ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ.11.90 ಲಕ್ಷದಿಂದ ಆರಂಭ

ಅಕ್ಟೋಬರ್ 2ರಂದು ಬಿಡುಗಡೆಯಾದ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಅತಿ ಕಡಿಮೆಯಲ್ಲಿ ಮೊದಲ ಬಾರಿಗೆ ಅತ್ಯಧಿಕ ಬೇಡಿಕೆ ಪಡೆದುಕೊಂಡಿದ್ದು, ಹೊಸ ಕಾರು ಖರೀದಿಗಾಗಿ ಇದುವರೆಗೆ ಸುಮಾರು 20 ಸಾವಿರಕ್ಕೂ ಅಧಿಕ ಬುಕ್ಕಿಂಗ್ ದಾಖಲಾಗಿದೆ.

ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ. 11.90 ಲಕ್ಷದಿಂದ ಆರಂಭ

ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಎರಡು ಮಾದರಿಗಳಲ್ಲೂ ಸಾಫ್ಟ್ ಮತ್ತು ಹಾರ್ಡ್ ಟಾಪ್ ವರ್ಷನ್‌ಗಳನ್ನು ನೀಡಲಾಗಿದೆ. ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಆರಂಭಿಕ ಆವೃತ್ತಿಗಿಂತಲೂ ಟಾಪ್ ಎಂಡ್ ಮಾದರಿಗಳಾದ ಡೀಸೆಲ್ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚು ಬೇಡಿಕೆ ಹರಿದುಬರುತ್ತಿದೆ.

ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ. 11.90 ಲಕ್ಷದಿಂದ ಆರಂಭ

ಗ್ರಾಹಕರ ಬೇಡಿಕೆಯೆಂತೆ ಮಹೀಂದ್ರಾ ಕಂಪನಿಯು ಥಾರ್ ಕಾರಿನ ಆರಂಭಿಕ ಆವೃತ್ತಿಯಾದ ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಸ್ಟ್ಯಾಂಡರ್ಡ್ ಟಾಪ್ ಪೆಟ್ರೋಲ್ ಮ್ಯಾನುವಲ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಪೆಟ್ರೋಲ್ ಮ್ಯಾನುವಲ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಡೀಸೆಲ್ ಮ್ಯಾನುವಲ್ ಆವೃತ್ತಿಗಳ ಮಾರಾಟ ಕೈಬಿಡಲು ನಿರ್ಧರಿಸಿದೆ.

ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ. 11.90 ಲಕ್ಷದಿಂದ ಆರಂಭ

ಎಎಕ್ಸ್ ವೆರಿಯೆಂಟ್‌ನಲ್ಲಿ ಮೊದಲ ಮೂರು ಮಾದರಿಗಳ ಮಾಹಿತಿಯನ್ನು ಈಗಾಗಲೇ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದ್ದು, ಥಾರ್ ಕಾರಿನ ಆರಂಭಿಕ ಮಾದರಿಯು ಬೆಲೆಯು ಇದೀಗ ರೂ. 9.80 ಲಕ್ಷದಿಂದ ರೂ.11.90 ಲಕ್ಷಕ್ಕೆ ಏರಿಕೆಯಾಗಿದೆ.

ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ. 11.90 ಲಕ್ಷದಿಂದ ಆರಂಭ

ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಸ್ಟ್ಯಾಂಡರ್ಡ್ ಟಾಪ್ ಪೆಟ್ರೋಲ್ ಮ್ಯಾನುವಲ್, ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಪೆಟ್ರೋಲ್ ಮ್ಯಾನುವಲ್ ಮತ್ತು ಎಎಕ್ಸ್ ಸಿಕ್ಸ್ ಸೀಟರ್ ಸಾಫ್ಟ್ ಟಾಪ್ ಡೀಸೆಲ್ ಮ್ಯಾನುವಲ್ ಆವೃತ್ತಿಗಳ ಸ್ಥಗಿತ ನಂತರದ ಎಎಕ್ಸ್ ಫೋರ್ ಸೀಟರ್ ಕನ್ವರ್ಟಿಬಲ್ ಡೀಸೆಲ್ ಮ್ಯಾನುವಲ್ ಮಾದರಿಯು ಆರಂಭಿಕ ಮಾದರಿಯಾಗಿದೆ. ಇನ್ನು ಆರಂಭಿಕ ಕಾರು ಮಾದರಿಗಳ ಸ್ಥಗಿತ ಬಗ್ಗೆ ನಿಖರ ಕಾರಣ ನೀಡದ ಮಹೀಂದ್ರಾ ಕಂಪನಿಯು ಹೊಸ ಮಾದರಿಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಕಳೆದ ವಾರದಿಂದ ಸ್ಥಗಿತಗೊಳಿಸಿತ್ತು.

ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ. 11.90 ಲಕ್ಷದಿಂದ ಆರಂಭ

ಇದೀಗ ಆರಂಭಿಕ ಮಾದರಿಯ ಮಾಹಿತಿಯನ್ನೇ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಿದ್ದು, ಇನ್ನುಳಿದ ಕಾರು ಮಾದರಿಗಳ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬದಲಾವಣೆಗೊಳಿಸಿಲ್ಲ. ಹೊಸ ಕಾರಿನಲ್ಲಿ 2.2-ಲೀಟರ್ ಡೀಸೆಲ್ ಎಂಜಿನ್ ಮತ್ತು ಹೊಸದಾಗಿ ಅಭಿವೃದ್ದಿಗೊಳಿಸಲಾದ 2.-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ.

ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ. 11.90 ಲಕ್ಷದಿಂದ ಆರಂಭ

ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದ್ದು, ಡೀಸೆಲ್ ಮಾದರಿಯು 132-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 152-ಬಿಎಚ್‌ಪಿ, 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ. 11.90 ಲಕ್ಷದಿಂದ ಆರಂಭ

ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದ್ದು, ಗ್ರಾಹಕರು ತಮ್ಮ ಬೇಡಿಕೆ ಅನುಗುಣವಾಗಿ ಎಎಕ್ಸ್ ಮ್ಯಾನುವಲ್ ಮತ್ತು ಎಲ್ಎಕ್ಸ್ ಮಾದರಿಯಲ್ಲಿ ಕನ್ವರ್ಟಿಬಲ್ ಮತ್ತು ಹಾರ್ಡ್ ಟಾಪ್ ಆಯ್ಕೆ ಮಾಡಬಹುದಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ. 11.90 ಲಕ್ಷದಿಂದ ಆರಂಭ

ಹೊಸ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಮತ್ತು ಮಾರ್ಡನ್ ವಿನ್ಯಾಸಗಳನ್ನು ಹೊಂದಿದ್ದು, ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋಗೆ ಸರ್ಪೋಟ್ ಮಾಡಬಲ್ಲ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಲ್ಲಾ ಮಾದರಿಯ ಹವಾಗುಣವನ್ನು ತಡೆಯಬಲ್ಲ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಸೌಲಭ್ಯ ನೀಡಲಾಗಿದೆ.

ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ. 11.90 ಲಕ್ಷದಿಂದ ಆರಂಭ

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಸೆಫ್ಟಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್, ರಿಯರ್ ವ್ಯೂ ಕ್ಯಾಮೆರಾ ಜೋಡಿಸಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ನ್ಯೂ ಜನರೇಷನ್ ಥಾರ್ ಎಎಕ್ಸ್ ವೆರಿಯೆಂಟ್ ಸ್ಥಗಿತ- ಹೊಸ ಕಾರಿನ ಬೆಲೆ ರೂ. 11.90 ಲಕ್ಷದಿಂದ ಆರಂಭ

ಹಾಗೆಯೇ ಎಲ್ಇಡಿ ಡಿಆರ್‌ಎಲ್ ಫಾಗ್ ಲ್ಯಾಂಪ್ಸ್, ಎಂಟು ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಆಟೋ ಎಸಿ, ಇಎಸ್‌ಪಿ ಮತ್ತು 226-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಆಫ್ ರೋಡ್‌ನಲ್ಲಿ ಮತ್ತಷ್ಟು ಗಮನಸೆಳೆಯಲಿದೆ.

More from DriveSpark

Article Published On: Monday, November 9, 2020, 20:15 [IST]
English summary
New Mahindra Thar Base ‘AX’ Trims Removed From Website. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+