ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ

ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ತನ್ನ ಹೊಸ ಬೆಂಝ್ ಜಿಎಲ್‍ಇ ಕಾರನ್ನು ಜನವರಿ 28ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. 2020ರ ಬೆಂಝ್ ಜಿಎಲ್ಇ, ಮರ್ಸಿಡಿಸ್ ಕಂಪನಿಯ ಎಂಟ್ರಿ ಲೆವೆಲ್ ಕಾರು ಆಗಿದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ

ಜಿ‍ಎಲ್‍ಇ ಎಸ್‍‍ಯುವಿ ಈ ಮೊದಲು ಮರ್ಸಿಡಿಸ್ ಕಂಪನಿಯ ಎಂ‍ಎಲ್ ಕ್ಲಾಸ್ ಸರಣಿಯಲ್ಲಿತ್ತು. ಹೊಸ ಬೆಂಝ್ ಜಿಎಲ್ಇ ಎಸ್‍‍ಯು‍ವಿಯು ಆಕರ್ಷಕ ಲುಕ್ ಹೊಂದಿದ್ದು, ಮೊದಲ ತಲೆಮಾರಿನ ಜಿಎಲ್ಇ ಎಸ್‍‍ಯು‍ವಿಯ ಶೈಲಿಯಲ್ಲಿ ಮುಂದುವರೆದಿದೆ. ಈ ಎಸ್‍‍ಯುವಿಯು ಹೆಚ್ಚಿನ ಕ್ಯಾಬಿನ್ ಸ್ಪೇಸ್ ಅನ್ನು ಹೊಂದಿದೆ. ಬಿಡುಗಡೆಯಾಗಲಿರುವ ಬೆಂಝ್ ಕಾರು ಬಿ‍ಎಸ್6 ಎಂಜಿನ್ ಹೊಂದಿರಲಿದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ

ಈ ಐಷಾರಾಮಿ ಎಸ್‍‍ಯುವಿ ಇಂಟಿಗ್ರೇಟೆಡ್ ಡಿ‍ಆರ್‍ಎಲ್‍‍ಗಳ ಜೊತೆಗೆ ಮರುವಿನ್ಯಾಸದ ಹೆಡ್‍‍ಲ್ಯಾಂಪ್‍,ಹೊಸ ಗ್ರಿಲ್, ಮರುವಿನ್ಯಾಸದ ಫ್ರಂಟ್ ಬಂಪರ್ ಹಾಗೂ ಟೇಲ್‍‍ಲ್ಯಾಂಪ್ ಕ್ಲಸ್ಟರ್‍‍ಗಳನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ

ಮಾರುಕಟ್ಟೆಯಲ್ಲಿರುವ ಹಳೆಯ ತಲೆಮಾರಿನ ಜಿ‍‍ಎಲ್‍ಇಗೆ ಹೋಲಿಸಿದರೆ, ಹೊಸ ಜಿ‍ಎಲ್‍ಇ ಎಸ್‍‍ಯುವಿಯು ಉದ್ದವಾದ ವ್ಹೀಲ್ ಬೇಸ್‍ ಹೊಂದಿರಲಿದೆ. ಇದರಿಂದಾಗಿ ಹೊಸ ಜಿ‍ಎಲ್‍‍ಇ 69 ಎಂಎಂಗೂ ಅಧಿಕವಾದ ಲೆಗ್‍‍ರೂಂ ಹೊಂದಿರಲಿದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ

ಮಾರುಕಟ್ಟೆಯಲ್ಲಿರುವ ಜಿ‍ಎಲ್‍ಇ ಎಸ್‍‍ಯುವಿಗೆ ಹೋಲಿಸಿದರೆ ಹೆಚ್ಚು ಸುಧಾರಿತವಾದ ಸಸ್ಪೆಂಷನ್ ಸೆಟ್‍ಅಪ್ ಹೊಂದಿರಲಿದೆ. ಹೊಸ ಮರ್ಸಿಡಿಸ್ ಜಿ‍ಎಲ್‍ಇ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳಿಗಾಗಿ ಪ್ರತ್ಯೇಕವಾದ 12.3 ಇಂಚಿನ ಸ್ಕ್ರೀನ್‍‍ಗಳನ್ನು ಹೊಂದಿರಲಿದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ

ಹೊಸ ಎಸ್‍ಯುವಿಯ ಕ್ಯಾಬಿನ್‍‍‍ಗೆ ಪ್ರೀಮಿಯಂ ಅನುಭವವನ್ನು ನೀಡುವುದಕ್ಕಾಗಿ ಇಂಟಿರಿಯರ್‍‍ನಲ್ಲಿ ಕ್ಲೈಮೆಟ್ ಕಂಟ್ರೋಲ್ ಯುನಿಟ್, ಮರುವಿನ್ಯಾಸಗೊಳಿಸಲಾದ ಏರ್ ಕಂಡೀಷನಿಂಗ್ ವೆಂಟ್‍‍ಗಳಿವೆ. ಮರ್ಸಿಡಿಸ್ ಕಂಪನಿಯು ಹೊಸ ತಲೆಮಾರಿನ ಜಿ‍ಎಲ್‍ಇಯನ್ನು ಬಿಎಸ್ 6 ಎಂಜಿನ್‍‍‍ನೊಂದಿಗೆ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ

2020ರ ಜಿಎಲ್ಇ ಎಸ್‍‍ಯು‍ವಿಯಲ್ಲಿ 3.0 ಲೀಟರ್ 400ಡಿ ಆರು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 3,600 - 4,000 ಆರ್‍‍ಪಿ‍ಎಂನಲ್ಲಿ 330 ಬಿ‍ಹೆಚ್‍ಪಿ ಪವರ್ ಮತ್ತು 1,200 - 3,000 ಆರ್‍‍ಪಿಎಂನಲ್ಲಿ 700 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ

2020ರ ಬೆಂಝ್ ಜಿಎಲ್ಇ ಎಸ್‍‍ಯು‍ವಿಯ ಮತ್ತೊಂದು ಡೀಸೆಲ್ ರೂಪಾಂರವು 2.0 ಲೀಟರ್ 300ಡಿ, ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 4,200 ಆರ್‍‍ಪಿಎಂನಲ್ಲಿ 245 ಬಿ‍ಹೆಚ್‍‍ಪಿ ಪವರ್ ಮತ್ತು 1,600 - 2,400 ಆರ್‍‍ಪಿಎಂನಲ್ಲಿ 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ

ಹೊಸ ಜಿಎಲ್ಇ ಎಸ್‍‍ಯು‍ವಿಯ ಪೆಟ್ರೋಲ್ ರೂಪಾಂತರವು 3.0 ಲೀಟರ್ ಇನ್‍-ಲೈನ್ ಆರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5,500 - 6,100 ನಲ್ಲಿ 367 ಬಿ‍ಹೆಚ್‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಮಾದರಿಯ ಎಂಜಿನ್‍ಗಳು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2020ರ ಮರ್ಸಿಡಿಸ್ ಬೆಂಝ್ ಜಿ‍ಎಲ್ಇ

ಹೊಸ ಬೆಂಝ್ ಜಿಎ‍ಲ್ಇ ಎಸ್‍‍ಯು‍ವಿಯು ಆಕರ್ಷಕ ಲುಕ್ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಹೊ‍ಸ ಜಿಎಲ್ಇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೊಸ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್ 5, ಲ್ಯಾಂಡ್ ರೋವರ್ ಡಿಸ್ಕವರಿ, ಆಡಿ ಕ್ಯೂ 7 ಮತ್ತು ವೋಲ್ವೋ ಎಕ್ಸ್‌ಸಿ 90 ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Friday, January 10, 2020, 17:58 [IST]
English summary
2020 Mercedes-Benz GLE India launch on January 28. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+