ಬಿಡುಗಡೆಯಾಯ್ತು ಹೊಸ ಮರ್ಸಿಡಿಸ್ ಎಎಂಜಿ ಸಿ 63 ಕೂಪೆ ಕಾರು
ಮರ್ಸಿಡಿಸ್ ಬೆಂಝ್ ಕಂಪನಿಯು ಹೊಸ ಎಎಂಜಿ ಸಿ 63 ಕೂಪೆ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಮರ್ಸಿಡಿಸ್ ಎಎಂಜಿ ಸಿ 63 ಕೂಪೆ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.33 ಗಳಾಗಿದೆ.

ಹೊಸ ಮರ್ಸಿಡಿಸ್-ಎಎಂಜಿ ಸಿ 63 ಕೂಪೆ ಕಾರು ಬ್ರ್ಯಾಂಡ್‍ನ ಸಿ-ಕ್ಲಾಸ್ ಸರಣಿಯಲ್ಲಿ ಅಗ್ರಸ್ಥಾನವನ್ನು ಹೊಂದಿದೆ. ಈ ಹೊಸ ಸಿ 63 ಕೂಪೆ ವಿನ್ಯಾಸ ಮತ್ತು ಇಂಟಿರಿಯರ್ ಗಳಲ್ಲಿಯು ಕೂಡ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಎಎಂಜಿ ಸಿ 63 ಕೂಪೆ ಬ್ರ್ಯಾಂಡ್‍ನ ಪನಾಮೆರಿಕಾನಾ ಗ್ರಿಲ್ ಅನ್ನು ಮುಂಭಾಗದಲ್ಲಿ ಅಳವಡಿಸಿದೆ. ಎಎಂಜಿ ಕೂಪೆ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಹೊಸ ಸೆಟ್ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಸಹ ಹೊಂದಿದೆ. ಇದರೊಂದಿಗೆ ಮುಂಭಾಗ ಬಂಪರ್ ಜೊತೆ ದೊಡ್ಡ ಏರ್ ಟೇಕ್ ಅನ್ನು ಹೊಂದಿದೆ.

ಈ ಹೊಸ ಕಾರಿನ ಇತರ ಸ್ಟೈಲಿಂಗ್ ಫೀಚರ್ ಗಳು ಮತ್ತು ನವೀಕರಣಗಳಿಂದಾಗಿ ಹೆಚ್ಚು ಆಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಹೊಸ ಕಾರಿನಲ್ಲಿ 18-ಇಂಚಿನ ಅಲಾಯ್ ವ್ಹೀಲ್ಸ್, ಎಲ್ಇಡಿ ಟೈಲ್‌ಲೈಟ್ಸ್ ಮತ್ತು ಹಿಂಭಾಗದಲ್ಲಿ ಹೊಸ ಎಕ್ಸಾಸ್ಟ್ ಪೋರ್ಟ್ ಅನ್ನು ಒಳಗೊಂಡಿವೆ.
MOST READ: ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

ಈ ಹೊಸ ಮರ್ಸಿಡಿಸ್-ಎಎಂಜಿ ಸಿ 63 ಕೂಪೆ ಈಗ ಸಂಪೂರ್ಣವಾಗಿ ಡಿಜಿಟಲ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ, ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್, ಕೆಂಪು ಮತ್ತು ಕಪ್ಪು ಲೆದರ್ ಹೊಂದಿರುವ ರೇಸ್-ಶೈಲಿಯ ಬಕೆಟ್ ಸೀಟುಗಳು, ಸೆಂಟರ್ ಕನ್ಸೋಲ್‌ನಲ್ಲಿ ಕಾರ್ಬನ್-ಫೈಬರ್ ಮತ್ತು ಇತರ ನವೀಕರಣಗಳು ಮತ್ತು ಹೆಚ್ಚುವರಿ ಫೀಚರ್ ಗಳನ್ನು ಒಳಗೊಂಡಿದೆ.

ಹೊಸ ಮರ್ಸಿಡಿಸ್-ಎಎಂಜಿ ಸಿ 63 ಕೂಪೆ ಕಾರಿನಲ್ಲಿ ಸ್ಲಿಪರಿ, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್, ರೇಸ್ ಮತ್ತು ಇಂಡಿವಿಜುವಲ್ ಎಂಬ ಆರು ವಿಭಿನ್ನ ಡ್ರೈವಿಂಗ್ ಮೋಡ್ ಗಳು ಸ್ಟ್ಯಾಂಡರ್ಡ್ ಆಗಿದೆ.
MOST READ: ಭಾರತದಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಸ್ಕೋಡಾ ಕರೋಕ್ ಎಸ್‍ಯುವಿ

ಹೊಸ ಮರ್ಸಿಡಿಸ್-ಎಎಂಜಿ ಸಿ 63 ಕೂಪೆ ಕಾರಿನಲ್ಲಿ 4.0-ಲೀಟರ್ ಬೈ-ಟರ್ಬೊ ವಿ 8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಎಂಜಿನ್ 469 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 9-ಸ್ಪೀಡ್ ಜಿ-ಟ್ರೋನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಹೊಸ ಮರ್ಸಿಡಿಸ್-ಎಎಂಜಿ ಸಿ 63 ಕೂಪೆ ಕಾರು ಕೇವಲ 4 ಸೆಕೆಂಡುಗಳಲ್ಲಿ 0 - 100 ಕಿ.ಮೀ ಕ್ರನಿಸುತ್ತದೆ. ಇನ್ನು ಈ ಹೊಸ ಕಾರು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.
MOST READ: ಹೋಂಡಾ ಡಬ್ಲ್ಯುಆರ್-ವಿ ಫೇಸ್‍ಲಿಫ್ಟ್ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಇದರೊಂದಿಗೆ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ 2020ರ ಎಎಂಜಿ ಜಿಟಿ-ಆರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.48 ಕೋಟಿಗಳಾಗಿದೆ.

ಮರ್ಸಿಡಿಸ್-ಎಎಂಜಿ ಸಿ 63 ಕೂಪೆ ಈಗ ದೇಶದ ಬ್ರ್ಯಾಂಡ್‍ನ ಸಿ-ಕ್ಲಾಸ್ ಸೆಡಾನ್ ಸರಣಿಯಲ್ಲಿ ಪ್ರಮುಖ ರೂಪಾಂತರವಾಗಿದೆ. ಹೊಸ ಮರ್ಸಿಡಿಸ್-ಎಎಂಜಿ ಸಿ 63 ಕೂಪೆ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಂ 3 ಕಾರಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications








