ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸಿಎನ್‌ಜಿ ಆವೃತ್ತಿ

ಸ್ಕೋಡಾ ಕಂಪನಿಯು ಹೊಸ ಆಕ್ಟೀವಿಯಾ ಸಿಎನ್‌ಜಿ ಆವೃತ್ತಿಯನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಿದೆ. ಸ್ಕೋಡಾ ಕಂಪನಿಯು ಆಕ್ಟೀವಿಯಾ ಕಾರನ್ನು ಭಾರತೀಯ ಮಾರುಕಟ್ಟೆಯಲಿ ಮುಂದಿನ ವರ್ಷ ಬಿಡುಗಡೆಗೊಳಿಸಲಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸಿಎನ್‌ಜಿ ಆವೃತ್ತಿ

ಸ್ಕೋಡಾ ಆಕ್ಟೀವಿಯಾವನ್ನು ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಿದೆ. ಆದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುವುದನ್ನು ನೋಡಿದರೆ ಸಿಎನ್‌ಜಿ ಆವೃತ್ತಿಯಲ್ಲಿಯು ಬಿಡುಗಡೆಗೊಳಿಸಿದರೆ ಉತ್ತಮ ಎಂದು ಭಾವಿಸುತ್ತೇವೆ. ಹೊಸ ಆಕ್ಟೀವಿಯಾ ಕಾರಿನಲ್ಲಿ 1.5-ಲೀಟರ್ ಟಿಎಸ್ಐ ಯುನಿಟ್ ಅನ್ನು ಅಳವಡಿಸಲಾಗಿದೆ. ಸಿಎನ್‌ಜಿ ಮೋಡ್‌ನಲ್ಲಿ ಈ ಕಾರು 27.77 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಪೆಟ್ರೋಲ್ ಮೋಡ್‌ನಲ್ಲಿ ಪ್ರತಿ ಲೀಟರ್ ಗೆ 21.73 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸಿಎನ್‌ಜಿ ಆವೃತ್ತಿ

ಹೊಸ ಆಕ್ಟೀವಿಯಾ ಕಾರಿನಲ್ಲಿ 3 ಸಿಎನ್‌ಜಿ ಟ್ಯಾಂಕ್‌ಗಳ ಹೊರತಾಗಿ 9 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಸಿಎನ್‌ಜಿ ಮೋಡ್‌ನಲ್ಲಿ 17.33 ಕೆಜಿ ಸಾಮರ್ಥ್ಯದೊಂದಿಗೆ 500 ಕಿ.ಮೀ ಚಲಿಸುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸಿಎನ್‌ಜಿ ಆವೃತ್ತಿ

ಈ ಹೊಸ ತಲೆಮಾರಿನ ಸ್ಕೋಡಾ ಆಕ್ಟೀವಿಯಾ ಕಾರನ್ನು ಮುಂದಿನ ವರ್ಷದ ಫೆಬ್ರವರಿ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಸ್ಕೋಡಾ ಆಕ್ಟೀವಿಯಾ ಬ್ಲ್ಯಾಕ್ ಗ್ರಿಲ್, ಮ್ಯಾಚಿಂಗ್ ಒಆ‍‍ರ್‍‍ವಿಎಂ‍ಗಳು ದೊಡ್ಡದಾದ ಇಂಚಿನ ಅಲಾಯ್ ವ್ಹೀಲ್‍‍ಗಳು, ವೈಡರ್ ಏ‍‍ರ್ ಡ್ಯಾಮ್‍‍ಗಳು ಮತ್ತು ಫ್ರಂಟ್ ಬಂಪರ್‍‍ಗಳನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸಿಎನ್‌ಜಿ ಆವೃತ್ತಿ

ಹೊಸ ಸ್ಕೋಡಾ ಆಕ್ಟೀವಿಯಾ ಆಕರ್ಷಕ ಲುಕ್ ಅನ್ನು ಹೊಂದಿದೆ. ಇಂಟಿರಿಯರ್‍‍ನಲ್ಲಿ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟ್ ಮುಂಭಾಗದ ಸೀಟ್‍ ಅಲ್ಕಾಂಟರ್ ಲೆದರ್, ಸ್ಟ್ಯಾಂಡರ್ಡ್ ಲ್ಯಾಪ್ ಟೈಮರ್ ಮತ್ತು ಇಂಟರ್‍‍ನೆಟ್ ಕನೆಕ್ಟಿವಿಟಿ ಫೀಚರ್ಸ್‍‍ಗಳೊಂದಿಗೆ ಎಂಟು ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍ಮೆಂಟ್‍ ಸಿಸ್ಟಂ ಅನ್ನು ಅಳವಡಿಸಿದೆ.

MOST READ: ಮತ್ತಷ್ಟು ತಡವಾಗಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ ಬಿಡುಗಡೆ

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸಿಎನ್‌ಜಿ ಆವೃತ್ತಿ

ಸ್ಕೋಡಾ ಅಕ್ಟೀವಾ ಕ್ರ್ಯಾಶ್ ಟೆಸ್ಟ್ ನಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡಿದೆ. 2020ರ ಸ್ಕೋಡಾ ಆಕ್ಟೀವಿಯಾ ಹೊಸ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಯುರೋ ಎನ್‍‍‍ಸಿ‍ಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ಕೋಡಾ ಆಕ್ಟೀವಾ ಸಂಪೂರ್ಣ 5 ಸ್ಟಾರ್ ರೇಟಿಂಗ್ ಪಡೆದಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸಿಎನ್‌ಜಿ ಆವೃತ್ತಿ

ಸೈಡ್ ಬ್ಯಾರಿಯರ್ ಟೆಸ್ಟ್ ನಲ್ಲಿ ಕಾರಿನ ಕ್ರಿಟಿಕಲ್ ಬಾಡಿಯು ಉತ್ತಮ ರಕ್ಷಣೆಯನ್ನು ಹೊಂದಿದೆ ಎಂದು ರೇಟಿಂಗ್ ನೀಡಲಾಗಿದೆ. ಹೊಸ ಸ್ಕೋಡಾ ಅಕ್ಟೀವಿಯಾ ಚಿಲ್ಡ್ ಒಕಿಪ್ಯಾಡ್ ಪ್ರೊಟಕ್ಷನ್ ಟೆಸ್ಟ್ ನಲ್ಲಿ 43.2 ಅಂಕಗಳನ್ನು ಗಳಿಸಿದೆ, ಅಂದರೆ ಶೇ.92 ಪ್ರತಿಶತ ದಷ್ಟು ಆಗಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸಿಎನ್‌ಜಿ ಆವೃತ್ತಿ

ಅಲ್ಲದೇ ಹೊಸ ಆಕ್ಟೀವಿಯಾ ಕಾಂಬಿ ವರ್ಷನ್ ಟೆಸ್ಟ್ ನಲ್ಲಿ 48ಕ್ಕೆ 35.3 ಅಂಕಗಳು, ಪೆಡಸ್ಟ್ರೈನ್ ಸುರಕ್ಷತಾ ಟೆಸ್ಟ್ ನಲ್ಲಿ 13ಕ್ಕೆ 10.3 ಅಂಕಗಳನ್ನು ಪಡೆದಿದೆ. ಕಂಪನಿಯ ಜನಪ್ರಿಯ ಮಾದರಿ ಹೊಸ ಆಕ್ಟೀವಿಯಾ 4,690 ಎಂಎಂ ಉದ್ದ, 1,829 ಎಂಎಂ ಅಗಲ ಮತ್ತು 1,470 ಎಂಎಂ ಎತ್ತರವನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಸ್ಕೋಡಾ ಆಕ್ಟೀವಿಯಾ ಸಿಎನ್‌ಜಿ ಆವೃತ್ತಿ

ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಸೆಡಾನ್ ಆಗಿದೆ. ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಬಹುನಿರೀಕ್ಷಿತ ಸ್ಕೋಡಾ ಆಕ್ಟೀವಿಯಾ ಕಾರಿನಲ್ಲಿ ಬಿಎಸ್-6 ಎಂಜಿನ್ ಅನ್ನು ಹೊಂದಿದೆ.

Article Published On: Saturday, June 27, 2020, 14:03 [IST]
English summary
2020 Skoda Octavia CNG Revealed. Read In Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+