ಬಿಡುಗಡೆಯಾಗಲಿದೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ

ಲ್ಯಾಂಡ್ ರೋವರ್ ಕಂಪನಿಯು ಹೊಸ ಡಿಫೆಂಡರ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಎಸ್‍‍ಯುವಿಯು ಜಾಗತಿಕವಾಗಿ ಅನಾವರಣಗೊಂಡ ಬಳಿಕ 2020ರ ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಸಂಚಲವನ್ನು ಸೃಷ್ಟಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಎಸ್‍‍ಯುವಿಗೆ ಸಾಕಷ್ಟು ಬೇಡಿಕೆಯನ್ನು ಗಳಿಸಿದೆ.

ಬಿಡುಗಡೆಯಾಗಲಿದೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ

ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯನ್ನು 90 ಹಾರ್ಡ್ ಟಾಪ್ ಮತ್ತು 110 ಹಾರ್ಡ್ ಟಾಪ್ ಎಂಬ ಎರಡು ಕಮರ್ಷಿಯಲ್ ಮಾದರಿಗಳಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯ 4x4 ಸರಣಿಯ ಭಾಗವಾಗಲಿದೆ. ಲ್ಯಾಂಡ್ ರೋವರ್ ಡಿಫೆಂಡರ್ 90 ಹಾರ್ಡ್ ಟಾಪ್ ಮತ್ತು 110 ಹಾರ್ಡ್ ಟಾಪ್ ಆವೃತ್ತಿಗಳಲ್ಲಿ ಹೊಸ ಕನೆಕ್ಟಿವಿಟಿ ಫೀಚರುಗಳನ್ನು ಹೊಂದಿರಲಿದೆ. ಈ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಉತ್ತಮ ಆಫ್ ರೋಡ್ ಎಸ್‍ಯುವಿಯಾಗಿದೆ.

ಬಿಡುಗಡೆಯಾಗಲಿದೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ

ಲ್ಯಾಂಡ್ ರೋವರ್‍‍ನ ಹಾರ್ಡ್ ಟಾಪ್ ಮಾದರಿಗಳನ್ನು ಹೊಸ ಟಿ7 ಎಕ್ಸ್ ಆರ್ಕಿಟೆಕ್ಚರ್ ಮೇಲೆ ನಿರ್ಮಾಣವಾಗಿದೆ. ಈ ಹೊಸ ಕಾರಿನಲ್ಲಿ ಅಲ್ಯುಮಿನಿಯಂ ಮೊನೊಕಾಕ್ ಚಾಸೀಸ್ ಅಳವಡಿಸಲಾಗಿದೆ. ಈ ಚಾಸೀಸ್ ಹಳೆಯ ಮಾದರಿಯ ಕಾರಿನಲ್ಲಿರುವ ಚಾಸೀಸ್‍‍ಗಿಂತ ಹೆಚ್ಚಿನ ಪ್ರಮಾಣದ ಸ್ಥಿರತೆ ಹಾಗೂ ಸುರಕ್ಷತೆಯನ್ನ್ಯ್ ಹೊಂದಿರುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಗಲಿದೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ

ಈ ಎರಡು ಮಾದರಿಗಳ ಪೈಕಿ 90 ಮಾದರಿಯು 6 ಸೀಟುಗಳನ್ನು ಹೊಂದಿದ್ದರೆ, 110 ಮಾದರಿಯು 7 ಸೀಟುಗಳನ್ನು ಹೊಂದಿದೆ. ಮೂರನೇ ಸಾಲಿನಲ್ಲಿರುವ ಸೀಟುಗಳನ್ನು ಮಡುಚಿದರೆ, 1,075 ಲೀಟರ್‍‍ನಷ್ಟು ಬೂಟ್ ಸ್ಪೇಸ್ ದೊರೆತರೆ, ಎರಡನೇ ಸಾಲಿನ ಸೀಟುಗಳನ್ನು ಮಡುಚುವುದರಿಂದ 2,380 ಲೀಟರ್‍‍ನಷ್ಟು ಬೂಟ್‍ ಸ್ಪೇಸ್ ಜಾಗ ಸಿಗಲಿದೆ.

ಬಿಡುಗಡೆಯಾಗಲಿದೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ

ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍‍ಯುವಿ ಉತ್ತಮವಾದ ಆಫ್ ರೋಡ್ ಮಾದರಿಯಾಗಿರಲಿದೆ. ಈ ಹೊಸ ತಲೆಮಾರಿನ ಎಸ್‍‍ಯುವಿ ಹಲವಾರು ಹೊಸ ಫೀಚರ್‍‍ಗಳನ್ನು ಹೊಂದಿರಲಿದೆ. ಈ ಎಸ್‍‍ಯುವಿಯು 3,720 ಕೆ.ಜಿಯಷ್ಟು ತೂಕವನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬಿಡುಗಡೆಯಾಗಲಿದೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ

ಈ ಎಸ್‍‍ಯುವಿಯ ರೂಫ್‍‍ನ ತೂಕವು 300 ಕೆಜಿಯಷ್ಟಿದೆ. ಡಿಫೆಂಡರ್ 291 ಎಂಎಂನಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಯಾವುದೇ ರಸ್ತೆಯನ್ನೇ ಆಗಲಿ ಸರಾಗವಾಗಿ ದಾಟುವಂತಹ ಸಾಮರ್ಥ್ಯವನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ

ಹೊಸ ಎಸ್‍‍ಯುವಿಯನ್ನು ಎರಡು ಪೆಟ್ರೋಲ್ ಹಾಗೂ ಎರಡು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಪೆಟ್ರೋಲ್ ಮಾದರಿಯು ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿಯನ್ನು ಹೊಂದಿದೆ. ಈ ಎಸ್‍‍ಯುವಿಯು ಪ್ಲಗ್ ಇನ್ ಹೈಬ್ರಿಡ್ ಮಾದರಿಯನ್ನು ಸಹ ಹೊಂದಿರಲಿದೆ. ಈ ಎಸ್‍‍ಯುವಿಯಲ್ಲಿ 8 ಸ್ಪೀಡ್‍‍ನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

MOST READ: ಹೊಸ ಹೋಂಡಾ ಸಿಟಿ ಕಾರಿನ ಟೀಸರ್ ಬಿಡುಗಡೆ

ಬಿಡುಗಡೆಯಾಗಲಿದೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ

ಆಫ್ ರೋಡ್ ಸಾಮರ್ಥ್ಯದ ಈ ಎಸ್‍‍ಯುವಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅಳವಡಿಸಲಾಗಿದೆ. ಇದರಲ್ಲಿರುವ ರೇರ್ ಲಾಕಿಂಗ್ ಡಿಫರೆನ್ಶಿಯಲ್ ಈ ಎಸ್‍‍ಯುವಿಯನ್ನು ಪೂರ್ಣ ಪ್ರಮಾಣದ ಆಫ್ ರೋಡ್ ವಾಹನವನ್ನಾಗಿಸಿದೆ. ಈ ಎಸ್‍‍ಯುವಿಯಲ್ಲಿ ಟೆರೇನ್ 2 ರೆಸ್ಪಾನ್ಸ್ ಸಿಸ್ಟಂ ಎಂಬ ಆಫ್ ರೋಡ್ ಟೆಕ್ನಾಲಜಿಯನ್ನು ಸಹ ಅಳವಡಿಸಲಾಗಿದೆ.

ಬಿಡುಗಡೆಯಾಗಲಿದೆ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ

ಲ್ಯಾಂಡ್ ರೋವರ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಡಿಫೆಂಡರ್ ಎಸ್‍ಯುವಿಯ ಹಿಂದಿನ ಮಾದರಿಯನ್ನು ಬಿಡುಗಡೆಗೊಳಿಸಿದ್ದರು. ಇದೀಗ ಲ್ಯಾಂಡ್ ರೋವರ್ ಕಂಪನಿಯು ಡಿಫೆಂಡರ್ ಎಸ್‍ಯುವಿಯ ಹಾರ್ಡ್ ಟಾಪ್ 90 ಮತ್ತು 110 ಕಮರ್ಷಿಯಲ್ ಮಾದರಿಗಳನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಲಿದೆ.

Article Published On: Tuesday, June 30, 2020, 20:36 [IST]
English summary
Land Rover Defender HardTop Commercial Model Confirmed. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+