Just In
Don't Miss!
- Movies
ದುಬಾರಿ ಮೊತ್ತಕ್ಕೆ ತನ್ನ ಮನೆ ಮಾರಿದ ಕರಿಶ್ಮಾ ಕಪೂರ್
- News
ಫೆ.6ರಂದು ಮಡಿಕೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್
- Sports
ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?
- Finance
ಒಂದೇ ಬಾರಿಗೆ ಲಕ್ಷಾಂತರ ಜನರಿಂದ ಬಳಕೆ: ತಾಂತ್ರಿಕ ತೊಂದರೆ ಎದುರಿಸಿದ 'ಸಿಗ್ನಲ್'
- Lifestyle
ನಿಮ್ಮ ಮಕ್ಕಳ ಕೋಣೆಯನ್ನು ವಾಸ್ತು ಪ್ರಕಾರ ಈ ರೀತಿ ರೆಡಿ ಮಾಡಿ
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಜೀಪ್ ಗ್ರ್ಯಾಂಡ್ ಕಂಪಾಸ್ 7 ಸೀಟರ್ ಎಸ್‍ಯುವಿ
ಜೀಪ್ ಇಂಡಿಯಾ ಕಂಪನಿಯು ತನ್ನ 2021ರ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಜೀಪ್ ಕಂಪನಿಯ ಸರಣಿಯಲ್ಲಿ ಕಂಪಾಸ್ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಮಾರಾಟದಲ್ಲಿರುವ ಮಾದರಿಯಾಗಿದೆ.

ಜೀಪ್ ಕಂಪನಿಯು ತನ್ನ ಗ್ರ್ಯಾಂಡ್ ಕಂಪಾಸ್ 7 ಸೀಟರ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಜೀಫ್ ಕಂಪಾಸ್ 7 ಸೀಟರ್ ಎಸ್‍ಯುವಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದೆ. ಜೀಪ್ ಗ್ರ್ಯಾಂಡ್ ಕಂಪಾಸ್ 3 ಸಾಲಿನ 7 ಸೀಟುಗಳನ್ನು ಹೊಂದಿರುವ ಎಸ್‍ಯುವಿಯಾಗಿದೆ. ಸಾಮಾನ್ಯ ಕಂಪಾಸ್‌ಗೆ ಹೋಲಿಸಿದರೆ ಜೀಪ್ ಗ್ರ್ಯಾಂಡ್ ಕಂಪಾಸ್ ಮುಂದೆ ವ್ಹೀಲ್ ಬೇಸ್ ನೊಂದಿಗೆ ಬರುವ ನಿರೀಕ್ಷೆಯಿದೆ.

ಜೀಪ್ ಗ್ರ್ಯಾಂಡ್ ಕಂಪಾಸ್ 7 ಸೀಟರ್ ಎಸ್‍ಯುವಿಯು ಕಂಪಾಸ್ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಭಾರತದಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಎಸ್‍ಯುವಿಗಳು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಗಾಡಿವಾಡಿ ಬಹಿರಂಗಪಡಿಸಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ 7 ಸೀಟರ್ ಎಸ್‍ಯುವಿಯುವಿಗೆ ಗ್ರ್ಯಾಂಡ್ ಕಂಪಾಸ್ ಎಂಬ ಹೆಸರನ್ನು ಇಡಲಾಗಿದೆ. ಜೀಪ್ ಲೋ ಡಿ ಅಥವಾ ಜೀಪ್ 598 ಎಂಬ ಎಂಬ ವೆರಿಯೆಂಟ್ ಅನ್ನು ನೀಡಬಹುದು. ಅಂತಿಮ ಸಾಲಿನ ಸೀಟುಗಳಿಗೆ ಅನುಗುಣವಾಗಿ ಮುಂದೆ ಹಿಂಭಾಗದ ಓವರ್‌ಹ್ಯಾಂಗ್ ಪಡೆಯಬಹುದು.

ಈ ಎಸ್‍ಯುವಿಯ ಸ್ಟೈಲಿಂಗ್ ಸಹ ಕಂಪಾಸ್ ಫೇಸ್‌ಲಿಫ್ಟ್ ಅನ್ನು ಆಧರಿಸಿರಬಹುದು. ಈ ಎಸ್‍ಯುವವಿಯ ದೊಡ್ಡ ಮೂರನೇ ವಿಂಡೋ ಮತ್ತು ಎಸ್-ಆಕಾರದ ಟ್ರಿಮ್ ಉದ್ದಕ್ಕೂ ರೂಫ್ ಅನ್ನು ಹೊಂದಿದೆ. ಜೀಪ್ ಗ್ರ್ಯಾಂಡ್ ಕಂಪಾಸ್ ಹೆಚ್ಚು ಪ್ರಾಮುಖ್ಯವಾದ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ .
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2021 ಜೀಪ್ ಕಂಪಾಸ್ ಮರುವಿನ್ಯಾಸಗೊಳಿಸಲಾದ ಏಳು ಸ್ಲೇಟೆಡ್ ಫ್ರಂಟ್ ಗ್ರಿಲ್, ಅಗ್ರೇಸಿವ್ ಹೆಡ್‌ಲ್ಯಾಂಪ್‌ಗಳು, ಪರಿಷ್ಕೃತ ಬಂಪರ್ ಮತ್ತು ಹೊಸ ಫಾಗ್ ಲ್ಯಾಂಪ್ ಹೌಸಿಂಗ್‌ಗಳನ್ನು ಅಳವಡಿಸಲಾಗಿದೆ. ಹಿಂಭಾಗಕ್ಕೆ ಎತ್ತರದ ಪಿಲ್ಲರ್ ಗಳನ್ನು ಮತ್ತು ರ್ಯಾಕ್ಡ್ ವಿಂಡ್‌ಶೀಲ್ಡ್ ಅನ್ನು ನವೀಕರಿಸಲಾಗುತ್ತದೆ.

ಜೀಪ್ ಗ್ರ್ಯಾಂಡ್ ಕಂಪಾಸ್ ಆಯಿಲ್ ಬರ್ನರ್ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಇತ್ತೀಚೆಗೆ ಜೀಪ್ ಕಂಪಾಸ್ ಸರಣಿಯ ಸ್ಪೋರ್ಟ್ ರೂಪಾಂತರವನ್ನು ಸ್ಥಗಿತಗೊಳಿಸಲಾಗಿದೆ.
MOST READ: ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಜೀಪ್ ಗ್ರ್ಯಾಂಡ್ ಕಂಪಾಸ್ ಎಸ್‍ಯುವಿಯಲ್ಲಿ 2.0-ಲೀಟರ್ ಎಂಜಿನ್ 170 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಅನ್ನು ಹೊಂದಿದೆ.

ಜೀಪ್ ಕಂಪಾಸ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಜೀಪ್ ಗ್ರ್ಯಾಂಡ್ ಕಂಪಾಸ್ 7 ಸೀಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಫೋಕ್ಸ್‌ವ್ಯಾಗನ್ ಟಿಗುವಾನ್ ಆಲ್‌ಸ್ಪೇಸ್, ಹ್ಯುಂಡೈ ಟಕ್ಸನ್, ಸ್ಕೋಡಾ ಕೊಡಿಯಾಕ್ ಮತ್ತು ಟೊಯೊಟಾ ಫಾರ್ಚೂನರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.