ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಕಾರು

ಸ್ಕೋಡಾ ಅಕ್ಟೀವಿಯಾ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಸ್ಕೋಡಾ ಕಾರುಗಳಲ್ಲಿ ಒಂದಾಗಿದೆ. ಅಕ್ಟೀವಿಯಾ ಅತ್ಯಂತ ಜನಪ್ರಿಯ ಕಾರು ಮಾತ್ರವಲ್ಲ ಇದು ಅತ್ಯಂತ ವೈವಿಧ್ಯಮಯ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು ವಿವಿಧ ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಕಾರು

ಇದೀಗ 2021ರ ಆಕ್ಟೀವಿಯಾ ಸ್ಕೌಟ್ ಆವೃತ್ತಿಯನ್ನು ಸ್ಕೂಡಾ ಕಂಪನಿಯು ಅನಾವರಣಗೊಳಿಸಿದೆ. ಸ್ಕೋಡಾ ಕಂಪನಿಯು ಈ ವರ್ಷದ ಆರಂಭದಲ್ಲಿ ನಾಲ್ಕನೇ ತಲೆಮಾರಿನ ಕಾರ್ಯಕ್ಷಮತೆ-ಆಧಾರಿತ ಆರ್ಎಸ್ ಆವೃತ್ತಿಯನ್ನು ಸ್ಕೋಡಾ ಕಂಪನಿಯು ಬಿಡುಗಡೆಗೊಳಿಸಿದ್ದರು. ಹೊಸ ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಆವೃತ್ತಿಯಲ್ಲಿ ಆರ್ಎಸ್ ಮಾದರಿಯಂತಹ ವಿನ್ಯಾಸವನ್ನು ಬಿ-ಪಿಲ್ಲರ್ ವರೆಗೆ ಹೊಂದಿದೆ. ಆಕ್ಟೀವಿಯಾ ಹಿಂಭಾಗದಲ್ಲಿ ಹೆಚ್ಚುವರಿ ಜಾಗವನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಕಾರು

ಈ ಹೊಸ ಆಕ್ಟೀವಿಯಾ ಸ್ಕೌಟ್ ಕಾರಿನ ಹಿಂಭಾಗದ ವಿನ್ಯಾಸವು ಸಾಮಾನ್ಯ ಆಕ್ಟೀವಿಯಾ ಕಾರಿನಂತಿದೆ. ಹೊಸ ಸ್ಕೌಟ್ ರೂಪಾಂತರದಲ್ಲಿ ಕೋನೀಯ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಹೊಸ ಸ್ಕೌಟ್ ಕಾರು 4,703 ಎಂಎಂ ಉದ್ದವನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಕಾರು

ಇದು ಇದುವರೆಗಿನ ಅತಿ ಉದ್ದದ ಸ್ಕೌಟ್ ಮಾದರಿ ಎಂದು ಸ್ಕೋಡಾ ಕಂಪನಿ ಹೇಳಿಕೊಂಡಿದೆ. ಸ್ಕೌಟ್ ರೂಪಾಂತರವು ಹೊಸ ಮಾದರಿಯ 640-ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಕಾರು

ಹಿಂದಿನ ಮಾದರಿಗಿಂತ ಹೆಚ್ಚುವರಿಯಾಗಿ ಹೊಸ ಆಕ್ಟೀವಿಯಾ ಸ್ಕೌಟ್ 15 ಎಂಎಂ ಎತ್ತರವನ್ನು ಹೆಚ್ಚಿಸಲಾಗಿದೆ. ಸ್ಕೋಡಾ ಆಕ್ಟೇವಿಯಾ ಸ್ಕೌಟ್ ಅನ್ನು ಫ್ರಂಟ್-ವೀಲ್-ಡ್ರೈವ್ ಕಾನ್ಫಿಗರೇಶನ್‌ನೊಂದಿಗೆ ನೀಡಲಾಗುತ್ತದೆ. ಆದರೆ ಫೋರ್ ವ್ಹೀಲ್ ಡ್ರೈವ್ ಕಾನ್ಫಿಗರೇಶನ್ ಅನ್ನು ಕೂಡ ಹೊಂದಿರುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಕಾರು

ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಕಾರಿನ 2.0-ಲೀಟರ್ ಟಿಡಿಐ ಡೀಸೆಲ್ ಎಂಜಿನ್ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ 1.5-ಲೀಟರ್ ಟರ್ಬೊ ಪೆಟ್ರೋಲ್ ಟಿಎಸ್‌ಐ ಎಂಜಿನ್ 150 ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಕಾರು

ರೇಂಜ್-ಟಾಪಿಂಗ್ ರೂಪಾಂತರಗಳಲ್ಲಿ 2.0-ಲೀಟರ್ ಟಿಎಸ್ಐ ಮತ್ತು 2.0-ಲೀಟರ್ ಟಿಡಿಐ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಈ ಎಂಜಿನ್ ಗಳೊಂದಿಗೆ ಏಳು-ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಕಾರು

ಸ್ಕೋಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಕಾರ್ಯಕ್ಷಮತೆ ಅಧಾರಿತ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಆಕ್ಟೀವಿಯಾ ಆರ್‍ಎಸ್ 245 ಸೆಡಾನ್ 2.0 ಲೀಟರ್ ಟಿ‍ಎಸ್‍‍ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 242 ಬಿ‍‍ಹೆಚ್‍‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸ್ಕೌಟ್ ಕಾರು

ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಅಕ್ಟೀವಿಯಾ ಕೂಡ ಒಂದಾಗಿದೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್, ಬಿ‍ಎಂಡಬ್ಲ್ಯೂ 3 ಸೀರಿಸ್ ಮತ್ತು ಜಾಗ್ವಾರ್ ಎಕ್ಸ್‌ಇ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಸ್ಕೋಡಾ skoda
English summary
Skoda Unveils New-Generation (2021) Octavia Scout. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X