ಹೊಸ ನಿವಸ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್
ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ತನ್ನ ಹೊಸ ನಿವಸ್ ಕಾಂಪ್ಯಾಕ್ಟ್ ಕ್ರಾಸ್‌ಒವರ್ ಕೂಪ್ ಅನ್ನು ಅನಾವರಣಗೊಳಿಸಿದೆ. ಮುಂದಿನ ವರ್ಷ ಈ ಹೊಸ ನಿವಸ್ ಎಸ್‍ಯುವಿಯು ದಕ್ಷಿಣ ಅಮೆರಿಕಾದ ಮಾರುಕಟ್ಟೆಗಳಲ್ಲಿ ಮಾರಾಟವಾಗಲಿದೆ.

ಈ ಹೊಸ ನಿವಸ್ ಎಸ್‍ಯುವಿಯು ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಫೋಕ್ಸ್‌ವ್ಯಾಗನ್ ಟಿ-ರಾಕ್ ಕೂಡ ಇದೆ ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ. ಸ್ಕೋಡಾ ಆಟೋ ಮತ್ತು ಫೋಕ್ಸ್‌ವ್ಯಾಗನ್ ಇಂಡಿಯಾ 2.0 ಯೋಜನೆಯಡಿಯಲ್ಲಿ ಟಿ-ಕ್ರಾಸ್ ಟಿ-ಕ್ರಾಸ್‌ಗೆ ಹೋಲುವಂತೆ ಕಾಣುವ ಟೈಗನ್ ಕ್ರಾಸ್‌ಒವರ್‌ಗೆ ಆಧಾರವಾಗಿರುವ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಭಾರತಕ್ಕಾಗಿ ತಯಾರಿಸಬಹುದು. ಟ್ವಿಗನ್ ಎಸ್‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು.

ದಕ್ಷಿಣ ಅಮೆರಿಕಾದ ನಂತರ ನಿವಸ್ ಎಸ್‍ಯುವಿಯನ್ನು ಇತರ ಯುರೋಪಿನ ಮಾರುಕಟ್ಟೆಯಲ್ಲಿ ಪ್ರದರ್ಶಿಸಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಕ್ರಾಸ್‌ಒವರ್ ಅಥವಾ ‘ಅರ್ಬನ್ ಎಸ್‌ಯುವಿಗಳಿಗೆ' ಬೇಡಿಕೆ ಹೆಚ್ಚಾಗುತ್ತಿದೆ. ಫಸ್ಟ್ ಜನರೇಷನ್ ಬಿಎಂಡಬ್ಲ್ಯು ಎಕ್ಸ್ 6 ಮೊದಲ ಕ್ರಾಸ್‌ಒವರ್ ಕೂಪ್ ಎಸ್‍ಯುವಿಯಾಗಿದೆ. ಫೋಕ್ಸ್‌ವ್ಯಾಗನ್ ಕಂಪನಿಯು ಇತರ ಕ್ರಾಸ್‌ಒವರ್ ಕೂಪ್ ಎಸ್‍ಯುವಿಗಳಿಗಿಂತ ಕಡಿಮೆ ಬೆಲೆಯಲ್ಲಿ ಹೊಸ ನಿವಸ್ ಅನ್ನು ಬಿಡುಗಡೆಗೊಳಿಸಲಿದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯು 4,266 ಎಂಎಂ ಉದ್ದ ಮತ್ತು 2,560 ವ್ಹೀಲ್ ಬೇಸ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿಯ ಎರಡು ಟಯರ್ ಗಳ ವಿಸ್ತರಣೆಯನ್ನು 2,650 ಎಂಎಂ ಅಷ್ಟು ಇದೆ. ನಿವಸ್ ಎಸ್‍ಯುವಿಯು ಟೈಗನ್ ಎಸ್‍ಯುವಿಗಿಂತ ದೊಡ್ಡ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಈ ಹೊಸ ನಿವಸ್ ಎಸ್‍ಯುವಿಯಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ. ಈ ಹೊಸ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, 17 ಇಂಚಿನ ವ್ಹೀಲ್, ಪೂರ್ಣ ಪ್ರಮಾಣದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋನೊಮಸ್ ಎಮರ್ಜನ್ಸಿ ಬ್ರೇಕಿಂಗ್, ಕೀ ಲೆಸ್ ಎಂಟ್ರಿ ಮತ್ತು ಪೂರ್ಣ-ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.
MOST READ: ಡೀಲರ್ ಬಳಿ ತಲುಪಿದ ಹೊಸ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಹೊಸ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯಲ್ಲಿ ‘ವೋಕ್ಸ್ ಪ್ಲೇ' ಎಂದು ಕರೆಯಲ್ಪಡುವ ವೈಫೈ-ಒಳಗೊಂಡ ಸಿಸ್ಟಂ ಅನ್ನು ಹೊಂದಿದೆ. ಇದನ್ನು ಸಂಪೂರ್ಣವಾಗಿ ಬ್ರೆಜಿಲ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ 10ಜಿಬಿ ಇಂಟರ್ನಲ್ ಸ್ಟೋರೇಜ್ ಮತ್ತು ಹೆಚ್ಚುವರಿಯಾಗಿ ಅಪ್ಲಿಕೇಶನ್ ಸ್ಟೋರ್ ಅನ್ನು ಹೊಂದಿದೆ.

ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯಲ್ಲಿ 1.0-ಲೀಟರ್ ಟಿಎಸ್‌ಐ ಟರ್ಬೊ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 126 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮುಂಭಾಗದ ಚಕ್ರಗಳಿಗೆ 6-ಸ್ಪೀಡ್ ಟಾರ್ಕ್-ಕರ್ನವಾಟರ್ ಮೂಲಕ ಪವರ್ ಅನ್ನು ಕಳುಹಿಸಲಾಗುತದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಫೋಕ್ಸ್‌ವ್ಯಾಗನ್ ಪೊಲೊ ಮತ್ತು ವೆಂಟೊ ಬಿಎಸ್-6 ಮಾದರಿಯಲ್ಲಿ ಅದೇ ಮಾದರಿ ಸಿಸ್ಟಂ ಅನ್ನು ಅಳವಡಿಸಲಾಗಿತ್ತು. ಭವಿಷ್ಯದಲ್ಲಿ ಹೆಚ್ಚುವರಿಯಾಗಿ ಈ ಹೊಸ ನಿವಸ್ ಎಸ್‍ಯುವಿಯಲ್ಲಿ 1.5-ಲೀಟರ್ ಟಿಎಸ್ಐ ಎಂಜಿನ್ ಅನ್ನು ಅಳವಡಿಸಬಹುದು.

ಪ್ರೀಮಿಯಂ ಕ್ರಾಸ್‌ಒವರ್ ಆದ ಫೋಕ್ಸ್‌ವ್ಯಾಗನ್ ನಿವಸ್ ಎಸ್‍ಯುವಿಯು ಬಿಡುಗಡೆಯಾದ ಬಳಿಕ ಆಡಿ ಕ್ಯೂ3 ಸ್ಪೋರ್ಟ್‌ಬ್ಯಾಕ್, ಬಿಎಂಡಬ್ಲ್ಯು ಎಕ್ಸ್4 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕೂಪೆ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








