ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ ನಿಸ್ಸಾನ್ ಎಸ್‍ಯುವಿ
ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತನ್ನ 2021ರ ರೋಗ್(ಎಕ್ಸ್-ಟ್ರಯಲ್) ಎಸ್‍ಯುವಿಯನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಇದೇ ತಿಂಗಳ 15 ರಂದು ರೋಗ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಿದೆ .

ನಿಸ್ಸಾನ್ ಕಂಪನಿಯು ಹೊಸ ರೋಗ್ ಎಸ್‍ಯುವಿಯನ್ನು ಇದೇ ತಿಂಗಳ 15 ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಿದೆ ಎಂದು ಹೊಸ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸ್-ಟ್ರಯಲ್ ಎಂಬ ಹೆಸರಿನಲ್ಲಿ ಈ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. 2021ರ ನಿಸ್ಸಾನ್ ಎಸ್‍ಯುವಿಯು ಇದರ ಹಿಂದಿನ ಮಾದರಿಗೆ ಹೋಲುತ್ತದೆ. ಆದರೆ ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ (ರೋಗ್) ಎಸ್‍ಯುವಿಯು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ನಿಸ್ಸಾನ್ ವಿಷನ್ 2.0 ಕಾನ್ಸೆಪ್ಟ್ ಎಸ್‍ಯುವಿ ಮಾದರಿಯ ವಿ-ಮೋಷನ್ ಗ್ರಿಲ್ ಅನ್ನು ಎಕ್ಸ್-ಟ್ರಯಲ್ ಎಸ್‍ಯುವಿಯು ಹೊಂದಿರಲಿದೆ. ನಿಸ್ಸಾನ್ ವಿಷನ್ 2.0 ಕಾನ್ಸೆಪ್ಟ್ ಎಸ್‍ಯುವಿ ಮಾದರಿಯ ವಿನ್ಯಾಸವು ಇತರ ನಿಸ್ಸಾನ್ ಜೂಕ್, ಲಿವಿನಾ ಮತ್ತು ಸಿಲ್ಫಿ ಎಸ್‍ಯುವಿಗಳಿಗೆ ಪ್ರೇರಣೆಯಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಐಷಾರಾಮಿ ಬಿಎಂಡಬ್ಲ್ಯೂ ಎಕ್ಸ್6 ಎಸ್‍ಯುವಿ

ಈ ಹೊಸ ಮಾದರಿಯು ಮುಂಭಾಗದಲ್ಲಿ ಮರುವಿನ್ಯಾಸಗೊಳಿಸಿದ ಬಂಪರ್ ಅನ್ನು ಹೊಂದಿದೆ. ಈ ಹೊಸ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗ ಏರ್‍ಡ್ಯಾಮ್ ಮತ್ತು ಸ್ಕಫ್ ಪ್ಲೇಟ್ ಅನ್ನು ಹೊಂದಿದೆ. ಹೊಸ ತಲೆಮಾರಿನ ಎಕ್ಸ್-ಟ್ರಯಲ್ ಎಸ್‍ಯುವಿಯ ಹಿಂಭಾಗವು ಮಾರುಕಟ್ಟೆಯಲ್ಲಿರುವ ಮಾದರಿಯಂತೆ ಇರುತ್ತದೆ.

ಹೊಸ ನಿಸ್ಸಾನ್ ಇಂಟಿರಿಯರ್ ನಲ್ಲಿ ಡ್ರೈವರ್ ಫಂಕ್ಷನ್ ಬಟನ್‌ಗಳೊಂದಿಗೆ ಹೊಸ ಸ್ಟೀಯರಿಂಗ್ ವ್ಹೀಲ್ಮತ್ತು ಫ್ಲೋಟಿಂಗ್ ಟೈಪ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ, ಈ ಇನ್ಫೋಟೈನ್‍ಮೆಂಟ್ ಸಿಸ್ಟಂ ನಲ್ಲಿ ಆಪಲ್ ಕಾರ್‍ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಹೋಂದಾಣಿಯಾಗಿದೆ. ಇದರೊಂದಿಗೆ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕಾಂಪ್ಯಾಕ್ಟ್ ಕ್ಲೈಮೇಂಟ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ.
MOST READ: ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ

ಹೊಸ ನಿಸ್ಸಾನ್ ಎಸ್‍ಯುವಿಯಲ್ಲಿ ಗ್ರಾಹಕರ ಸುರಕ್ಷತೆಗಾಗಿ ಹಲವಾರು ಫೀಚರ್‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಎಬಿಎಸ್ ಜೊತೆ ಇಬಿಡಿ, ಮಲ್ಟಿಪಲ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ಅಲಾರ್ಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಲೇನ್-ಅಸಿಸ್ಟ್ ಸಿಸ್ಟಂ, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸರ್‌ಗಳು, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಇಮೊಬೈಲೈಸರ್ ಅನ್ನು ಒಳಗೊಂಡಿರುತ್ತದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ನಿಸ್ಸಾನ್ ರೋಗ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿರಲಿದೆ. ಭಾರತದಲ್ಲಿ ಯಾವ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯು ಇನ್ನು ಬಹಿರಂಗವಾಗಿಲ್ಲ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ನಿಸ್ಸಾನ್ ತನ್ನ ಬಿಎಸ್-6 ಕಿಕ್ಸ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಬಹುನಿರೀಕ್ಷಿತ 2020ರ ನಿಸ್ಸಾನ್ ಕಿಕ್ಸ್ ಕಾರಿನ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.9.49 ಲಕ್ಷಗಳಾಗಿದೆ.

2021ರ ನಿಸ್ಸಾನ್ ರೋಗ್(ಎಕ್ಸ್-ಟ್ರಯಲ್) ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಎಸ್‌ಯುವಿಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿರುವುದರಿಂದ ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಬಹುದು. ನಿಸ್ಸಾನ್ ರೋಗ್(ಎಕ್ಸ್-ಟ್ರಯಲ್) ಎಸ್‍ಯುವಿಯು ಬಿಡುಗಡೆಯಾದ ಬಳಿಕ ಟಿಗ್ವಾನ್ ಆಲ್‍ಸ್ಪೇಸ್ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications