ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಇಂಡಿಯಾ ತನ್ನ ಬಹುನಿರೀಕ್ಷಿತ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಇದೀಗ ಕಿಯಾ ಮೋಟಾರ್ಸ್ ತನ್ನ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆಯನ್ನು ಪ್ರಾರಂಭಿಸಿದ್ದಾರೆ.

ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಕಾಯ್ದಿರಿಸಿದ ಮೊದಲ ಬ್ಯಾಚ್ ಗ್ರಾಹಕರಿಗೆ ವಿತರಿಸಲಾಗಿದೆ. ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಬೆಲೆಯು.ರೂ.71 ಲಕ್ಷಗಳಿಂದ ರೂ.11.99 ಲಕ್ಷಗಳಾಗಿದೆ. ಕಿಯಾ ಕಂಪನಿಯು ತನ್ನ ಟಾಪ್ ಸ್ಪೆಕ್ ಜಿಟಿಎಕ್ಸ್ ಪ್ಲಸ್ ಡಿಸಿಟಿ ಮತ್ತು ಡೀಸೆಲ್ ಎಟಿ ಮಾದರಿಗಳನ್ನು ಬೆಲೆಯನ್ನು ಇನ್ನು ಬಹಿರಂಗಪಡಿಸಲಿಲ್ಲ. ಕಿಯಾ ಸೊನೆಟ್ ಬಿಡುಗಡೆಯಾದ ಆರಂಭದಲ್ಲೇ ಅತಿ ಹೆಚ್ಚು ಪೈಪೋಟಿ ಹೊಂದಿರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ.

ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಇತ್ತೀಚಿನ ವರದಿಗಳ ಪ್ರಕಾರ, ಕಂಪನಿಯು ಮುಂದಿನ ವಾರಗಳಲ್ಲಿ ಟಾಪ್-ಸ್ಪೆಕ್ ಮಾದರಿಗಳ ಬೆಲೆಯನ್ನು ಬಹಿರಂಗಪಡಿಸಬಹುದು. ಈ ಹಿಂದೆ ಕಿಯಾ ಸೆಲ್ಟೋಸ್ ಬಿಡುಗಡೆಗೊಳಿಸಿದ ನಂತರದ ಕೆಲವು ವಾರಗಳ ಬಳಿಕ ಬೆಲೆಯನ್ನು ಪ್ರಕಟಿಸಿದ್ದರು.

MOST READ: ಮಾರಾಟದಲ್ಲಿ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ ಕಿಯಾ ಸೆಲ್ಟೋಸ್

ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಕಿಯಾ ಸೊನೆಟ್ ಬಿಡುಗಡೆ ಸಮಯದಲ್ಲಿ ಕಂಪನಿಯು ಒಟ್ಟು 25 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಅನ್ನು ಸ್ವೀಕರಿಸಿದೆ. ಪ್ರೀ-ಬುಕ್ಕಿಂಗ್ ಪ್ರಾರಂಭವಾದ ಎರಡನೇ ದಿನದಿಂದ ದಿನಕ್ಕೆ ಸರಾಸರಿ 1000 ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ.

ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಕಿಯಾ ಕಂಪನಿಯ ಮಾಹಿತಿ ಪ್ರಕಾರ, ಕಿಯಾ ಸೊನೆಟ್ ಟಾಪ್ ಸ್ಪೆಕ್ ಜಿಟಿಎಕ್ಸ್ ಪ್ಲಸ್ ಮಾದರಿಗಳಿಗೆ ಹೆಚ್ಚಿನ ಬುಕ್ಕಿಂಗ್ ಗಳನ್ನು ಸ್ವೀಕರಿಸಲಾಗಿದೆ. ಬೇಡಿಕೆಯ ಹೆಚ್ಚಳದ ಹೊರತಾಗಿಯೂ, ಕಾಂಪ್ಯಾಕ್ಟ್-ಎಸ್‌ಯುವಿಯ ಟಾಪ್-ಸ್ಪೆಕ್ ಮಾದರಿಗಳ ಬೆಲೆಯನ್ನು ಘೋಷಿಸಿಲ್ಲ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕೊಡಿಯಾಕ್ ಎಸ್‍‍‍ಯುವಿ

ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಜಿಟಿ-ಲೈನ್ ರೂಪಾಂತರದ ಕಾಯುವ ಅವಧಿಯು ಪ್ರಸ್ತುತ 4 ರಿಂದ 5 ವಾರಗಳ ನಡುವೆ ಇದ್ದರೆ, ಟೆಕ್-ಲೈನ್ ಮಾದರಿಗಳು 8 ರಿಂದ 9 ವಾರಗಳ ಸ್ವಲ್ಪ ಹೆಚ್ಚಿನ ಕಾಯುವ ಅವಧಿಯನ್ನು ಹೊಂದಿವೆ. ಮುಂಬರುವ ವಾರಗಳಲ್ಲಿ ಉತ್ಪಾದನೆ ಹೆಚ್ಚಾಗುವುದರಿಂದ ಕಾಯುವ ಸಮಯ ಕಡಿಮೆಯಾಗುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಟಾಪ್ ಮಾದರಿಗಳಿಗೆ ಸುಮಾರು ರೂ.12.99 ಲಕ್ಷ ನಿಗದಿಪಡಿಸಬಹುದು ಎಂದು ನಿರೀಕ್ಷಿಸುತ್ತೇವೆ. ಜಿಟಿ-ಲೈನ್ ರೂಪಾಂತರದ ವೈಟಿಂಗ್ ಪಿರೇಡ್ 4 ರಿಂದ 5 ವಾರಗಳ ನಡುವೆ ಇದ್ದರೆ, ಟೆಕ್-ಲೈನ್ ರೂಪಾಂತರಗಳಿಗೆ 8 ರಿಂದ 9 ವಾರಗಳ ವೈಟಿಂಗ್ ಪಿರೇಡ್ ಹೊಂದಿದೆ.

ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಸುಮಾರು 1.5 ಲಕ್ಷ ಯುನಿಟ್‌ಗಳನ್ನು ಮೊದಲ ವರ್ಷದೊಳಗೆ ಸ್ಥಳೀಯವಾಗಿ ಮತ್ತು ರಫ್ತಿನ ಮೂಲಕ ಮಾರಾಟ ಮಾಡುವ ಗುರಿ ಹೊಂದಿದೆ. ಕಿಯಾ ಮೋಟಾರ್ಸ್ ಭಾರತದಿಂದ 70 ಕ್ಕೂ ಹೆಚ್ಚು ದೇಶಗಳಿಗೆ ಸೋನೆಟ್ ರಫ್ತು ಮಾಡಲಿದ್ದು, ಬಿಡುಗಡೆಯಾದ ಮೊದಲ ವರ್ಷದೊಳಗೆ 50,000 ಯುನಿಟ್‌ಗಳನ್ನು ರಫ್ತು ಮಾಡಲಿದೆ.

ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.2-ಲೀಟರ್ ಯುನಿಟ್ ಮತ್ತು 1.0-ಲೀಟರ್ ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ 1.2-ಲೀಟರ್ ಯುನಿಟ್ 84 ಬಿಹೆಚ್‌ಪಿ ಪವರ್ ಮತ್ತು 115 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್‌ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇನ್ನು ಟಾಪ್ ಸ್ಪೆಕ್ 1.0-ಲೀಟರ್ ಯುನಿಟ್ 119 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಅಥವಾ 6-ಸ್ಪೀಡ್ ಐಎಂಟಿ ಅನ್ನು ಜೋಡಿಸಲಾಗಿದೆ.

ಹೊಸ ಸೊನೆಟ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆ ಆರಂಭಿಸಿದ ಕಿಯಾ ಮೋಟಾರ್ಸ್

ಇನ್ನು ಈ ಕಾಂಪ್ಯಾಕ್ಟ್ ಎಸ್‍ಯುವಿಯ ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, 1.5-ಲೀಟರ್ ಡೀಸೆಲ್ ಡಬ್ಲ್ಯುಜಿಟಿ ಎಂಜಿನ್ 99 ಬಿಹೆಚ್‌ಪಿ ಪವರ್ ಮತ್ತು 240 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ವಿಜಿಟಿ ಎಂಜಿನ್ 114 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

More from DriveSpark

Article Published On: Monday, September 21, 2020, 13:49 [IST]
English summary
Kia Sonet Deliveries Commence For First Batch Customers Across India In India. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+