ಹೊಸ ಹೋಂಡಾ ಸಿಟಿ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಹೋಂಡಾ ಕಂಪನಿಯು ತನ್ನ ಬಹುನಿರೀಕ್ಷಿತ 2020ರ ಸಿಟಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಹೊಸ ಹೋಂಡಾ ಸಿಟಿ ಕಾರಿನ ಮೈಲೇಜ್ ಮಾಹಿತಿಯನ್ನು ಕಂಪನಿಯು ಬಹಿರಂಗಪಡಿಸಿದೆ.

ಹೊಸ ಹೋಂಡಾ ಸಿಟಿ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಭಾರತದಲ್ಲಿ ಕರೋನಾ ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಮುಂದುವರಿಸಿರುವುದರಿಂದ ಹೊಸ ಹೋಂಡಾ ಸಿಟಿ ಕಾರಿನ ಬಿಡುಗಡೆಯು ಮತ್ತಷ್ಟು ತಡವಾಗಿದೆ. ಆದರೆ ಈ ಹೊಸ ಕಾರನ್ನು ಭಾರತೀಯ ಮಾರುಕಟ್ಟೆಯಲಿ ಈ ತಿಂಗಳು ಬಿಡುಗಡೆಗೊಳಿಸುವ ಸಾದ್ಯತೆಗಳಿದೆ. ಹೊಸ ಹೋಂಡಾ ಸಿಟಿ 4,549 ಎಂಎಂ ಉದ್ದ, 1,748 ಎಂಎಂ ಅಗಲ, 1,489 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. 2020ರ ಹೋಂಡಾ ಸಿಟಿ ಪ್ರಸ್ತುತ ಮಾದರಿಗಿಂತ ಹೆಚ್ಚು ಉದ್ದ ಮತ್ತು ಅಗಲವನ್ನು ಹೊಂದಿದೆ.

ಹೊಸ ಹೋಂಡಾ ಸಿಟಿ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಹೊಸ ಹೋಂಡಾ ಸಿಟಿ ಕಾರಿನಲ್ಲಿ 1.5 ಎಲ್ ಐ-ವಿಟಿಇಸಿ ಡಿಒಹೆಚ್‌ಸಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 600 ಆರ್‌ಪಿಎಂನಲ್ಲಿ 121 ಬಿಹೆಚ್‌ಪಿ ಪವರ್ ಮತ್ತು 4,300 ಆರ್‌ಪಿಎಂನಲ್ಲಿ 145 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಹೊಸ 7-ಸ್ಪೀಡ್ ಆಟೋಮ್ಯಾಟಿಕ್ ಸಿವಿಟಿ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

MOST READ: 370 ಕಿ.ಮೀ ಮೈಲೇಜ್ ನೀಡಲಿದೆ ಮಹೀಂದ್ರಾದ ಹೊಸ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಹೋಂಡಾ ಸಿಟಿ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಇದರಲ್ಲಿ ಮ್ಯಾನುವಲ್ ಆವೃತಿಯು ಪ್ರತಿ ಲೀಟರ್‌ಗೆ 17.8 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಆಟೋಮ್ಯಾಟಿಕ್ ಆವೃತಿಯು ಪ್ರತಿ ಲೀಟರ್‌ಗೆ 18.4 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಹೊಸ ಹೋಂಡಾ ಸಿಟಿ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಇನ್ನು ಹೊಸ ಹೋಂಡಾ ಸಿಟಿ ಕಾರಿನಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 99 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಈ ಎಂಜಿನ್ ಪ್ರತಿ ಲೀಟರ್‌ಗೆ 24.1 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಹೋಂಡಾ ಸಿಟಿ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

2020ರ ಹೋಂಡಾ ಸಿಟಿ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್‍ಇಡಿ ಯು‍‍ನಿ‍ಟ್‍‍ಗಳು, ಹೋಂಡಾ ಸಿಗ್ನೇಚರ್ ಕ್ರೋಮ್ ಬಾರ್, ಕೂಪ್ ಸ್ಟೈಲ್ ಸ್ಲೋಪಿಂಗ್ ರೂಫ್‍‍ಲೈನ್ ಮತ್ತು ದೊಡ್ಡ ಒ‍ಆರ್‍‍ವಿಎಂ‍ಗಳಿವೆ. ಇನ್ನು ಹೊಸ ಹೋಂಡಾ ಕಾರಿನಲ್ಲಿ ಶಾರ್ಕ್ ಫಿನ್ ಆಂಟೆನಾ, ಟೇಲ್ ಸೆಗ್‍ಮೆಂಟ್ ಮತ್ತು ಉತ್ತಮವಾದ ಬೂಟ್ ಲಿ‍ಡ್‍‍‍ಗಳಿವೆ.

ಹೊಸ ಹೋಂಡಾ ಸಿಟಿ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಹೊಸ ಹೋಂಡಾ ಸಿಟಿ ಕಾರಿನ ಇಂಟಿರಿಯರ್‍‍ನಲ್ಲಿ ಡ್ಯುಯಲ್ ಟೋನ್ ಸಿಸ್ಟಂ, ಹೊಂದಾಣಿಕೆ ಮಾಡಬಹುದಾದ ಹಿಂಭಾಗದ ಹೆಡ್‍‍‍ರೆಸ್ಟ್, ಡಿಜಿ‍ಟಲ್ ಇನ್ಸ್ ಟ್ರೂ‍‍ಮೆಂಟ್ ಕನ್ಸೋಲ್, ಹೊಸ ಟಚ್‍‍ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಹೊಸ ಹೋಂಡಾ ಸಿಟಿ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಹೊಸ ಹೋಂಡಾ ಸಿಟಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಹಿಲ್-ಸ್ಟಾರ್ಟ್ ಅಸಿಸ್ಟ್, ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಹೋಂಡಾದ ಲೇನ್‌ವಾಚ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಕ್ಯಾಮೆರಾ, ಆಟೋ ಹೆಡ್‌ಲ್ಯಾಂಪ್ ಮತ್ತು ವೈಪರ್‌ಗಳನ್ನು ಹೊಂದಿದೆ.

ಹೊಸ ಹೋಂಡಾ ಸಿಟಿ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಹೊಸ ಹೋಂಡಾ ಸಿಟಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ. 2020ರ ಹೋಂಡಾ ಸಿಟಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳು ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಹೋಂಡಾ honda
English summary
New-Gen Honda City Mileage, Specs and All Details Officially Revealed. Read In Kannada.
Story first published: Wednesday, June 17, 2020, 18:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X