ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯು ಅಧಿಕೃತವಾಗಿ ಕಿಗರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ.

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟ ಪಾಲು ಕಳೆದ ಎರಡು ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಹಲವಾರು ಹೊಸ ಕಾರುಗಳುಗಳ ಬಿಡುಗಡೆಗೊಂಡಿವೆ. 4 ಮೀಟರ್‌ಗಿಂತಲೂ ಕಡಿಮೆ ಉದ್ದಳತೆ ಹೊಂದಿರುವ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಸದ್ಯ ಪ್ರಮುಖ ಕಾರು ಕಂಪನಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದ್ದು, ರೆನಾಲ್ಟ್ ಇಂಡಿಯಾ ಕೂಡಾ ತನ್ನ ಹೊಸ ಕಿಗರ್ ಕಾರು ಮಾದರಿಯನ್ನು ರಸ್ತೆಗಿಳಿಸಲು ಸಜ್ಜುಗೊಂಡಿದೆ.

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಕಳೆದ ಎರಡು ವರ್ಷಗಳ ಹಿಂದೆಯೇ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದ್ದ ರೆನಾಲ್ಟ್ ಕಂಪನಿಯು ಇದೀಗ ಉತ್ಪಾದನಾ ಆವೃತ್ತಿಗೆ ಸನೀಹವಿರುವ ಕಾನ್ಸೆಪ್ಟ್ ಮಾದರಿಯೊಂದಿಗೆ ಹೊಸ ಕಾರಿನ ಅಧಿಕೃತ ಹೆಸರನ್ನು ಬಹಿರಂಗಪಡಿಸಿದ್ದು, ಕಟಿಂಗ್ ಎರ್ಡ್ಜ್ ವಿನ್ಯಾಸದೊಂದಿಗೆ ಸ್ಪೋರ್ಟಿ ಲುಕ್ ಹೊಂದಿದೆ.

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ರೆನಾಲ್ಟ್ ಅನಾವರಣಗೊಳಿಸಿರುವ ಹೊಸ ಕಿಗರ್ ಕಾರು ಇನ್ನು ಕೂಡಾ ಕಾನ್ಸೆಪ್ಟ್ ಮಾದರಿಯಾಗಿದ್ದು, ಉತ್ಪಾದನಾ ಆವೃತ್ತಿಯಲ್ಲಿ ಇದು ಇನ್ನು ಕೂಡಾ ತುಸು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ. ಆದರೆ ಕಾನ್ಸೆಪ್ಟ್ ಮಾದರಿಯಲ್ಲಿನ ಹಲವು ತಾಂತ್ರಿಕ ಅಂಶಗಳು ಉತ್ಪಾದನಾ ಆವೃತ್ತಿಯಲ್ಲೂ ಇರಲಿದ್ದು, ಕಾನ್ಸೆಪ್ಟ್ ಮಾದರಿಯಲ್ಲೇ ಎಲ್ಲಾ ವಿನ್ಯಾಸಗಳನ್ನು ಹೊಂದಿರುವುದಿಲ್ಲ.

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆ ಹೊಂದಿರುವ ರೆನಾಲ್ಟ್ ಕಿಗರ್ ಕಾರು ಮಾದರಿಯ ಮುಂಭಾಗದಲ್ಲಿ ಡ್ಯುಯಲ್ ಹೆಡ್‌ಲ್ಯಾಂಪ್ ಜೊತೆಗೆ ಎಲ್ಇಡಿ ಡಿಆರ್‌ಎಲ್ಎಸ್ ಜೋಡಿಸಲಾಗಿದ್ದು, ಹೆಡ್‌ಲ್ಯಾಂಪ್ ಸೌಲಭ್ಯವು ಬಂಪರ್ ಮೇಲ್ಭಾಲದಲ್ಲಿ ಮತ್ತು ಎಲ್ಇಡಿ ಡಿಆರ್‌ಎಲ್ಎಸ್ ಸೌಲಭ್ಯವು ಬ್ಯಾನೆಟ್‌ಗೆ ಹೊಂದಿಕೊಂಡಿದೆ. ಇದರಲ್ಲಿ ಡೇ ಲೈಟ್ ರನ್ನಿಂಗ್ ಲೈಟ್ ಸೌಲಭ್ಯವು ಫ್ರಂಟ್ ಗ್ರಿಲ್‍ವರೆಗೂ ಮುಂದುವರೆದಿದ್ದು, ಮಧ್ಯದಲ್ಲಿ ರೆನಾಲ್ಟ್ ಲೊಗೊ ಪಡೆದುಕೊಂಡಿದೆ.

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಫ್ರಂಟ್ ಬಂಪರ್ ಸೌಲಭ್ಯವು ಮಧ್ಯದಲ್ಲಿ ದೊಡ್ಡದಾದ ಏರ್ ಡ್ಯಾಮ್ ಜೊತೆ ಸಿಲ್ವರ್ ಕೊಟಿಂಗ್ ಹೊಂದಿರುವ ಸ್ಕೀಡ್ ಪ್ಲೇಟ್ ಪಡೆದುಕೊಂಡಿದ್ದು, ಕಟಿಂಗ್ ಎಡ್ಜ್ ವಿನ್ಯಾಸಗಳು ಹೊಸ ಕಾರಿಗೆ ಮತ್ತಷ್ಟು ಬಲಿಷ್ಠತೆ ಪಡೆದುಕೊಳ್ಳಲಿವೆ.

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಹಾಗೆಯೇ ಕಾರಿನ ಮುಂಭಾಗದಲ್ಲಿನ ಬಲಿಷ್ಠ ವಿನ್ಯಾಸದಂತೆ ಸೈಡ್ ಪ್ರೋಫೈಲ್ ಕೂಡಾ ಆಕರ್ಷಕವಾಗಿದ್ದು, ಕ್ರೀಸ್‌ ಲೈನ್‌ಗಳೊಂದಿಗೆ ಬ್ಲ್ಯಾಕ್ ಕ್ಲ್ಯಾಂಡಿಂಗ್ ಒಳಗೊಂಡ ವೀಲ್ಹ್ ಆರ್ಚ್ ಮತ್ತು ಆಕರ್ಷಕ ಡೈಮಂಡ್ ಕಟ್ ಅಲಾಯ್ ವೀಲ್ಹ್ ಹೊಂದಿರಲಿದೆ.

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ಕಾರಿನಲ್ಲಿ ಪ್ರತಿ ಸ್ಪರ್ಧಿ ಕಾರು ಮಾದರಿಗಳಂತೆ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದರಲಿರುವ ಕಿಗರ್ ಕಾರು ಮಾದರಿಯು ಇಂಟ್ರಾಗ್ರೆಟೆಡ್ ಟರ್ನ್ ಇಂಡಿಕೇಟರ್ ಹೊಂದಿರುವ ರಿಯಲ್ ವ್ಯೂ ಮಿರರ್, ಬಾಡಿ ಕಲರ್ ಹೊಂದಿರುವ ಡೋರ್ ಹ್ಯಾಂಡಲ್, ಬಾಡಿ ಪ್ಯಾನೆಲ್, ಕಪ್ಪು ಬಣ್ಣ ಹೊಂದಿರುವ ರೂಫ್ ರೈಲ್ಸ್ ಪಡೆದುಕೊಂಡಿದೆ.

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ರೆನಾಲ್ಟ್ ಕಂಪನಿಯು ಸದ್ಯಕ್ಕೆ ಕಿಗರ್ ಕಾನ್ಸೆಪ್ಟ್ ಮಾದರಿಯ ಹೊರಭಾಗದ ವಿನ್ಯಾಸಗಳನ್ನು ಮಾತ್ರವೇ ಅನಾವರಣಗೊಳಿಸಿದ್ದು, ಹೊಸ ಕಾರಿನ ಒಳ ವಿನ್ಯಾಸ ಮತ್ತು ತಾಂತ್ರಿಕ ಮಾಹಿತಿಗಳ ಶೀಘ್ರದಲ್ಲೇ ಅನಾವರಣಗೊಳ್ಳಲಿವೆ.

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಹೊಸ ಕಾರಿನಲ್ಲಿ ರೆನಾಲ್ಟ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಇನ್ನು ಹೊಸ ಕಾರಿನಲ್ಲಿ ಜೋಡಣೆ ಮಾಡಲಿರುವ ಅಧಿಕೃತ ಎಂಜಿನ್ ಮಾಹಿತಿಯನ್ನು ಬಿಟ್ಟುಕೊಡದ ರೆನಾಲ್ಟ್ ಕಂಪನಿಯು ಹೊಸ ಕಾರನ್ನು 2021ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ಮಾಹಿತಿಗಳ ಪ್ರಕಾರ ಹೊಸ ಕಾರು 1.0-ಲೀಟರ್ ಸಾಮಾರ್ಥ್ಯದ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಳ್ಳಲಿದೆ.

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಸಾಮಾನ್ಯ ಆವೃತ್ತಿಯಲ್ಲಿ ನ್ಯಾಚುರಲಿ ಆಸ್ಪೆರೆಟೆಡ್ 1.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ನಿಸ್ಸಾನ್ ಜೊತೆಗೂಡಿ ಹೊಸದಾಗಿ ಅಭಿವೃದ್ದಿಗೊಳಿಸಿರುವ 1.0-ಟೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಹೈ ಎಂಡ್ ಮಾದರಿಗಳಲ್ಲಿ ಅಳವಡಿಸಲಿದೆಯೆಂತೆ. ಸಾಮಾನ್ಯ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಟರ್ಬೋ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕಿಯಾ ಸೊನೆಟ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ರೆನಾಲ್ಟ್ ಹೊಸ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ರೆನಾಲ್ಟ್ ಕಿಗರ್ ಕಾರು ಮಾದರಿಯು ಮಾರುತಿ ಸುಜುಕಿ ಬ್ರೆಝಾ, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಮತ್ತು ಬಿಡುಗಡೆಯಾಗಲಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಹೊಸ ಕಾರು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

Most Read Articles

Kannada
English summary
New Renault Kiger Concept SUV Unveiled. Read in Kanada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X