ಅನಾವರಣವಾಯ್ತು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರು

ಹ್ಯುಂಡೈ ಕಂಪನಿಯು ಕಳೆದ ವರ್ಷ ಹೊಸ ಸೊನಾಟಾ ಮತ್ತು ಸೊನಾಟಾ ಹೈಬ್ರಿಡ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಹ್ಯುಂಡೈ ಕಂಪನಿಯು 2021ರ ಸೊನಾಟಾ ಎನ್ ಲೈನ್ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ.

ಅನಾವರಣವಾಯ್ತು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರು

ಈ ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಮಾದರಿಯಾಗಿದೆ. ದಕ್ಷಿಣ ಕೊರಿಯಾದ ಕಾರು ತಯಾರಕ ಮೊದಲ ಬಾರಿಗೆ ಮಧ್ಯಮ ಗಾತ್ರದ ಸೆಡಾನ್‌ನಲ್ಲಿ ಎನ್ ಲೈನ್ ಟ್ರಿಮ್ ಅನ್ನು ಪರಿಚಯಿಸಿದೆ. ಇದಲ್ಲದೆ ಎನ್ ಲೈನ್ ಹ್ಯುಂಡೈನ ಮೂಲ ಮಾದರಿಗಳಿಗೆ ಟ್ರಿಮ್ ಅಪ್‌ಗ್ರೇಡ್ ಆಗಿದೆ, ಶೀಘ್ರದಲ್ಲೇ ಅಮೆರಿಕಾದ ಹಲವು ಹ್ಯುಂಡೈ ಶೋರೂಂಗಳಲ್ಲಿ 2021ರ ಸೊನಾಟಾ ಎನ್ ಲೈನ್ ಕಾರು ಲಭ್ಯವಿರಲಿದೆ.

ಅನಾವರಣವಾಯ್ತು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರು

ಹೊಸ ಸೊನಾಟಾ ಎನ್ ಲೈನ್ ಬ್ರ್ಯಾಂಡ್‌ನ ಸೆನ್ಸೂಯಸ್ ಸ್ಪೋರ್ಟಿನೆಸ್ ವಿನ್ಯಾಸವನ್ನು ಆಧರಿಸಿದೆ. ಈ ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರಿನ ಹೊರಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಪ್ಯಾರಮೆಟ್ರಿಕ್ ಜ್ಯುವೆಲ್ ಪ್ಯಾಟರ್ನ್ ಗ್ರಿಲ್, ಬೋಲ್ಡ್ ಫ್ರಂಟ್ ಫಾಸಿಕ, ವೈಡ್ ಏರ್ ಇಂಟೆಕ್ಸ್ ಮತ್ತು ಎನ್ ಲೈನ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರು

ಇದರೊಂದಿಗೆ ಫುಲ್ ಎಲ್ಇಡಿ ಟೈಲ್ ಲೈಟ್ಸ್, 19 ಇಂಚಿನ ಅಲಾಯ್ ವ್ಹೀಲ್ ಗಳು, ಪನೋರಮಿಕ್ ಸನ್‌ರೂಫ್ ಮತ್ತು ಕ್ವಾಡ್ ಟಿಪ್ಸ್ ಹೊಂದಿರುವ ಎನ್ ಡ್ಯುಯಲ್ ಎಕ್ಸಾಸ್ಟ್ ಅನ್ನು ಹೊಂದಿದೆ. ಈ ಹೊಸ ಸೊನಾಟಾ ಎನ್ ಲೈನ್ ಕಾರು ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರು

ಹೊಸ ಸೊನಾಟಾ ಎನ್ ಲೈನ್ ಕಾರಿನ ಇಂಟಿರಿಯರ್ ಫೀಚರ್ ಬಗ್ಗೆ ಹೇಳುವುದಾದರೆ, ಸ್ಟೀಯರಿಂಗ್ ವೀಲ್, ಕಾಂಟ್ರಾಸ್ಟ್ ರೆಡ್ ಸ್ಟಿಚಿಂಗ್ ಮತ್ತು ಎನ್ ಲೈನ್ ಬ್ಯಾಡ್ಜಿಂಗ್ ಹೊಂದಿರುವ ಸ್ಪೋರ್ಟಿ ಸೀಟುಗಳು, 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಬ್ಲೂಲಿಂಕ್ ತಂತ್ರಜ್ಞಾನವನ್ನು ಹೊಂದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಅನಾವರಣವಾಯ್ತು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರು

ಇದರೊಂದಿಗೆ ಹನ್ನೆರಡು ಸ್ಪೀಕರ್ ಗಳೊಂದಿಗೆ ಬೋಸ್ ಆಡಿಯೊ ಸಿಸ್ಟಂ ಮತ್ತು 12.3-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಪಾರ್ಕಿಂಗ್ ಅಸಿಸ್ಟ್, ಹೊರಗಿನ ಬಾಗಿಲಿನ ಹ್ಯಾಂಡಲ್‌ಗಳಲ್ಲಿ ಟಚ್ ಸೆನ್ಸರ್‌ಗಳು, ರಿಮೋಟ್ ಸ್ಟಾರ್ಟ್, ವೈರ್‌ಲೆಸ್ ಚಾರ್ಜಿಂಗ್, ಡಿಜಿಟಲ್ ಕೀ ಮತ್ತು ಇತ್ಯಾದಿ ಫೀಚರ್ ಗಳನ್ನು ಹೊಂದಿವೆ.

ಅನಾವರಣವಾಯ್ತು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರು

ಇನ್ನು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರಿನಲ್ಲಿ 2.5-ಲೀಟರ್ ಟರ್ಬೋಚಾರ್ಜ್ಡ್ ಜಿಡಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 286 ಬಿಹೆಚ್‌ಪಿ ಪವರ್ ಮತ್ತು 448 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರು

ಇದು ಇದುವರೆಗಿನ ಅತ್ಯಂತ ಪವರ್ ಫುಲ್ ಸೊನಾಟಾ ಆಗಿದೆ. ಇನ್ನು ಇದರ ಎಂಜಿನ್ ಅನ್ನು 8-ಸ್ಪೀಡ್ ವೆಟ್ ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್ (ಎನ್ ಡಿಸಿಟಿ) ಯೊಂದಿಗೆ ಸಂಯೋಜಿಸಲ್ಪಟ್ಟಿದೆ.

ಅನಾವರಣವಾಯ್ತು ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಕಾರು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಪವರ್ ಫುಲ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿರುವುದರಿಂದ ಹೆಚ್ಚಿನ ಫನ್ ಡ್ರೈವಿಂಗ್ ಅನುಭವನ್ನು ನೀಡುವುದರಲ್ಲಿ ನೋ ಡೌಟ್. ಹೊಸ ಹೊಸ ಹ್ಯುಂಡೈ ಸೊನಾಟಾ ಎನ್ ಲೈನ್ ಪವರ್ ಫುಲ್ ಎಂಜಿನ್ ನೊಂದಿಗೆ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

Most Read Articles

Kannada
English summary
2021 Hyundai Sonata N Line Revealed. Read In Kannada.
Story first published: Tuesday, November 10, 2020, 19:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X