ಕಿಯಾ ಸೊನೆಟ್ ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಮುಂದಿನ ತಿಂಗಳು ಸೆಪ್ಟೆಂಬರ್ ಆರಂಭದಲ್ಲಿ ಬಿಡುಗಡೆಗಾಗಿ ಸಿದ್ದವಾಗಿರುವ ಕಿಯಾ ಸೊನೆಟ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಸೊನೆಟ್ ಕಾರಿನ ಅಧಿಕೃತ ಮೈಲೇಜ್ ಮಾಹಿತಿಯು ಸಾಮಾಜಿಕ ತಾಣಗಳಲ್ಲಿ ಸೋರಿಕೆಯಾಗಿದೆ.

ಕಿಯಾ ಸೊನೆಟ್ ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಸೊನೆಟ್ ಕಾರು ಗ್ರಾಹಕರ ಬೇಡಿಕೆಯೆಂತೆ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಹಲವು ವಿಶೇಷತೆಗಳೊಂದಿಗೆ ರಸ್ತೆಗಿಳಿಯುತ್ತಿದ್ದು, ಹೊಸ ಕಾರು ಖರೀದಿಗಾಗಿ ಈಗಾಗಲೇ 10 ಸಾವಿರಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್ ಸಲ್ಲಿಸಿದ್ದಾರೆ. ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿರುವ ಸೊನೆಟ್ ಕಾರು ಮೂರು ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಮಾದರಿಯನ್ನು ಪಡೆದುಕೊಂಡಿರಲಿದೆ.

ಕಿಯಾ ಸೊನೆಟ್ ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಕಾರು ಮಾದರಿಯು ಮ್ಯಾನುವಲ್ ಆವೃತ್ತಿಯೊಂದಿಗೆ ಪ್ರತಿ ಲೀಟರ್‌ಗೆ 18.4 ಕಿ.ಮೀ ಮೈಲೇಜ್ ನೀಡಿದ್ದಲ್ಲಿ 1.5-ಲೀಟರ್ ಡೀಸೆಲ್ ಮಾದರಿಯು ಮ್ಯಾನುವಲ್ ಆವೃತ್ತಿಯಲ್ಲಿ ಪ್ರತಿ ಲೀಟರ್‌ಗೆ 24.1 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಆಟೋಮ್ಯಾಟಿಕ್ ಆವೃತ್ತಿಯು 19 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಕಿಯಾ ಸೊನೆಟ್ ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಇನ್ನು ಪರ್ಫಾಮೆನ್ಸ್ ಮಾದರಿಯಾದ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು ಐಎಂಟಿ ಗೇರ್‌ಬಾಕ್ಸ್ ಮಾದರಿಯಲ್ಲಿ ಪ್ರತಿ ಲೀಟರ್‌ಗೆ 18.2 ಕಿ.ಮೀ ಮೈಲೇಜ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ 18.3 ಕಿ.ಮೀ ಮೈಲೇಜ್ ನೀಡಲಿದೆ. ಈ ಮೂಲಕ ಹೊಸ ಕಾರಿನ ಪೆಟ್ರೋಲ್ ಮಾದರಿಯು ಸೊನ್ನೆಯಿಂದ 100ಕಿ.ಮೀ ವೇಗ ಪಡೆದುಕೊಳ್ಳಲು 13.3 ಸೆಕೆಂಡ್ ಕಾಲಾವಕಾಶ ತೆಗೆದುಕೊಂಡಲ್ಲಿ ಡೀಸೆಲ್ ಮಾದರಿಯು 12.2 ಸೆಕೆಂಡ್ ಮತ್ತು ಟರ್ಬೋ ಪೆಟ್ರೋಲ್ ಮಾದರಿಯು 11.3 ಸೆಕೆಂಡ್‌ನಲ್ಲಿ ಸೊನ್ನೆಂಯಿಂದ 100ಕಿ.ಮೀ ವೇಗ ಸಾಧಿಸಲಿದೆ.

ಕಿಯಾ ಸೊನೆಟ್ ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಇನ್ನು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಸಬ್ ಫೋರ್ ಮೀಟರ್ ಕಾರು ಮಾದರಿಗಳಲ್ಲೇ ವಿಶೇಷ ವಿನ್ಯಾಸ ಮತ್ತು ಎಂಜಿನ್ ಆಯ್ಕೆ ಹೊಂದಿರುವ ಸೊನೆಟ್ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 17 ವೆರಿಯೆಂಟ್‌ಗಳೊಂದಿಗೆ ಟೆಕ್ ಲೈನ್ ಮತ್ತು ಜಿಟಿ ಲೈನ್ ಮಾದರಿಗಳಲ್ಲಿ ಮಾರಾಟಗೊಳ್ಳಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕಿಯಾ ಸೊನೆಟ್ ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಶಾರ್ಪ್ ಸ್ಟೈಲಿಷ್ ಲುಕ್ ಹೊಂದಿರುವ ಹೊಸ ಕಿಯಾ ಸೊನೆಟ್ ಕಾರಿನಲ್ಲಿ ಕ್ರೌನ್ ಜ್ಯುವೆಲ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್ ಮತ್ತು ಟರ್ನ್ ಇಂಡಿಕೇಟರ್, ಎಲ್ಇಡಿ ಪ್ರೋಜೆಕ್ಟರ್ ಫಾಗ್ ಲ್ಯಾಂಪ್, ಹಾರ್ಟ್‌ಬೀಟ್ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಟೈಲ್ ಲೈಟ್‌ಗೆ ಹೊಂದಿಕೊಂಡಿರುವ ರಿಪ್ಲೆಕ್ಟರ್ ಸ್ಟ್ಪೀಪ್ ಆಕರ್ಷಕವಾಗಿದೆ.

ಕಿಯಾ ಸೊನೆಟ್ ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಹಾಗೆಯೇ ಕಾರಿನ ಇಂಟಿರಿಯರ್ ಕೂಡಾ ಆಕರ್ಷಕವಾಗಿದ್ದು, ಆರಾಮದಾಯಕ ಆಸನ ಸೌಲಭ್ಯದೊಂದಿಗೆ ರಿಯರ್ ಎಸಿ ವೆಂಟ್ಸ್, ಎಲೆಕ್ಟ್ರಿಕ್ ಸನ್‌ರೂಫ್, ಏರ್ ಪ್ಲೂರಿಫ್ಲೈರ್, ವೆಂಟಿಲೆಟೆಡ್ ಫ್ರಂಟ್ ಮತ್ತು ವಿವಿಧ ಫೀಚರ್ಸ್ ಒಂದೇ ಸೂರಿನಡಿ ನಿಯಂತ್ರಣ ಮಾಡಬಲ್ಲ ಯುವಿಒ ಕನೆಟೆಡ್ ಟೆಕ್ನಾಲಜಿ ಸಹ ಈ ಕಾರಿನಲ್ಲಿದೆ. ಕಾರಿನ ಒಳಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ ಅಲ್ಲಲ್ಲಿ ಸಿಲ್ವರ್ ಆಕ್ಸೆಂಟ್ ಸಹ ನೀಡಲಾಗಿದ್ದು, ಗೇರ್ ಲೀವರ್, ಸ್ಟೀರಿಂಗ್ ವೀಲ್ಹ್, ಎಸಿ ವೆಂಟ್ಸ್ ಸುತ್ತ ನೀಡಲಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಕಿಯಾ ಸೊನೆಟ್ ಕಾರಿನ ಅಧಿಕೃತ ಮೈಲೇಜ್ ಮಾಹಿತಿ ಬಹಿರಂಗ

ಈ ಮೂಲಕ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿರುವ ಹೊಸ ಕಾರು ಸೆಪ್ಟೆಂಬರ್ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಫೀಚರ್ಸ್‌ಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7 ಲಕ್ಷದಿಂದ ರೂ.11.50 ಲಕ್ಷ ಬೆಲೆ ಅಂತದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

Article Published On: Tuesday, August 25, 2020, 14:10 [IST]
English summary
Kia Sonet Mileage, Acceleration Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+