ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಝ್ ತನ್ನ ಹೊಸ ಜಿಎಲ್ಎಸ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಮರ್ಸಿಡಿಸ್ ಇಂಡಿಯಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಜಿಎಲ್ಎಸ್ ಎಸ್‍ಯುವಿಯ ಹೆಸರನ್ನು ಸೇರಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ

ಹೊಸ ಮರ್ಸಿಡಿಸ್ ಜಿಎಲ್ಎಸ್ ತನ್ನ ಹಿಂದಿನ ಎಸ್‍ಯುವಿಗಿಂತ 77 ಎಂಎಂ ಮತ್ತು 22 ಎಂಎಂ ಅಗಲವಿದ್ದು, ಒಟ್ಟು 5,207ಎಂಎಂ ಉದ್ದ ಮತ್ತು 1,956 ಎಂಎಂ ಅಗಲವನ್ನು ಹೊಂದಿದೆ. ಜಿಎಲ್ಎಸ್ ಎಸ್‍ಯುವಿ ಯ ವ್ಹೀಲ್ ಬೇಸ್ 3,134 ಎಂಎಂ ಉದ್ದದೊಂದಿಗೆ 60 ಎಂಎಂನಷ್ಟು ಅಧಿಕವಿದೆ. 2020ರ ಹೊಸ ಮರ್ಸಿಡಿಸ್ ಜಿಎಲ್ಎಸ್ ಮಾಡ್ಯುಲರ್ ಹೈ ಅರ್ಕಿಟೆಕ್ಚರ್ ಪ್ಲಾಟ್ ಫಾರ್ಮ್ ಹೊಂದಿದದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ

ಬಾನೆಟ್ ನ ಕೆಳಗೆ ಎರಡು ಎಲೆಕ್ಟ್ರಿಫೈಡ್ ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ನೀಡಲಾಗಿದ್ದು ಒಟ್ಟುಮೂರು ವಿಧದ ಎಂಜಿನ್ ಗಳಿವೆ. ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಟರ್ಬೋ ಚಾರ್ಜ್ ನ 3.0 ಲೀಟರಿನ 6 ಸಿಲಿಂಡರ್ ಎಂಜಿನ್ 362 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ

ಜಿಎಲ್ಎಸ್ 450 ಯ ಹೈಬ್ರಿಡ್ ಮೋಟಾರ್ 22 ಬಿಹೆಚ್‍ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಏಕೈಕ ಡೀಸೆಲ್ ಎಂಜಿನ್, ಟರ್ಬೋಚಾರ್ಜ್ 3.0 ಲೀಟರಿನ ಇನ್‍ಲೈನ್ ಎಂಜಿನ್ ಇದಾಗಿದ್ದು ಮೂರು ಹಂತಗಳಲ್ಲಿ ಟ್ಯೂನ್ ಮಾಡಲಾಗುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ

ಜಿಎಲ್ಎಸ್ 350 ಡಿ ಎಂಜಿನ್ 282 ಬಿಹೆಚ್‍ಪಿ ಮತ್ತು 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೈ ಸ್ಪೆಸಿಫಿಕೇಷನ್ ಹೊಂದಿರುವ ಜಿಎಲ್ಎಸ್ 400 ಡಿ ಎಂಜಿನ್ 325 ಬಿಹೆಚ್‍ಪಿ ಮತ್ತು ಅತಿ ಹೆಚ್ಚು ಅಂದರೆ 700 ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ

ಎರಡೂ ಎಂಜಿನ್ ಗಳು 31.6 ಲೀಟರಿನ ಆಡ್‍ಬ್ಲೂ ಟ್ಯಾಂಕ್ ಮತ್ತು ಸೆಕೆಂಡರಿ ಅಮೋನಿಯಾ ಫಿಲ್ಟರ್ ಗಳನ್ನು ಹೊಂದಿರಲಿದೆ. ಡಿಸೈನ್ ನಲ್ಲಿ ಅತಿ ಹೆಚ್ಚು ಬದಲಾವಣೆಯನ್ನು ಹೊಸ ಜಿಎಲ್ಎಸ್ ನ ಒಳ ಭಾಗದಲ್ಲಿ ಕಾಣಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ

ಮಾರ್ಕ್ಸ್ ಟ್ರೇಡ್ ಮಾರ್ಕಿನ ಟ್ವಿನ್ ಡಿಸ್ ಪ್ಲೇ ಹೊಂದಿರುವ ಇನ್ಸ್ ಟ್ರೂಮೆಂಟೆಷನ್ ಮತ್ತು 11.6 ಇಂಚಿನ ಸ್ಟಾಂಡರ್ಡ್ ಇನ್ಫೊಟೈನ್ ಮೆಂಟ್ ಡಿಸ್ ಪ್ಲೇ ಫೀಚರ್‍‍ಗಳನ್ನು ಹಾಗೂ ವಾಯ್ಸ್ ಅಸಿಸ್ಟೆಂಟ್ ಫೀಚರ್ ಇರುವ 5 ಝೋನ್ ಕ್ಲೈಮೇಟ್ ಗಳಲ್ಲಿ ಬರುವ ಎಂಬಕ್ಸ್ ಇಂಟರ್ಫೇಸ್ ಅನ್ನು ಹೊಸ ಜಿಎಲ್ಎಸ್ ಕಾರು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ

ಮರ್ಸಿಡಿಸ್ ಜಿಎಲ್ಎಸ್ ಸ್ಟಾಂಡರ್ಡ್ ಆಗಿ 7 ಸೀಟುಗಳನ್ನು ಹೊಂದಿರಲಿದೆ, ಆದರೆ ಜರ್ಮನ್ ಕಾರು ತಯಾರಕ ಕಂಪನಿಯು 6 ಸೀಟಿನ ಕಾರುಗಳನ್ನು ಖರೀದಿಸುವ ಅವಕಾಶವನ್ನು ಮಾಲೀಕರಿಗೆ ನೀಡಲಿದೆ. ಇದು ಮಧ್ಯದಲ್ಲಿರುವ ಸೀಟನ್ನು ತೆಗೆದು ಹಾಕಿ ಇಬ್ಬರಿಗೆ ಆರ್ಮ್ ರೆಸ್ಟ್ ಮಾಡಲು ಅವಕಾಶ ನೀಡಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿ

ಬೂಟ್ ಸ್ಪೇಸ್ ತುಂಬಾ ದೊಡ್ಡದಾಗಿದ್ದು, ಎಲ್ಲಾ ಮುಂಭಾಗದ ಐದು ಸೀಟುಗಳನ್ನು ಒಂದೇ ಬಟನ್ ಪ್ರೆಸ್ ಮಾಡುವ ಮೂಲಕ ಮಡಚಬಹುದಾಗಿದೆ. ಮೊದಲಿದ್ದ ಜಿಎಲ್ಎಸ್ ಕಾರಿಗಿಂತ 100 ಲೀಟರ್ ಅಧಿಕ ಸ್ಪೇಸ್ ಇದ್ದು ಈಗ 2,400 ಲೀಟರ್ ನಷ್ಟು ಕಾರ್ಗೋ ಸ್ಪೇಸ್ ಹೊಂದಿರಲಿದೆ. ಈ ಎಸ್‍ಯುವಿಯು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

More from DriveSpark

Article Published On: Monday, April 6, 2020, 15:38 [IST]
English summary
Third-gen Mercedes-Benz GLS listed on Indian website. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+