ಭಾರತದಲ್ಲಿ ಬಿಡುಗಡೆಯಾಗಲಿದೆ ಅತಿ ವೇಗದ ಮರ್ಸಿಡಿಸ್ ಬೆಂಝ್ ಕಾರು

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ 2020ರ ಎಎಂಜಿ ಜಿಟಿ-ಆರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. 2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರು ಇದೇ ತಿಂಗಳ 27ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅತಿ ವೇಗದ ಮರ್ಸಿಡಿಸ್ ಬೆಂಝ್ ಕಾರು

ಹೊಸ ಎಎಂಜಿ ಜಿಟಿ-ಆರ್ ಕಾರು ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ. 2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರಿನಲ್ಲಿ ರಿಫ್ರೆಶ್ಡ್ ಹೆಡ್‌ಲ್ಯಾಂಪ್‌ಗಳ ಸೆಟ್, ಎರಡೂ ಬದಿಯಲ್ಲಿ ಕ್ಯಾನಾರ್ಡ್‌ಗಳೊಂದಿಗೆ ನವೀಕರಿಸಿದ ಬಂಪರ್ ಅನ್ನು ಹೊಂದಿದೆ. ಈ ಹೊಸ ಎಎಂಜಿ ಜಿಟಿ-ಆರ್ ಕಾರು ಹಿಂದಿನ ಮಾದರಿಗಿಂತ ಹಗುರವಾಗಿದೆ ಎಂದು ಹೇಳಲಾಗುತ್ತದೆ. ಈ ಹೊಸ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅತಿ ವೇಗದ ಮರ್ಸಿಡಿಸ್ ಬೆಂಝ್ ಕಾರು

ಸಣ್ಣ ಬದಲಾವಣೆಗಳ ಹೊರತಾಗಿ 2020ರ ಎಎಂಜಿ ಜಿಟಿ-ಆರ್ ಹಿಂದಿನ ಮಾದರಿಯ ಎಲ್ಲಾ ಫೀಚರ್ ಗಳನ್ನು ಹೊಂದಿರಲಿದೆ. ಇದರಲ್ಲಿ ಪನಾಮೆರಿಕಾನಾ ಗ್ರಿಲ್ ಅಪ್‌ಫ್ರಂಟ್, 20-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಇತರ ಫೀಚರ್ ಗಳು ಒಳಗೊಂಡಿದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿದೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‍‍ಎ ಎಸ್‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿದೆ ಅತಿ ವೇಗದ ಮರ್ಸಿಡಿಸ್ ಬೆಂಝ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರಿನ ಇಂಟಿರಿಯರ್ ನಲ್ಲಿ ಹಿಂದಿನ ಮಾದರಿಯಲ್ಲಿರುವ ಎಲ್ಲಾ ಫೀಚರ್ ಗಳನ್ನು ಹೊಂದಿದೆ. ಇದರೊಂದಿಗೆ ಇಂಟಿರಿಯರ್ ನಲ್ಲಿ ಕೆಲವು ಸಣ್ಣ ಮಟ್ಟದ ಬದಲಾವಣೆಗಳನ್ನು ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅತಿ ವೇಗದ ಮರ್ಸಿಡಿಸ್ ಬೆಂಝ್ ಕಾರು

ಈ ಹೊಸ ಕಾರಿನಲ್ಲಿ ವರ್ಚುವಲ್ ಕಾಕ್‌ಪಿಟ್, ಸಂಪರ್ಕಿತ ತಂತ್ರಜ್ಞಾನದೊಂದಿಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಪ್ರೀಮಿಯಂ ಇಂಟಿರಿಯರ್ ಅಪ್ಹೋಲ್ಸ್ಟರಿ ಮತ್ತು ಇತರ ನವೀಕರಣಗಳನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಭಾರತದಲ್ಲಿ ಬಿಡುಗಡೆಯಾಗಲಿದೆ ಅತಿ ವೇಗದ ಮರ್ಸಿಡಿಸ್ ಬೆಂಝ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಕಾರಿನಲ್ಲಿ ಅದೇ 4.0-ಲೀಟರ್ ಬೈ-ಟರ್ಬೊ ವಿ 8 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 577 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಜೊತೆಗೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅತಿ ವೇಗದ ಮರ್ಸಿಡಿಸ್ ಬೆಂಝ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಗಂಟೆಗೆ 317 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರು 0 - 100 ಕಿಮೀ ಕ್ರಮಿಸಲು ಕೇವಲ 3.6 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಭಾರತದಲ್ಲಿ ಬಿಡುಗಡೆಯಾಗಲಿದೆ ಅತಿ ವೇಗದ ಮರ್ಸಿಡಿಸ್ ಬೆಂಝ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಈ ಹಿಂದೆ 2017ರಲ್ಲಿ ಭಾರತದಲ್ಲಿ ಲಭ್ಯವಿತ್ತು. ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿಯು ಮತ್ತೊಮ್ಮೆ ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಸಜ್ಜಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅತಿ ವೇಗದ ಮರ್ಸಿಡಿಸ್ ಬೆಂಝ್ ಕಾರು

2020ರ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಅತಿ ವೇಗದ ಕಾರು ಆಗಿದೆ. ಈ ಹೊಸ ಎಎಂಜಿ ಜಿಟಿ-ಆರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.5 ಕೋಟಿಗಳಾಗಿದ ಎಂದು ನಿರೀಕ್ಷಿಸುತ್ತೇವೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಪೋರ್ಷೆ 911 ಸೀರಿಸ್ ಕಾರಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
2020 Mercedes-AMG GT-R India Launch Date Confirmed. Read in Kannada.
Story first published: Tuesday, May 19, 2020, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more