ಬಿಡುಗಡೆಗೆ ಒಂದೇ ದಿನ ಬಾಕಿ- ಹೊಸ ನೀರಿಕ್ಷೆಯಲ್ಲಿ ಕಿಯಾ ಸೊನೆಟ್

ಕಿಯಾ ಮೋಟಾರ್ಸ್ ಕಂಪನಿಯು ಸೊನೆಟ್ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಕಾರು ಮಾರಾಟದಲ್ಲಿ ಹೊಸ ಅಧ್ಯಾಯಕ್ಕೆ ಸಜ್ಜುಗೊಂಡಿದ್ದು, ನಾಳೆ(ಸೆಪ್ಟೆಂಬರ್ 18) ಬಿಡುಗಡೆಯಾಗಲಿರುವ ಸೊನೆಟ್ ಕಾರು ಹಲವು ಹೊಸ ದಾಖಲೆಗಳಿಗೆ ಮುನ್ನುಡಿಯಾಗಲಿದೆ.

ಬಿಡುಗಡೆಗೆ ಒಂದೇ ದಿನ ಬಾಕಿ- ಹೊಸ ನೀರಿಕ್ಷೆಯಲ್ಲಿ ಕಿಯಾ ಸೊನೆಟ್

ಸೆಲ್ಟೊಸ್ ಮತ್ತು ಕಾರ್ನಿವಾಲ್ ನಂತರ ಸೊನೆಟ್ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಹೊಸ ದಾಖಲೆಗೆ ಕಾರಣವಾಗಲಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರು ಪ್ರಮುಖ ಮೂರು ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆ ಪಡೆದುಕೊಳ್ಳಲಿದೆ. ಜಿಟಿ ಲೈನ್ ಮತ್ತು ಟೆಕ್ ಲೈನ್ ಹೊಂದಿರುವ ಹೊಸ ಕಾರು ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಹಾಗೂ ಜಿಟಿಎಕ್ಸ್ ಪ್ಲಸ್ ಎಂಬ ಆರು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಂಟು ಮೊನೊ-ಟೋನ್ ಮತ್ತು ಮೂರು ಡ್ಯುಯಲ್ ಟೋನ್‌ ಬಣ್ಣಗಳ ಆಯ್ಕೆ ಪಡೆದಿದೆ.

ಬಿಡುಗಡೆಗೆ ಒಂದೇ ದಿನ ಬಾಕಿ- ಹೊಸ ನೀರಿಕ್ಷೆಯಲ್ಲಿ ಕಿಯಾ ಸೊನೆಟ್

ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಕಿಯಾ ಸೊನೆಟ್ ಆವೃತ್ತಿಯ ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಭರ್ಜರಿ ನೀಡುವ ತವಕದಲ್ಲಿದೆ.

ಬಿಡುಗಡೆಗೆ ಒಂದೇ ದಿನ ಬಾಕಿ- ಹೊಸ ನೀರಿಕ್ಷೆಯಲ್ಲಿ ಕಿಯಾ ಸೊನೆಟ್

ಶಾರ್ಪ್ ಸ್ಟೈಲಿಷ್ ಲುಕ್ ಹೊಂದಿರುವ ಹೊಸ ಕಿಯಾ ಸೊನೆಟ್ ಕಾರಿನಲ್ಲಿ ಕ್ರೌನ್ ಜ್ಯುವೆಲ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್ ಮತ್ತು ಟರ್ನ್ ಇಂಡಿಕೇಟರ್, ಎಲ್ಇಡಿ ಪ್ರೋಜೆಕ್ಟರ್ ಫಾಗ್ ಲ್ಯಾಂಪ್, ಹಾರ್ಟ್‌ಬೀಟ್ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಟೈಲ್ ಲೈಟ್‌ಗೆ ಹೊಂದಿಕೊಂಡಿರುವ ರಿಪ್ಲೆಕ್ಟರ್ ಸ್ಟ್ಪೀಪ್ ಆಕರ್ಷಕವಾಗಿದೆ.

ಬಿಡುಗಡೆಗೆ ಒಂದೇ ದಿನ ಬಾಕಿ- ಹೊಸ ನೀರಿಕ್ಷೆಯಲ್ಲಿ ಕಿಯಾ ಸೊನೆಟ್

ಹಾಗೆಯೇ ಕಾರಿನ ಇಂಟಿರಿಯರ್ ಕೂಡಾ ಆಕರ್ಷಕವಾಗಿದ್ದು, ಆರಾಮದಾಯಕ ಆಸನ ಸೌಲಭ್ಯದೊಂದಿಗೆ ರಿಯರ್ ಎಸಿ ವೆಂಟ್ಸ್, ಎಲೆಕ್ಟ್ರಿಕ್ ಸನ್‌ರೂಫ್, ಏರ್ ಪ್ಲೂರಿಫ್ಲೈರ್, ವೆಂಟಿಲೆಟೆಡ್ ಫ್ರಂಟ್ ಸೀಟ್ ಮತ್ತು ವಿವಿಧ ಫೀಚರ್ಸ್ ಒಂದೇ ಸೂರಿನಡಿ ನಿಯಂತ್ರಣ ಮಾಡಬಲ್ಲ ಯುವಿಒ ಕನೆಟೆಡ್ ಟೆಕ್ನಾಲಜಿ ಸಹ ಈ ಕಾರಿನಲ್ಲಿದೆ.

ಕಾರಿನ ಒಳಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ ಅಲ್ಲಲ್ಲಿ ಸಿಲ್ವರ್ ಆಕ್ಸೆಂಟ್ ಜೋಡಿಸಿದ್ದು, ಗೇರ್ ಲೀವರ್, ಸ್ಟೀರಿಂಗ್ ವೀಲ್ಹ್, ಎಸಿ ವೆಂಟ್ಸ್ ಸುತ್ತ ಸಿಲ್ವರ್ ಆಕ್ಸೆಂಟ್ ನೀಡಲಾಗಿದೆ. ಇದು ಕಾರಿನ ಒಳಭಾಗದ ಖದರ್ ಹೆಚ್ಚಿಸಿರುವುದಲ್ಲದೆ ಲೆದರ್ ವ್ಯಾರ್ಪ್ ಆಸನಗಳು, ವೈರ್ ಲೆಸ್ ಚಾರ್ಜರ್ ಪ್ರಮುಖವಾಗಿರಲಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಬಿಡುಗಡೆಗೆ ಒಂದೇ ದಿನ ಬಾಕಿ- ಹೊಸ ನೀರಿಕ್ಷೆಯಲ್ಲಿ ಕಿಯಾ ಸೊನೆಟ್

ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ವೆನ್ಯೂ ಕಾರಿನಿಂದ ಎರವಲು ಪಡೆದುಕೊಂಡಿರುವ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ 1.-0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯ ಆಯ್ಕೆ ನೀಡಲಾಗಿದೆ.

ಬಿಡುಗಡೆಗೆ ಒಂದೇ ದಿನ ಬಾಕಿ- ಹೊಸ ನೀರಿಕ್ಷೆಯಲ್ಲಿ ಕಿಯಾ ಸೊನೆಟ್

1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ, 1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಇಂಟೆಲಿಜೆಂಟ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದೆ. ಟರ್ಬೋ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, ಜಿಟಿ ಲೈನ್ ಮಾದರಿಯಾಗಿರುವ ಟರ್ಬೋ ಮಾದರಿಯೇ ಸೊನೆಟ್ ಕಾರಿನ ಹೈಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬಿಡುಗಡೆಗೆ ಒಂದೇ ದಿನ ಬಾಕಿ- ಹೊಸ ನೀರಿಕ್ಷೆಯಲ್ಲಿ ಕಿಯಾ ಸೊನೆಟ್

ಹೊಸ ಕಾರು ವಿವಿಧ ವೆರಿಯೆಂಟ್ ಮತ್ತು ಎಂಜಿನ್ ಆಯ್ಕೆಗಳಿಗೆ ಅನುಗುಣವಾಗಿ ದೆಹಲಿ ಪ್ರಕಾರ ಆರಂಭಿಕವಾಗ ರೂ.7 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.12.50 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರು ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಗ್ರಾಹಕರು ರೂ.25 ಸಾವಿರ ಮುಂಗಡ ಪಾತಿಸಿದ್ದಾರೆ.

Article Published On: Thursday, September 17, 2020, 18:49 [IST]
English summary
New Kia Sonet India Launch Tomorrow. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+