ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ನಂತರ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಂಪನಿಯು ಎರಡನೇ ಸ್ಥಾನದಲ್ಲಿದೆ. ಈ ಕಾರು ತಯಾರಕ ಕಂಪನಿಯು ಹಲವಾರು ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ.

ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

ಹ್ಯುಂಡೈ ಕಂಪನಿಯ ಕ್ರೆಟಾ ಎಸ್‍ಯುವಿಯು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಹೊಸ ಮಾಲಿನ್ಯ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಬಿ‍ಎಸ್ 6 ಎಂಜಿನ್‍ನೊಂದಿಗೆ ಬಿಡುಗಡೆಗೊಳಿಸುತ್ತಿವೆ.

ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

ಹ್ಯುಂಡೈ ಕಂಪನಿಯೂ ಸಹ ತನ್ನ ಜನಪ್ರಿಯ ಕ್ರೆಟಾ ಎಸ್‍‍ಯುವಿಯನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಅಪ್‍ಗ್ರೇಡ್‍‍ಗೊಳಿಸಿ ಬಿಡುಗಡೆಗೊಳಿಸುತ್ತಿದೆ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಹೊಸ ಕ್ರೆಟಾ ಎಸ್‍‍ಯುವಿಯನ್ನು ಪ್ರದರ್ಶಿಸಲಾಗಿತ್ತು.

ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

ಹೊಸ ಎಸ್‍‍ಯುವಿಯ ವಿನ್ಯಾಸದಲ್ಲಿ ಬದಲಾವಣೆ, ಅಡ್ವಾನ್ಸ್ ಫೀಚರ್ ಹಾಗೂ ಹೊಸ ಎಂಜಿನ್ ಆಯ್ಕೆ ಸೇರಿದಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಕ್ರೆಟಾ ಎಸ್‍‍ಯುವಿಯು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

ಹೊಸ ಹ್ಯುಂಡೈ ಕ್ರೆಟಾ ಎಸ್‍‍ಯುವಿಯನ್ನು ಇದೇ ತಿಂಗಳ 17ರಂದು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ಎಸ್‍‍ಯುವಿಯ ಬುಕ್ಕಿಂಗ್‍‍ಗಳನ್ನು ಆರಂಭಿಸಲಾಗಿದೆ. ಯಾವುದೇ ಹ್ಯುಂಡೈ ಶೋರೂಂನಲ್ಲಿ ರೂ.21,000 ಪಾವತಿಸಿ ಈ ಎಸ್‍‍ಯುವಿಯನ್ನು ಬುಕ್ಕಿಂಗ್ ಮಾಡಬಹುದಾಗಿದೆ.

ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

ಹ್ಯುಂಡೈ ಕ್ರೆಟಾ ತನ್ನ ಕಂಪನಿಯ ಅಂಗಸಂಸ್ಥೆಯಾದ ಕಿಯಾ ಮೋಟಾರ್ಸ್‍‍ನ ಸೆಲ್ಟೋಸ್‍‍ನೊಂದಿಗೆ ಕೆಲವೊಂದು ಬಿಕ್ಕಟ್ಟನ್ನು ಎದುರಿಸುತ್ತಿದೆ. ಕ್ರೆಟಾ ಎಸ್‍‍ಯುವಿಯು ಸೆಲ್ಟೋಸ್‍‍ನಲ್ಲಿರುವಂತಹ ಡೇ ಲೈಟ್, ಟೇಲ್‍‍ಲೈಟ್, ಎಲ್‍ಇ‍‍ಡಿ ಲೈಟ್‍‍ಗಳನ್ನು ಹೊಂದಿರುವ ಸ್ಲ್ಪಿಟ್ ಹೆಡ್‍‍ಲೈಟ್ ಕ್ಲಸ್ಟರ್‍‍ಗಳನ್ನು ಸೆಲ್ಟೋಸ್‍‍ನಿಂದ ಪಡೆಯಲಿದೆ.

ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

ಇದರ ಜೊತೆಗೆ ಕಿಯಾ ಸೆಲ್ಟೋಸ್ ಎಸ್‍‍ಯುವಿಯಲ್ಲಿರುವಂತಹ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು ಬಿ‍ಎಸ್ 6 ನಿಯಮಗಳಿಗೆ ಹೊಂದಿಕೊಳ್ಳುವಂತೆ ಅಭಿವೃದ್ಧಿಪಡಿಸಲಾಗಿದೆ. ಕ್ರೆಟಾದಲ್ಲಿರುವ 1.5 ಲೀಟರಿನ ಪೆಟ್ರೋಲ್ ಎಂಜಿನ್ 113 ಬಿ‍‍ಹೆಚ್‍‍ಪಿ ಪವರ್ ಹಾಗೂ 144 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

1.5 ಲೀಟರಿನ ಡೀಸೆಲ್ ಎಂಜಿನ್ 113 ಬಿ‍ಹೆಚ್‍‍ಪಿ ಪವರ್ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಮುಂಬರುವ ದಿನಗಳಲ್ಲಿ ಕಿಯಾ ಸೆಲ್ಟೋಸ್‍‍ನಲ್ಲಿರುವಂತಹ 1.4 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುವುದು. ಈ ಎಂಜಿನ್ 138 ಬಿ‍‍ಹೆಚ್‍‍ಪಿ ಪವರ್ ಹಾಗೂ 242 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

ಈ ಮೂರು ವಿಧದ ಎಂಜಿನ್‍‍ಗಳಲ್ಲೂ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳನ್ನು ನೀಡಲಾಗುವುದು. ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಎಸ್‍‍ಯುವಿಯಲ್ಲಿ ಹೊಸ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಲಾಗುವುದು.

ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

ಈ ಸಿಸ್ಟಂನಲ್ಲಿ ವಾಯ್ಸ್ ಕಮಾಂಡ್ ಹಾಗೂ ಬ್ಲೂಲಿಂಕ್ ಕನೆಕ್ಟಿವಿಟಿ ಫೀಚರ್‍‍ಗಳಿರಲಿವೆ. ಈ ಎಸ್‍‍ಯುವಿಯಲ್ಲಿರುವ ಸನ್‍‍ರೂಫ್ ವಾಯ್ಸ್ ಕಮಾಂಡ್‍‍ನಿಂದ ಚಲಿಸಲಿದೆ. ಆಟೋಮ್ಯಾಟಿಕ್ ಮಾದರಿಗಳಲ್ಲಿ ಪ್ಯಾಡಲ್ ಶಿಫ್ಟ್, ಡ್ಯುಯಲ್ ಹೋಸ್ ಚಿಮ್ನಿ, ರಿಮೋಟ್ ಎಂಜಿನ್ ಸ್ಟಾರ್ಟ್ ಅಪ್, ಕ್ರೂಸ್ ಕಂಟ್ರೋಲ್, ಏರ್ ಪ್ಯೂರಿಫೈಯರ್ ಹಾಗೂ ವೈರ್‍‍ಲೆಸ್ ಚಾರ್ಜರ್‍‍ಗಳಿರಲಿವೆ.

ಶುರುವಾಯ್ತು ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾ ಬುಕ್ಕಿಂಗ್

ಹೊಸ ಕ್ರೆಟಾ ಎಸ್‍‍ಯುವಿಯ ಬೆಲೆಯು ಮಾರುಕಟ್ಟೆಯಲ್ಲಿರುವ ಕ್ರೆಟಾ ಎಸ್‍‍ಯುವಿಯ ಬೆಲೆಗಿಂತ ಹೆಚ್ಚಾಗಿರಲಿದೆ. ಈ ಹೊಸ ಎಸ್‍‍ಯುವಿಯು ಬಿಡುಗಡೆಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಕಾರುಗಳಿಗೆ ಪೈಪೋಟಿ ನೀಡಲಿದೆ.

Article Published On: Monday, March 2, 2020, 13:49 [IST]
English summary
Bookings started for new Hyundai Creta. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+