ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್
2020ರ ಹೋಂಡಾ ಸಿಟಿ ಸೆಡಾನ್ ಆಧರಿಸಿ ಹೋಂಡಾ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಹೊಸ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಮೊದಲ ಬಾರಿಗೆ ಥೈಲ್ಯಾಂಡ್‌ನಲ್ಲಿ ಸ್ಪಾಟ್ ಟೆಸ್ಟ್ ನಡೆಸುವುದು ಕಂಡು ಬಂದಿದೆ.

ಸ್ಪಾಟ್ ಟೆಸ್ಟ್ ನಡೆಸುವ ಚಿತ್ರಗಳು ಆನ್‍ಲೈನ್ ನಲ್ಲಿ ಬಹಿರಂಗವಾಗಿದೆ. ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಹೋಂಡಾ ಸಿಟಿ ಸಂಪೂರ್ಣವಾಗಿ ಮರೆಮಾಚಲಾಗಿದೆ. ಆದರೆ ಚೀನಾದಲ್ಲಿ ಪೇಟೆಂಟ್ ಚಿತ್ರವು ಬಹಿರಂಗವಾಗಿತ್ತು. ಈ ಚಿತ್ರದಲ್ಲಿ ಹೋಂಡಾ ಸಿಟಿ ಹ್ಯಾಚ್‌ಬ್ಯಾಕ್ ಮುಂಭಾಗವು ಸಿಟಿ ಕಾರಿಗೆ ಹೋಲುತ್ತದೆ. ಹಿಂಭಾಗವು ಜಾಝ್ ಕಾರಿಗೆ ಹೋಲುವಂತಿದೆ. ಆದರೆ ಹಿಂಭಾಗವು ಸ್ಲೀಕ್ ಎಲ್ಇಡಿ ಟೈಲ್‌ಲೈಟ್‌ಗಳೊಂದಿಗೆ ವಿಶಿಷ್ಟವಾಗಿ ಕಾಣುತ್ತದೆ.

ಇನ್ನು ಹೋಂಡಾ ಕಂಪನಿಯು 2020ರ ಸಿಟಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ಬಹುನಿರೀಕ್ಷಿತ ಹೊಸ ಹೋಂಡಾ ಸಿಟಿ ಕಾರಿನ ಬಿಡುಗಡೆಯು ವಿಳಂಭವಾಗಿದೆ.
MOST READ: ಹೊಸ ನಿವಸ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹೋಂಡಾ ಕಂಪನಿಯು ಹೋಂಡಾದಲ್ಲಿ ಗ್ರೇಟರ್ ನೋಯ್ಡಾ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಉತ್ಪಾದನಾ ಸೌಲಭ್ಯಗಳಿವೆ. ಸರ್ಕಾರದ ಇತ್ತೀಚಿನ ಮಾರ್ಗಸೂಚಿಗಳನ್ನು ಅನುಸರಿಸಿ ಸಾರಿಗೆ ಸೌಲಭ್ಯಗಳನ್ನು ಪುನರಾರಂಭಿಸಿದ ಕೂಡಲೇ ಕಾರ್ಮಿಕರು ಮರಳುವ ನಿರೀಕ್ಷೆಯಿದೆ. ಉತ್ಪಾದನೆಯು ನಂತರ ಪ್ರಾರಂಭಿಸುತ್ತೇವೆ ಎಂದು ಗೋಯಲ್ ಅವರು ಹೇಳಿದರು.

ಹೊಸ ಹೋಂಡಾ ಸಿಟಿ ಸೆಡಾನ್ 4,549 ಎಂಎಂ ಉದ್ದ, 1,784 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ಹೋಂಡಾ ಸಿಟಿ ಪ್ರಸ್ತುತ ಮಾದರಿಗಿಂತ ಹೆಚ್ಚು ಉದ್ದ ಮತ್ತು ಅಗಲವನ್ನು ಹೊಂದಿದೆ.
MOST READ: ಡೀಲರ್ ಬಳಿ ತಲುಪಿದ ಹೊಸ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೋಂಡಾ ಸಿಟಿ ಮಾದರಿಯು ಹೋಂಡಾ ಕಂಪನಿಯ ಸರಣಿಯ ಕಾರುಗಳಲ್ಲಿ ಹಲವು ವರ್ಷಗಳಿಂದ ಹೆಚ್ಚು ಮಾರಾಟವಾಗುವ ಕಾರು ಆಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ವರ್ನಾ ಮತ್ತು ಸಿಯಾಜ್ ಒಂದೇ ರೀತಿಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ.

ಮಾರುಕಟ್ಟೆಯಲ್ಲಿರುವ 1.5-ಲೀಟರ್ ಎಸ್‌ಒಹೆಚ್‌ಸಿ ಎಂಜಿನ್‌ಗಿಂತಲೂ ಇದು ಹೆಚ್ಚು ಪವರ್ ಬ್ಯಾಂಡ್ ಹೊಂದಿರಲಿದೆ. ಹೊಸ ಸಿಟಿ ಕಾರಿನಲ್ಲಿ ಡ್ಯುಯಲ್ ಓವರ್‌ಹೆಡ್ ಕ್ಯಾಮ್ ಸೆಟಪ್‌ನೊಂದಿಗೆ ಹೊಸ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್ 15 ಬಿ) ನೀಡಲಾಗುತದೆ. ಈ ಹೊಸ ಎಂಜಿನ್ 119 ಬಿಎಚ್‌ಪಿ ಮತ್ತು ಸುಮಾರು 155 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಅನಾವರಣವಾಗಲಿದೆ ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿ

ಹೊಸ ಹೋಂಡಾ ಸಿಟಿ ಕಾರಿನ ಇಂಟಿರಿಯರ್‍ನಲ್ಲಿ ಡ್ಯುಯಲ್ ಟೋನ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‍ರೆಸ್ಟ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಹೊಸ ಟಚ್‍ಸ್ಕ್ರೀನ್ ಇನ್ಪೋಟೇನ್‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

2020ರ ಹೋಂಡಾ ಸಿಟಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸಿಯಾಜ್, ಟೊಯೊಟಾ ಯಾರಿಸ್ ಮತ್ತು ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications