ಅನಾವರಣವಾಯ್ತು 2021ರ ಹ್ಯುಂಡೈ ಸಾಂತಾ ಫೆ ಎಸ್‍ಯುವಿ
ಹ್ಯುಂಡೈ ಕಂಪನಿಯು ತನ್ನ 2021ರ ಸಾಂತಾ ಫೆ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ. 2021ರ ಸಾಂತಾ ಫೆ ಎಸ್‍ಯುವಿಯು ಹೊಸ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ.

ಹ್ಯುಂಡೈ ಕಂಪನಿಯು ಮೊದಲ ಬಾರಿಗೆ ಸಾಂತಾ ಫೆನಲ್ಲಿ 'ಕ್ಯಾಲಿಗ್ರಫಿ' ಟ್ರಿಮ್ ಅನ್ನು ಪರಿಚಯಿಸಿದ್ದಾರೆ, ಇದು ಇನ್ನಷ್ಟು ಹೊಸ ಫೀಚರ್ ಗಳನ್ನು ಹೊಂದಿದೆ. ಹ್ಯುಂಡೈ ಸಾಂತಾ ಫೆ ಎಸ್‍ಯುವಿ ಗ್ರಿಲ್ ಅನ್ನು ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಪ್ರಮುಖ ಟಿ-ಆಕಾರದ ಎಲ್ಇಡಿ ಸಿಗ್ನೇಚರ್ ಲೈಟಿಂಗ್, ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್ ಮತ್ತು ಸೈಡ್ ಇಂಡಿಕೇಟರ್ ಗಳನ್ನು ಹೊಂದಿವೆ.

ಇದರೊಂದಿಗೆ ಈ ಎಸ್‍ಯುವಿಯಲ್ಲಿ ವರ್-ಫೋಲ್ಡಿಂಗ್ ಸೈಡ್ ಮಿರರ್ ಗಳು, ಹೊಸ ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್ ಗಳು, ಹೊಸ ಮಫ್ಲರ್ ವಿನ್ಯಾಸ, ಹೊಸ 20 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

2021ರ ಹ್ಯುಂಡೈ ಸಾಂತಾ ಫೆ ಎಸ್‍ಯುವಿಯಲ್ಲಿ ರೂಫ್ ರೈಲ್, ಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಎಸ್‍ಯುವಿಯ ಸಿಲೂಯೆಟ್ ಕ್ಯಾಬಿನ್ ಪ್ರೊಫೈಲ್ ಅನ್ನು ಹೊಂದಿದೆ. ಈ ಎಸ್‍ಯುವಿ ಲೋವರ್ ಡೋರ್ ಪ್ಯಾನೆಲ್ಸ್ ಮತ್ತು ಉದ್ದನೆಯ ಹುಡ್ ಅನ್ನು ಹೊಂದಿದೆ,

2021ರ ಹ್ಯುಂಡೈ ಸಾಂತಾ ಫೆ ಎಸ್‍ಯುವಿ ಹರ್ಮನ್-ಕಾರ್ಡನ್ ಪ್ರೀಮಿಯಂ ಆಡಿಯೊ ಸಿಸ್ಟಂ, ಡ್ಯುಯಲ್ ಫ್ರಂಟ್ ಮತ್ತು ಹಿಂಭಾಗದ ಯುಎಸ್‌ಬಿ ಔಟ್ ಲೆಟ್ ಗಳು, ಸೌಂಡ್ ಮೋಡ್ ಮತ್ತು ರಿಮೋಟ್ ಸ್ಮಾರ್ಟ್ ಪಾರ್ಕಿಂಗ್ ಅಸಿಸ್ಟ್ (ಆರ್‌ಎಸ್‌ಪಿಎ) ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇದರೊಂದಿಗೆ ಡೈನಾಮಿಕ್ ವಾಯ್ಸ್ ರೆಕಗ್ನಿಷನ್ ಸಿಸ್ಟಂ, ಹೊಸ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಹೊಸ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಆಪಲ್ ಕಾರ್ ಪ್ಲೇ, ಡ್ರೈವರ್ ಪ್ರೊಫೈಲ್ ಸೆಟ್ಟಿಂಗ್ ಗಳನ್ನು ಹೊಂದಿವೆ.

2021ರ ಹ್ಯುಂಡೈ ಸಾಂತಾ ಫೆ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಸ್ಮಾರ್ಟ್‌ಸೆನ್ಸ್' ಅಡ್ವಾನ್ಸ್ ಡೈವಿಂಗ್ ಅಸಿಸ್ಟ್ ಸಿಸ್ಟಂ ಅನ್ನು ಹೊಂದಿದೆ. ಇದರಲ್ಲಿ ಸೈಕ್ಲಿಸ್ಟ್ ಮತ್ತು ಜಂಕ್ಷನ್-ಟರ್ನಿಂಗ್ ಡಿಟೆಕ್ಷನ್, ಗೋ ವಿತ್ ಸ್ಮಾರ್ಟ್ ಕ್ರೂಸ್ಕಂಟ್ರೋಲ್, ಫಾರ್ವರ್ಡ್ ಮತ್ತು ರಿವರ್ಸ್ ಪಾರ್ಕಿಂಗ್ ವಾರ್ನಿಂಗ್, ಲೇನ್ ಕೀಪಿಂಗ್ ಅಸಿಸ್ಟ್, ಲೇನ್ ಫಾಲೋಯಿಂಗ್ ಅಸಿಸ್ಟ್ ಮತ್ತು ಬ್ಲೈಂಡ್-ಸ್ಪಾಟ್ ವ್ಯೂ ಮಾನಿಟರ್ ಅನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2021ರ ಹ್ಯುಂಡೈ ಸಾಂತಾ ಫೆ ಎಸ್‍ಯುವಿ ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿವೆ. ಹೊಸ ಸ್ಟ್ಯಾಂಡರ್ಡ್ ಪವರ್‌ಟ್ರೇನ್ ಸ್ಮಾರ್ಟ್‌ಸ್ಟ್ರೀಮ್ 2.5-ಲೀಟರ್, ನಾಲ್ಕು ಸಿಲಿಂಡರ್ ಎಂಜಿನ್ ಆಗಿದೆ. ಈ ಎಂಜಿನ್ ನೊಂದಿಗೆ 8-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಈ ಎಂಜಿನ್ 6,100 ಆರ್‌ಪಿಎಂನಲ್ಲಿ 188.3 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 246.7 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಎರಡನೇ ಎಂಜಿನ್ ಸ್ಮಾರ್ಟ್ಸ್ಟ್ರೀಮ್ 2.5-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಆಗಿದೆ. ಈ ಎಂಜಿನ್ 273. 2 ಬಿಹೆಚ್‍ಪಿ ಪವರ್ ಮತ್ತು 421.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಫೀಡ್ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇದರೊಂದಿಗೆ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಸಹ ಪಡೆಯುತ್ತದೆ, ಇದು 59 ಬಿಹೆಚ್‌ಪಿ ಎಲೆಕ್ಟ್ರಿಕ್ ಮೋಟರ್ ಹೊಂದಿರುವ ಸ್ಮಾರ್ಟ್‌ಸ್ಟ್ರೀಮ್ 1.6-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಆಗಿದೆ, ಇದು 175.5 ಬಿಹೆಚ್‌ಪಿ ಮತ್ತು 264 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.


Click it and Unblock the Notifications