ಹೊಸ ಜನಪ್ರಿಯ ಎಸ್‌ಯುವಿಗಳ ಬಿಡುಗಡೆ ಮುಂದೂಡಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಎಕ್ಸ್‌ಯುವಿ 500 ಮತ್ತು ಸ್ಕಾರ್ಪಿಯೋ ಎಸ್‍ಯುವಿಗಳ ಬಿಡುಗಡೆಯನ್ನು ಮುಂದೂಡಲಾಗಿದೆ. ಹೊಸ ತಲೆಮಾರಿನ ಎಕ್ಸ್‌ಯುವಿ 500 ಮತ್ತು ಸ್ಕಾರ್ಪಿಯೋ ಎಸ್‍ಯುವಿಗಳ ಬಿಡುಗಡೆಯನ್ನು ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಲಾಗಿದೆ.

ಹೊಸ ಜನಪ್ರಿಯ ಎಸ್‌ಯುವಿಗಳ ಬಿಡುಗಡೆ ಮುಂದೂಡಿದ ಮಹೀಂದ್ರಾ

ಮಹೀಂದ್ರಾ ಸ್ಕಾರ್ಪಿಯೋ ಬಹಳ ದೀರ್ಘಕಾಲದಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಭಾರತೀಯ ಮಾರುಕಟ್ಟೆಯ ಜನಪ್ರಿಯ ಎಸ್‍ಯುವಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕೂಡ ಒಂದಾಗಿದೆ. ಮಹೀಂದ್ರಾ ಕಂಪನಿಯ ಸರಣಿಯ ಕಾರು ಮಾರಾಟದಲ್ಲಿ ಸ್ಕಾರ್ಪಿಯೋ ಎಸ್‍‍ಯುವಿಯ ಕೊಡುಗೆಯು ದೊಡ್ಡದು. ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 2002ರಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದ್ದರು.

ಹೊಸ ಜನಪ್ರಿಯ ಎಸ್‌ಯುವಿಗಳ ಬಿಡುಗಡೆ ಮುಂದೂಡಿದ ಮಹೀಂದ್ರಾ

ಹೊಸ ಸ್ಕಾರ್ಪಿಯೋ ಎಸ್‍ಯುವಿಗೆ ಇನ್ನಷ್ಟು ಶಕ್ತಿ ತುಂಬಲು ಮಹೀಂದ್ರಾ ಹೊಚ್ಚ ಹೊಸ 2.0-ಲೀಟರ್ ಟರ್ಬೊ-ಡೀಸೆಲ್ ಎಂಜಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಗಳು ಪ್ರಕಟವಾಗಿದೆ. ಹೊಸ ಸ್ಕಾರ್ಪಿಯೋದಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ. ಇದರೊಂದಿಗೆ 4ಡಬ್ಲ್ಯೂಡಿ ಸಿಸ್ಟಂ ಅನ್ನು ಹೊಂದಿರಲಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಜನಪ್ರಿಯ ಎಸ್‌ಯುವಿಗಳ ಬಿಡುಗಡೆ ಮುಂದೂಡಿದ ಮಹೀಂದ್ರಾ

ಇದೀಗ ಮಹೀಂದ್ರಾ ಕಂಪನಿಯು 2021ರ ಸ್ಕಾರ್ಪಿಯೋ ಎಸ್‍ಯುವಿಯನ್ನು ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಿದೆ. ತಮಿಳುನಾಡಿನ ಊಟಿ ಬಳಿಯ ಗಿರಿ ಧಾಮ ಪ್ರದೇಶದಲ್ಲಿ ಮುಂದಿನ ತಲೆಮಾರಿನ ಸ್ಕಾರ್ಪಿಯೋವನ್ನು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಚಿತ್ರಗಳು ಆನ್‌ಲೈನ್ ನಲ್ಲಿ ಬಹಿರಂಗವಾಗಿದೆ.

ಹೊಸ ಜನಪ್ರಿಯ ಎಸ್‌ಯುವಿಗಳ ಬಿಡುಗಡೆ ಮುಂದೂಡಿದ ಮಹೀಂದ್ರಾ

ಈ ಹೂಸ ಸ್ಕಾರ್ಪಿಯೋ ಎಸ್‍ಯುವಿಯು ಹೆಚ್ಚು ನವೀಕರಿಸಿದ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಈ ಎಸ್‍ಯುವಿಯು ಕಟ್ಟುನಿಟ್ಟಾದ ಪಾದಚಾರಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳನ್ನು ಪೂರೈಸಲು ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಿದ್ದಾರೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಜನಪ್ರಿಯ ಎಸ್‌ಯುವಿಗಳ ಬಿಡುಗಡೆ ಮುಂದೂಡಿದ ಮಹೀಂದ್ರಾ

ಹೊಸ ಸ್ಕಾರ್ಪಿಯೋ ಎಸ್‍ಯುವಿಯ ಮುಂಭಾಗದಲ್ಲಿ ಹೆಡ್ ಲ್ಯಾಂಪ್ ಪಕ್ಕ ಸುತ್ತುವರೆದಿರುವ ಸ್ಲೇಟೆಡ್ ಪ್ರಮುಖ ಗ್ರಿಲ್ ಅಂಶಗಳನ್ನು ಒಳಗೊಂಡಿದೆ. ಆದರೆ ಇದು ಕೇವಲ ಸ್ಪಾಟ್ ಟೆಸ್ಟ್ ನಲ್ಲಿ ಅಳವಡಿಸಿರಬಹುದು. ಉತ್ಪಾದನೆಯ ಹಂತದಲ್ಲಿ ಈ ಅಂಶಗಳನ್ನು ಒಳಗೊಂಡಿರುವುದರಿಲ್ಲ ಎಂದು ನಿರೀಕ್ಷಿಸುತ್ತೇವೆ.

ಹೊಸ ಜನಪ್ರಿಯ ಎಸ್‌ಯುವಿಗಳ ಬಿಡುಗಡೆ ಮುಂದೂಡಿದ ಮಹೀಂದ್ರಾ

ಇನ್ನು ಹೊಸ ತಲೆಮಾರಿನ ಎಕ್ಸ್‌ಯುವಿ 500 ಎಸ್‌ಯುವಿಯನ್ನು ಭಾರತದಲ್ಲಿ ಮತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಲು ಮಹೀಂದ್ರಾ ಕಂಪನಿಯು ಪುನರಾರಂಭಿಸಿದೆ. ಹೊಸ ತಲೆಮಾರಿನ ಎಕ್ಸ್‌ಯುವಿ 500 ಎಸ್‌ಯುವಿಯು ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಐಷಾರಾಮಿ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಹೊಸ ಜನಪ್ರಿಯ ಎಸ್‌ಯುವಿಗಳ ಬಿಡುಗಡೆ ಮುಂದೂಡಿದ ಮಹೀಂದ್ರಾ

ಹೊಸ ತಲೆಮಾರಿನ ಎಕ್ಸ್‌ಯುವಿ 500 ಎಸ್‍ಯುವಿಯನ್ನು ಮೊನೊಕೊಕ್ ಪ್ಲಾಟ್‌ಫಾರ್ಮ್‌ನ ಅಡಿಯಲ್ಲಿ ಬಿಡುಗಡೆಗೊಳಿಸಬಹುದು. 2021ರ ಮಹೀಂದ್ರಾ ಎಕ್ಸ್‌ಯುವಿ 500 ಅದರ ವಿನ್ಯಾಸ ಮತ್ತು ಸ್ಟೈಲಿಂಗ್‌ನಲ್ಲಿ ಗಮನಾರ್ಹ ಬದಲಾವಣೆಗಳ ಜೊತೆಗೆ ಹಲವಾರು ನವೀಕರಣಗಳು ಮತ್ತು ಹೆಚ್ಚುವರಿ ಫೀಚರ್ ಗಳನ್ನು ಸಹ ಹೊಂದಿರುತ್ತದೆ.

ಹೊಸ ಜನಪ್ರಿಯ ಎಸ್‌ಯುವಿಗಳ ಬಿಡುಗಡೆ ಮುಂದೂಡಿದ ಮಹೀಂದ್ರಾ

ಹೊಸ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ 500 ಎಸ್‍ಯುವಿಯಲ್ಲಿ ಡೀಸೆಲ್ ಎಂಜಿನ್ ಅನ್ನು ಸಹ ಅಳವಡಿಸುವ ಸಾಧ್ಯತೆಗಳಿದೆ. ಈ ಎಸ್‍ಯುವಿಯಲ್ಲಿ ಹೊಸ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಬಹುದು.

ಹೊಸ ಜನಪ್ರಿಯ ಎಸ್‌ಯುವಿಗಳ ಬಿಡುಗಡೆ ಮುಂದೂಡಿದ ಮಹೀಂದ್ರಾ

ಭಾರತದಲ್ಲಿ ಕರೋನಾ ಬೀತಿಯಿಂದ ಲಾಕ್ ಡೌನ್ ಮಾಡಲಾಗಿತ್ತು. ಇದರಿಂದ ಇತರ ವಾಹನ ತಯಾರಕ ಕಂಪನಿಗಳ ರೀತಿಯಲ್ಲಿ ಮಹೀಂದ್ರಾ ಕಂಪನಿಗೂ ದೊಡ್ಡ ಮಟ್ಟದ ನಷ್ಟವಾಗಿದೆ. ಇದರಿಂದಾಗಿ ಹೊಸ ಜನಪ್ರಿಯ ಮಾದರಿಗಳ ಬಿಡುಗಡೆಯನ್ನು ಮುಂದೂಡಲಾಗಿದೆ.

More from DriveSpark

Article Published On: Saturday, June 13, 2020, 17:08 [IST]
English summary
New-Generation Mahindra XUV500 & Scorpio India Launch Dates Pushed To FY 2021-22. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+