ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಕಾರುಗಳು

ಸ್ಕೋಡಾ ಕಂಪನಿಯು ತನ್ನ ಹೊಸ ಆಕ್ಟೀವಿಯಾ, ರ‍್ಯಾಪಿಡ್ ಸೆಡಾನ್ ಮತ್ತು ಸ್ಕೂಡಾ ಕೊಡಿಯಾಕ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಸ್ಕೋಡಾ ಇಂಡಿಯಾದ 2.0 ಯೋಜನೆಯಡಿಯಲ್ಲಿ ಈ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿಲಿದೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಕಾರುಗಳು

ಈ ವರ್ಷ ಸ್ಕೋಡಾ ಕಂಪನಿಯು ನಾಲ್ಕು ಮಾದರಿಗಳನ್ನು ಬಿಡುಗಡೆಗೊಳಿಸಿದೆ, ಶೀಘ್ರದಲ್ಲೇ ಐದನೇ ಮಾದರಿಯು ಬಿಡುಗಡೆಯಾಗಲಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಕೋಡಾ ಆಟೋ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ಡೈರೆಕ್ಟರ್ ಝಾಕ್ ಹೋಲಿಸ್ ಸ್ಪಷ್ಟ ಪಡಿಸಿದ್ದಾರೆ. ಹೊಸ ಕೊಡಿಯಾಕ್ ಎಸ್‍ಯುವಿಯು 2.0 ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 188 ಎಚ್‌ಪಿ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಕಾರುಗಳು

ಸ್ಕೋಡಾ ಕೊಡಿಯಾಕ್ ಎಸ್‍‍‍ಯುವಿಯು ಆಕರ್ಷಕ ಲುಕ್ ಮತ್ತು ಉನ್ನತ ಫೀಚರ್ಸ್‍‍ಗಳನ್ನು ಹೊಂದಿರುವ ಪ್ರೀಮಿಯಂ ಎಸ್‍ಯುವಿಯಾಗಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಈ ಹೊಸ ಕೊಡಿಯಾಕ್ ಎಸ್‍‍‍ಯುವಿಯನ್ನು ಅನಾವರಣಗೊಳಿಸಲಾಗಿತ್ತು.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಕಾರುಗಳು

ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು ಡೀಸೆಲ್ ಎಂಜಿನ್‍‍ನೊಂದಿಗೆ ಮಾತ್ರ ಲಭ್ಯವಿತ್ತು. ಆದರೆ ಹೊಸ ಸ್ಕೋಡಾ ಪೆಟ್ರೋಲ್ ಆಯ್ಕೆಯನ್ನು ಹೊಂದಿದೆ. ಕೊಡಿಯಾಕ್ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಎಸ್‍‍ಯುವಿಯಲ್ಲಿ 360 ಡಿಗ್ರಿ ಕ್ಯಾಮರವನ್ನು ಅಳವಡಿಸಲಾಗಿದೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಕಾರುಗಳು

ಈ ಎಸ್‍‍ಯು‍ವಿನಲ್ಲಿ 18 ಇಂಚಿನ ಅಲಾಯ್ ವ್ಹೀಲ್‍‍ಗಳು, ಎಲ್‍ಇ‍ಡಿ ಹೆಡ್‍‍ಲ್ಯಾಂಪ್, ಗ್ರಿಲ್, ರೂಫ್ ರೈಲ್ಸ್, ವಿಂಡೋಸ್ ಮತ್ತು ಒಆರ್‍‍ವಿಎಂ ಹೌಸಿಂಗ್, ಮುಂಭಾಗ ಮತ್ತು ಹಿಂಭಾಗದ ಅಂಡ‍‍ರ್‍‍ಬಾಡಿ ಪ್ರೊಟೆಕ್ಷನ್ ಸೇರಿದಂತೆ ಹಲವಾರು ಫೀಚರ್‍‍ಗಳಿವೆ. ಸ್ಕೋಡಾ ಕೊಡಿಯಾಕ್ ಇಂಟಿರಿಯರ್‍‍ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಕಾರುಗಳು

ಇಂಟಿರಿಯರ್ ಪ್ರೀಮಿಯಂ ಲುಕ್ ಅನ್ನು ಹೊಂದಿದೆ. ಇಂಟಿರಿಯರ್‍‍ನಲ್ಲಿ ಸೀಟ್‍ಗಳು, ಏರ್‍‍ಬ್ಯಾಗ್‍ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪವರ್ ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಡ್ರೈವರ್ ಮತ್ತು ಪ್ರಯಾಣಿಕರ ಸೀಟ್‍‍ಗಳು ಮತ್ತು ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್‍‍ಗಳಿವೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಕಾರುಗಳು

ಕರೋನಾ ವೈರಸ್ ಭೀತಿಯಿಂದ ಹೂಸ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಹೊಸ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರನ್ನು ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ಸಿಕೆಡಿ ಮಾರ್ಗದ ಮೂಲಕ ಭಾರತಕ್ಕೆ ತರಲಾಗುತ್ತದೆ ಎಂದು ಝಾಕ್ ಹೋಲಿಸ್ ಸ್ಪಷ್ಟಪಡಿಸಿದ್ದಾರೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಕಾರುಗಳು

ಹೊಸ ಸ್ಕೋಡಾ ಆಕ್ಟೀವಿಯಾ ಬ್ಲ್ಯಾಕ್ ಗ್ರಿಲ್, ಮ್ಯಾಚಿಂಗ್ ಒಆ‍‍ರ್‍‍ವಿಎಂ‍ಗಳು ದೊಡ್ಡದಾದ ಇಂಚಿನ ಅಲಾಯ್ ವ್ಹೀಲ್‍‍ಗಳು, ವೈಡರ್ ಏ‍‍ರ್ ಡ್ಯಾಮ್‍‍ಗಳು ಮತ್ತು ಫ್ರಂಟ್ ಬಂಪರ್‍‍ಗಳನ್ನು ಹೊಂದಿದೆ. ಹೊಸ ಸ್ಕೋಡಾ ಆಕ್ಟೀವಿಯಾ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಕಾರುಗಳು

ಸ್ಕೋಡಾ ಅಕ್ಟೀವಾ ಕ್ರ್ಯಾಶ್ ಟೆಸ್ಟ್ ನಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡಿದೆ. 2020ರ ಸ್ಕೋಡಾ ಆಕ್ಟೀವಿಯಾ ಹೊಸ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಯುರೋ ಎನ್‍‍‍ಸಿ‍ಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ಕೋಡಾ ಆಕ್ಟೀವಾ ಸಂಪೂರ್ಣ 5 ಸ್ಟಾರ್ ರೇಟಿಂಗ್ ಪಡೆದಿದೆ.

ಬಿಡುಗಡೆಯಾಗಲಿದೆ ಹೊಸ ಜನಪ್ರಿಯ ಸ್ಕೋಡಾ ಕಾರುಗಳು

ಸ್ಕೋಡಾ ಕಂಪನಿಯು ಈ ವರ್ಷದ ಕೊನೆಯಲ್ಲಿ ಹೊಸ ರ‍್ಯಾಪಿಡ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲಿದೆ. ಈ ಹೊಸ ರ‍್ಯಾಪಿಡ್ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಆಧಾರಿತ ಸೆಡಾನ್ ಕಾರು ಆಗಿರಲಿದೆ.

Article Published On: Monday, June 22, 2020, 18:07 [IST]
English summary
New-gen Skoda Octavia, Kodiaq petrol launch timeline confirmed. Read In Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+