ಅನಾವರಣವಾಯ್ತು 2021ರ ಮಾಡೆಲ್ ಇಯರ್ ರೇಂಜ್ ರೋವರ್ ಎಸ್‍ಯುವಿ
ಜೆಎಲ್ಆರ್ ಸಂಸ್ಥೆಯು ತನ್ನ 2021ರ ಮಾಡೆಲ್ ಇಯರ್ ರೇಂಜ್ ರೋವರ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಎಸ್‍ಯುವಿಯು ಹಲವಾರು ನವೀಕರಣಗಳೊಂದಿಗೆ ಹೊಸ ಮೈಲ್ಡ್ ಇನ್-ಲೈನ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ.

2021ರ ಮಾಡೆಲ್ ಇಯರ್ ರೇಂಜ್ ರೋವರ್ ಎಸ್‍ಯುವಿಯನ್ನು ಮಾರುಕಟ್ಟೆಯಲ್ಲಿರುವ ರೇಂಜ್ ರೋವರ್ ಎಸ್‍ಯುವಿಯ ಹೊರಭಾಗದ ವಿನ್ಯಾಸಕ್ಕೆ ಹೋಲಿಸಿದರೆ ಹೆಚ್ಚಿನ ಬದಲಾವಣೆಗಳನ್ನು ಕಂಡುಬಂದಿಲ್ಲ. ಈ 2021ರ ರೇಂಜ್ ರೋವರ್ ದೊಡ್ಡ ಗ್ರಿಲ್, ಫುಲ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳನ್ನು ಹೊದಿದೆ. ಇನ್ನು ಈ 2021ರ ರೇಂಜ್ ರೋವರ್ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿರಲಿದೆ.

2021ರ ಮಾಡೆಲ್ ಇಯರ್ ರೇಂಜ್ ರೋವರ್ ಎಸ್‍ಯುವಿಯಲ್ಲಿ ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್, ಲೆದರ್ ಅಪ್ಹೋಲ್ಸ್ಟರಿ ಮತ್ತು ಜೆಎಲ್‌ಆರ್‌ನ ಇತ್ತೀಚಿನ ಡ್ಯುಯಲ್ ಟಚ್ ಪ್ರೊ ಡ್ಯುಯಲ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ಈ ಎಸ್‍ಯುವಿಯಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ನೀಡಲಾಗಿದೆ. ಈ 2021ರ ರೇಂಜ್ ರೋವರ್ ಎಸ್‍ಯುವಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರುಗಳನ್ನು ಅಳವಡಿಸಲಾಗಿದೆ.

2021ರ ಮಾಡೆಲ್ ಇಯರ್ ರೇಂಜ್ ರೋವರ್ ಎಸ್‍ಯುವಿಯಲ್ಲಿ ಪ್ರಮುಖ ನವೀಕರಣಗಳಂದರೆ ಹೊಸ ಮೈಲ್ಡ್-ಹೈಬ್ರಿಡ್ ಡೀಸೆಲ್ ಎಂಜಿನ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಎಸ್‍ಯುವಿಯಲ್ಲಿ 3.0-ಲೀಟರ್ ಇನ್-ಲೈನ್ ಎಂಜಿನ್ ಅನ್ನು ಹೊಂದಿದೆ.
MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಈ ಎಂಜಿನ್ 345 ಬಿಹೆಚ್‍ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 48ವಿ ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಕೂಡ ಹೊಂದಿರಲಿದೆ.

ಇನ್ನು ಈ 2021ರ ಮಾಡೆಲ್ ಇಯರ್ ರೇಂಜ್ ರೋವರ್ ಎಸ್‍ಯುವಿಯಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರುತ್ತದೆ. ಈ ಎಂಜಿನ್ 395 ಬಿಹೆಚ್‍ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ 8-ಸ್ಫೀಡ್ ಗೇರ್ ಬಾಕ್ಸ್ ಅನ್ನು ನೀಡಲಾಗಿದೆ.
MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಜೆಎಲ್ಆರ್ ಸಂಸ್ಥೆಗೆ ಇದು ವಿಶೇಷವಾದ ವರ್ಷವಾಗಿದ್ದು, ಈ ಸಂಸ್ಥೆಯು ಐವತ್ತು ವರ್ಷವನ್ನು ಪೂರೈಸಿದೆ. ಐವತ್ತು ವರ್ಷದ ಪೂರೈಸಿದ ನೆನಪಿಗಾಗಿ ರೇಂಜ್ ರೋವರ್ ಫಿಫ್ಟಿ ಎಂದು ಕರೆಯಲ್ಪಡುವ ವಿಶೇಷ ಆವೃತ್ತಿಯನ್ನು ಪರಿಚಯಿಸಿದೆ.

ಈ ರೇಂಜ್ ರೋವರ್ ಫಿಫ್ಟಿ ಎಸ್‍ಯುವಿಯ 1,970 ಯುನಿಟ್‌ಗಳನ್ನು ಖರೀದಿಸಲು ಲಭ್ಯವಿರುತ್ತದೆ. ಇನ್ನು 2021ರ ಮಾಡೆಲ್ ಇಯರ್ ರೇಂಜ್ ರೋವರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಿದೆ. ಆದರೆ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಇನ್ನು ಕೂಡ ಬಹಿರಂಗವಾಗಿಲ್ಲ.


Click it and Unblock the Notifications








