ಹೊಸ ಫೀಚರ್ಸ್‍‍ಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2020ರ ಹ್ಯುಂಡೈ ಐ20

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ 2020ರ ಐ20 ಕಾರ್ ಅನ್ನು ಭಾರತದಲ್ಲಿ ಜೂನ್ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಹೊಸ ಹ್ಯುಂಡೈ ಐ20 ಕಾರನ್ನು ಅಭಿವೃದ್ಧಿಪಡಿಸಲಾಗಿದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2020ರ ಹ್ಯುಂಡೈ ಐ20

ಹೊಸ ತಲೆಮಾರಿನ ಐ20 ಕಾರಿನಲ್ಲಿ ಸನ್‍ರೂಫ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‍‍ಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಇದರಲ್ಲಿ ಹೊಸ ಐ20 ಕಾರು ಹೊಸದಾಗಿ ಫ್ರಂಟ್ ಬಂಪರ್, ಮೆಶ್ ಗ್ರಿಲ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌, ಹೆಡ್‌ಲ್ಯಾಂಪ್ ಕ್ಲಸ್ಟರ್, ಅಲಾಯ್ ವ್ಹೀಲ್‌, ವೈಡರ್ ಒಆರ್‍‍ವಿಎಂ ಮತ್ತು ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2020ರ ಹ್ಯುಂಡೈ ಐ20

ಹೊಸ ಐ20 ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರಲೆಸ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಮತ್ತು ಹ್ಯುಂಡೈನ ಬ್ಲೂಲಿಂಕ್ ಕನಕ್ಟಿವಿಟಿ ತಂತ್ರಜ್ಞಾನವನ್ನು ಹೊಂದಿರಲಿದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2020ರ ಹ್ಯುಂಡೈ ಐ20

ಹೊಸ ಹ್ಯುಂಡೈ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಪ್ರಸ್ತುತ ಕಾರಿನಲ್ಲಿರುವ 1.4 ಲೀಟರ್ ಡೀಸೆಲ್ ಯು‍‍ನಿ‍ಟ್ ಎಂಜಿನ್ ಅನ್ನು ಬದಲಾಯಿಸಲಾಗುತ್ತದೆ. ಹೊಸ ಡೀಸೆಲ್ ಎಂಜಿನ್ ಕಿಯಾ ಸೆಲ್ಟೋಸ್‍ನ ಎಂಜಿನ್ ಮಾದರಿಯಲ್ಲಿರಲಿದೆ. ಸೆಲ್ಟೋಸ್ ಕಾರಿನ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2020ರ ಹ್ಯುಂಡೈ ಐ20

ಪ್ರಸ್ತುತ ತಲೆಮಾರಿನ ಐ20 ಮೂರು ಪೆಟ್ರೋಲ್ ಮಾದರಿ ಮತ್ತು ಒಂದು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಮಾದರಿಗಳು 1.2 ಲೀಟರ್ ಎಂಜಿನ್ ಅನ್ನು ಹೊಂದಿದೆ ಮತ್ತು ಡೀಸೆಲ್ ಮಾದರಿಯು 1.4 ಲೀಟರ್ ಎಂಜಿನ್ ಅನ್ನು ಹೊಂದಿದೆ. ಪ್ರಸ್ತುತ ಹ್ಯುಂಡೈ ಐ20 ಕಾರು ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.7.74 ಲಕ್ಷದಿಂದ 9.93 ಲಕ್ಷ ಬೆಲೆಯನ್ನು ಹೊಂದಿದೆ.

ಹೊಸ ಫೀಚರ್ಸ್‍‍ಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2020ರ ಹ್ಯುಂಡೈ ಐ20

ಹ್ಯುಂಡೈ ಐ20 ಕಾರ್ ಅನ್ನು ಮೊದಲ ಬಾರಿಗೆ ಪ್ಯಾರಿಸ್ ಮೋಟಾರ್ ಶೋದಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಜಾಗತಿಕವಾಗಿ ಮೂರು ಮತ್ತು ಐದು ಡೋರ್ ಆವೃತ್ತಿಗಳಲ್ಲಿ ಲಭ್ಯವಿದೆ. ಎರಡನೇ ತಲೆಮಾರಿನ ಐ20 ಕಾರನ್ನು 2014ರಲ್ಲಿ ಬಿಡುಗಡೆಗೊಳಿಸಲಾಗಿತ್ತು ಮತ್ತು 2015ರಲ್ಲಿ ಇಂಡಿಯಾ ಕಾರ್ ಆಫ್ ದಿ ಇಯರ್ ಅನ್ನು ಗೆದ್ದುಕೊಂಡಿತ್ತು.

ಹೊಸ ಫೀಚರ್ಸ್‍‍ಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2020ರ ಹ್ಯುಂಡೈ ಐ20

ಎರಡನೇ ತಲೆಮಾರಿನ ಐ20 ಮಾದರಿಗಳು ಹ್ಯುಂಡೈನ 'ಫ್ಲೂಯಿಡಿಕ್ ಸ್ಕಲ್ಪ್ಚರ್ 2.0' ವಿನ್ಯಾಸವನ್ನು ಹೊಂದಿದೆ. ಇದನ್ನು ಜರ್ಮನಿಯ ರಸ್ಸೆಲ್‌ಶೈಮ್‌ನಲ್ಲಿರುವ ಹ್ಯುಂಡೈನ ವಿನ್ಯಾಸ ಕೇಂದ್ರದಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತದಲ್ಲಿ ಹತ್ತು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಿತ್ತು ಮತ್ತು 2018ರ ಫೇಸ್‍‍ಲಿಫ್ಟ್ ನಡೆಸಿದರು.

ಹೊಸ ಫೀಚರ್ಸ್‍‍ಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2020ರ ಹ್ಯುಂಡೈ ಐ20

ಇತ್ತೀಚಿಗೆ ಹ್ಯುಂಡೈ ಇಂಡಿಯಾ ಕಂಪನಿಯು ಅಧಿಕೃತವಾಗಿ ಲೈಟ್ ಅಪ್ ಎಂಬ ಹೊಸ ಟೆಲಿವಿಷನ್ ಜಾಹೀರಾತಿನ ಮೂಲಕ ಹ್ಯುಂಡೈ ಒರಾ ಕಾರಿನ ಬುಕ್ಕಿಂಗ್ ಪ್ರಾರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಹ್ಯುಂಡೈ ಒರಾ ಕಾರ್ ಅನ್ನು ಐ20 ಕಾರು ಬಿಡುಗಡೆಗೆ ಮುನ್ನ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಹೊಸ ಫೀಚರ್ಸ್‍‍ಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ 2020ರ ಹ್ಯುಂಡೈ ಐ20

ಹೊಸ ವೈಶಿಷ್ಟ್ಯಗಳನ್ನು ಅಳವಡಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ತಂತ್ರವನ್ನು ರೂಪಿಸಿದೆ. ಹೊಸ ಐ20 ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಬಲೆನೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Article Published On: Saturday, January 11, 2020, 12:01 [IST]
English summary
Next-gen Hyundai i20 India launch in June 2020. Read in Kanada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+