚೆರ್ ಮತ್ತು ಎಕ್ಸ್‌ಡ್ರೈವ್40ಐ ವೆರಿಯೆಂಟ್ ಖರೀದಿ ಮಾಡಬಹುದಾಗಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 92.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.1.07 ಕೋಟಿ ಬೆಲೆ ಪಡೆದುಕೊಂಡಿದೆ. ಹೊಸದಾಗಿ ಪರಿಚಯಿಸಿರುವ ಎಕ್ಸ್‌ಡ್ರೈವ್30ಡಿ ಡಿಪಿಇ ಮಾದರಿಯು ಆರಂಭಿಕ ಆವೃತ್ತಿಯಾಗಿ ಮಾರಾಟಗೊಳ್ಳಲಿದ್ದು, ಬೆಲೆ ಕಡಿತಗೊಳಿಸುವುದಕ್ಕಾಗಿ ಎಂಜಿನ್ ಹೊರತುಪಡಿಸಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಕಡಿತಗೊಳಿಸಲಾಗಿದೆ.

ಬಿಎಂಡಬ್ಲ್ಯು ನಿರ್ಮಾಣದ ಮೊದಲ 7 ಸೀಟರ್ ಎಸ್‌ಯುವಿ ಮಾದರಿಯಾಗಿರುವ ಎಕ್ಸ್7 ಕಾರು ಹಲವು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಡಿಸೈನ್ ಫ್ಯೂರ್ ಎಕ್ಸ್‌ಲೆನ್ಸ್ ತಂತ್ರಜ್ಞಾನ ವಿನ್ಯಾಸದಡಿ ನಿರ್ಮಾಣಗೊಳಿಸಲಾಗಿದೆ.

ಜನಪ್ರಿಯ ಎಕ್ಸ್ ರೇಂಜ್ ಎಸ್‌ಯುವಿ ಕಾರುಗಳ ಸರಣಿಯಲ್ಲಿ ಇದೇ ಮೊದಲ ಬಾರಿಗೆ 7 ಸೀಟರ್ ಆಸನವುಳ್ಳ ಎಕ್ಸ್7 ಕಾರು ಮಾದರಿಯನ್ನು ಹೊರತಂದಿರುವ ಬಿಎಂಡಬ್ಲ್ಯು ಕಂಪನಿಯು ಐಷಾರಾಮಿ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.

ಎಕ್ಸ್‌ಡ್ರೈವ್30ಡಿ ಡಿಪಿಇ, ಎಕ್ಸ್‌ಡ್ರೈವ್ 40ಐ ಮಾದರಿಯು ಪೆಟ್ರೋಲ್ ಎಂಜಿನ್‌ನಲ್ಲಿ ಮತ್ತು ಎಕ್ಸ್‌ಡ್ರೈವ್ 30ಡಿ ಡಿಪಿಇ ಸಿಗ್ನಿಚೆರ್ ಮಾದರಿಯು ಡೀಸೆಲ್ ಎಂಜಿನ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಈ ಹಿಂದೆ ಎಕ್ಸ್‌ಡ್ರೈವ್ 30ಡಿ ಡಿಪಿಇ ಸಿಗ್ನಿಚೆರ್ ಮತ್ತು ಎಕ್ಸ್‌ಡ್ರೈವ್40ಐ ವೆರಿಯೆಂಟ್‌ಗಳನ್ನು ಒಂದೇ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಹೊಸ ಆವೃತ್ತಿಯೊಂದಿಗೆ ಕೆಲವು ತಾಂತ್ರಿಕ ಅಂಶಗಳನ್ನು ಬದಲಾವಣೆಗೊಳಿಸಲಾಗಿದ್ದು, ಎಕ್ಸ್‌ಡ್ರೈವ್ 30ಡಿ ಡಿಪಿಇ ಸಿಗ್ನಿಚೆರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.1.03 ಕೋಟಿ ಮತ್ತು ಎಕ್ಸ್‌ಡ್ರೈವ್40ಐ ಮಾದರಿಯು ರೂ. 1.07 ಕೋಟಿ ಬೆಲೆ ಹೊಂದಿವೆ.

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್
ಎಕ್ಸ್7 ಕಾರಿನಲ್ಲಿ ಪೆಟ್ರೋಲ್ ಮಾದರಿಯು 3-ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಟ್ವಿನ್ ಟರ್ಬೋ ಎಂಜಿನ್ ಹೊಂದಿದ್ದರೆ ಡೀಸೆಲ್ ಮಾದರಿಯು ಕೂಡಾ 3.0-ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಟ್ವಿನ್ ಟರ್ಬೋ ಎಂಜಿನ್ ಹೊಂದಿದೆ.

ಇದರಲ್ಲಿ ಪೆಟ್ರೋಲ್ ಮಾದರಿಯು 335-ಬಿಎಚ್‌ಪಿ, 450-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡಿಸೇಲ್ ಮಾದರಿಯು 260-ಬಿಎಚ್‌ಪಿ, 620-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಮೂರು ಕಾರು ಮಾದರಿಗಳಲ್ಲೂ ಸ್ಟ್ಯಾಂಡರ್ಡ್ ಆಗಿ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನ ನೀಡಲಾಗಿದೆ.

ಇನ್ನು ಎಕ್ಸ್7 ಕಾರು 5151-ಎಂಎಂ ಉದ್ದ, 1805-ಎಂಎಂ ಎತ್ತರ, 2000-ಎಂಎಂ ಅಗಲ ಮತ್ತು 3105-ಎಂಎಂ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್6 ಕಾರಿಗಿಂತಲೂ 9-ಎಎಂ ಹೆಚ್ಚಿನ ಉದ್ದ ಮತ್ತು 3 ಇಂಚಿನಷ್ಟು ಕಡಿಮೆ ವ್ಹೀಲ್‍ಬೇಸ್ ಅನ್ನು ಪಡೆದುಕೊಂಡಿದೆ.

ಎಕ್ಸ್ ಸ್ಯಾಂಡ್, ಎಕ್ಸ್ ಗ್ರ್ಯಾವೆಲ್, ಎಕ್ಸ್ ರಾಕ್ಸ್ ಮತ್ತು ಎಕ್ಸ್ ಸ್ನೋ ಎನ್ನುವ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುವ ಹೊಸ ಕಾರು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಆಫ್ ರೋಡ್ ಕೌಶಲ್ಯ ಪ್ರದರ್ಶನದಲ್ಲೂ ಸಾಕಷ್ಟು ಗಮನಸೆಳೆಯಲಿವೆ.

ಹೊಸ ಕಾರು ಮುಂಭಾಗದಲ್ಲಿ ಚೌಕಾಕಾರದ ಮತ್ತು ಉದ್ದನೆಯ ಸಿಗ್ನೇಚರ್ ಗ್ರೀಲ್ ಅನ್ನು ಪಡೆದುಕೊಂಡಿರಲಿದ್ದು, ಬಿಎಂಡಬ್ಲ್ಯು ನಿರ್ಮಾಣದ ಬೇರೆ ಯಾವುದೇ ಕಾರಿಗೂ ನೀಡಲಾಗದ ಗ್ರೀಲ್ ಅನ್ನು ಇದರಲ್ಲಿ ಅಳವಡಿಸಲಾಗಿದ್ದು, ಹೊಸ ಕಾರು ಮಾದರಿಗಳಲ್ಲಿ ಲೇಜರ್ ಟೆಕ್ ಹೆಡ್‍ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ.

ಈ ಲೇಜರ್ ಟೆಕ್ ಹೆಡ್‍ಲ್ಯಾಂಪ್‍ಗಳು ಸಾಧಾರಣ ಎಲ್ಇಡಿ ಹೆಡ್‍ಲ್ಯಾಂಪ್‍ಗಳಿಗಿಂತಲೂ ಎರಡು ಪಟ್ಟು ಅಧಿಕ ಬೆಳಕನ್ನು ಹೊರಸೂಸಬಲ್ಲ ಗುಣಹೊಂದಿದ್ದು, ಸುರಕ್ಷತೆಗೂ ಎಕ್ಸ್7 ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.

ಹೊಸ ಕಾರಿನಲ್ಲಿ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಡೈನಾಮಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಕಾರ್ನರಿಂಗ್ ಬ್ರೇಕಿಂಗ್ ಕಂಟ್ರೊಲ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಕ್ರ್ಯಾಶ್ ಸೆನ್ಸಾರ್, ISOFIX ಚೈಲ್ಡ್ ಸೀಟ್ ಮೌಂಟ್, ಎಮರ್ಜೆನ್ಸಿ ವೀಲ್ಹ್ ಮತ್ತು 7 ಏರ್ ಬ್ಯಾಗ್‌ಗಳನ್ನು ಪಡೆದುಕೊಂಡಿದೆ.


Click it and Unblock the Notifications








