ಪವರ್‌ಫುಲ್ 2.0 ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿ

ಜೀಪ್ ಕಂಪನಿಯ ಸರಣಿಯಲ್ಲಿ ಕಂಪಾಸ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಮಾರಾಟದಲ್ಲಿರುವ ಮಾದರಿಯಾಗಿದೆ. ಜೀಪ್ ಇಂಡಿಯಾ ಕಂಪನಿಯು ತನ್ನ 2021ರ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ.

ಪವರ್‌ಫುಲ್ 2.0 ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿ

ಇದರ ನಡುವೆ ಜೀಪ್ ಇಂಡಿಯಾ ಕಂಪನಿಯು ತನ್ನ ಕಂಪಾಸ್ 7-ಸೀಟರ್ ಎಸ್‍ಯುವಿಯನ್ನು ಕೂಡ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಜೀಫ್ ಕಂಪಾಸ್ 7 ಸೀಟರ್ ಎಸ್‍ಯುವಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ. ಜೀಪ್ ಕಂಪಾಸ್ 3 ಸಾಲಿನ 7 ಸೀಟುಗಳನ್ನು ಹೊಂದಿರುವ ಎಸ್‍ಯುವಿಯಾಗಿದೆ. ಸಾಮಾನ್ಯ ಕಂಪಾಸ್‌ಗೆ ಹೋಲಿಸಿದರೆ ಜೀಪ್ ಗ್ರ್ಯಾಂಡ್ ಕಂಪಾಸ್ ಮುಂದೆ ವ್ಹೀಲ್ ಬೇಸ್ ನೊಂದಿಗೆ ಬರುವ ನಿರೀಕ್ಷೆಯಿದೆ.

ಪವರ್‌ಫುಲ್ 2.0 ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿ

ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿಯು ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ನಡೆಸಿದೆ. ಈ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿಯಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್, ಮಲ್ಟಿಜೆಟ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಪವರ್‌ಫುಲ್ 2.0 ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿ

ಈ ಡೀಸೆಲ್ ಎಂಜಿನ್ 200 ಬಿಹೆಚ್‌ಪಿ ಉತ್ಪಾದಿಸುವಂತೆ ಟ್ಯೂನ್ ಮಾಡಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೀಪ್ ಗ್ರ್ಯಾಂಡ್ ಕಂಪಾಸ್ ಎಸ್‍ಯುವಿಯ 2.0-ಲೀಟರ್ ಎಂಜಿನ್ 173 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪವರ್‌ಫುಲ್ 2.0 ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಾಗಿ ಜೋಡಿಸಿದೆ. ಆದರೆ ಹೊಸ ಎಂಜಿನ್ ಆಯ್ಕೆಯು ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚು ಪವರ್‌ಫುಲ್ ಆಗಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಪವರ್‌ಫುಲ್ 2.0 ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿ

ಹೊಸ 7-ಸೀಟರ್ ಎಸ್‍ಯುವಿಯುವಿಗೆ ಗ್ರ್ಯಾಂಡ್ ಕಂಪಾಸ್ ಎಂಬ ಹೆಸರನ್ನು ಇಡುವ ಸಾಧ್ಯತೆಗಳಿದೆ. ಜೀಪ್ ಲೋ ಡಿ ಅಥವಾ ಜೀಪ್ 598 ಎಂಬ ಎಂಬ ವೆರಿಯೆಂಟ್ ಅನ್ನು ನೀಡಬಹುದು. ಅಂತಿಮ ಸಾಲಿನ ಸೀಟುಗಳಿಗೆ ಅನುಗುಣವಾಗಿ ಮುಂದೆ ಹಿಂಭಾಗದ ಓವರ್‌ಹ್ಯಾಂಗ್ ಪಡೆಯಬಹುದು.

ಪವರ್‌ಫುಲ್ 2.0 ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿ

ಈ ಎಸ್‍ಯುವಿಯ ಸ್ಟೈಲಿಂಗ್ ಸಹ ಕಂಪಾಸ್ ಫೇಸ್‌ಲಿಫ್ಟ್ ಅನ್ನು ಆಧರಿಸಿರಬಹುದು. ಈ ಎಸ್‍ಯುವವಿಯ ದೊಡ್ಡ ಮೂರನೇ ವಿಂಡೋ ಮತ್ತು ಎಸ್-ಆಕಾರದ ಟ್ರಿಮ್ ಉದ್ದಕ್ಕೂ ರೂಫ್ ಅನ್ನು ಹೊಂದಿದೆ. ಜೀಪ್ ಗ್ರ್ಯಾಂಡ್ ಕಂಪಾಸ್ ಹೆಚ್ಚು ಪ್ರಾಮುಖ್ಯವಾದ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಪವರ್‌ಫುಲ್ 2.0 ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿ

2021 ಜೀಪ್ ಕಂಪಾಸ್ ಮರುವಿನ್ಯಾಸಗೊಳಿಸಲಾದ ಏಳು ಸ್ಲೇಟೆಡ್ ಫ್ರಂಟ್ ಗ್ರಿಲ್, ಅಗ್ರೇಸಿವ್ ಹೆಡ್‌ಲ್ಯಾಂಪ್‌ಗಳು, ಪರಿಷ್ಕೃತ ಬಂಪರ್ ಮತ್ತು ಹೊಸ ಫಾಗ್ ಲ್ಯಾಂಪ್ ಹೌಸಿಂಗ್‌ಗಳನ್ನು ಅಳವಡಿಸಲಾಗಿದೆ. ಹಿಂಭಾಗಕ್ಕೆ ಎತ್ತರದ ಪಿಲ್ಲರ್ ಗಳನ್ನು ಮತ್ತು ರ್ಯಾಕ್ಡ್ ವಿಂಡ್‌ಶೀಲ್ಡ್ ಅನ್ನು ನವೀಕರಿಸಲಾಗುತ್ತದೆ.

ಪವರ್‌ಫುಲ್ 2.0 ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಜೀಪ್ ಕಂಪಾಸ್ 7-ಸೀಟರ್ ಎಸ್‍ಯುವಿ

ಜೀಪ್ ಕಂಪಾಸ್ 7 ಸೀಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಫೋಕ್ಸ್‌ವ್ಯಾಗನ್ ಟಿಗುವಾನ್ ಆಲ್‌ಸ್ಪೇಸ್, ಹ್ಯುಂಡೈ ಟಕ್ಸನ್, ಸ್ಕೋಡಾ ಕೊಡಿಯಾಕ್ ಮತ್ತು ಟೊಯೊಟಾ ಫಾರ್ಚೂನರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Monday, November 30, 2020, 14:24 [IST]
English summary
Jeep 7-Seat Suv To Get More Powerful 2.0 Diesel. Read In Kannada.
Read more on ಜೀಪ್ jeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+