ಕರೋನಾ ವೈರಸ್ ಎಫೆಕ್ಟ್: ಹೊಸ ಸ್ಕೋಡಾ ಆಕ್ಟೀವಿಯಾ ಕಾರು ಬಿಡುಗಡೆ ಮುಂದೂಡಿಕೆ
ಮೂರನೇ ತಲೆಮಾರಿನ ಆಕ್ಟೀವಿಯಾವನ್ನು ಬಿಡುಗಡೆಗೊಳಿಸಿ ಏಳು ವರ್ಷಗಳು ಕಳೆದ ಬಳಿಕ ಇದೀಗ ಸ್ಕೋಡಾ ತನ್ನ ಹೊಸ ತಲೆಮಾರಿನ ಅಕ್ಟೀವಿಯಾವನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಆದರೆ ಕರೋನಾ ವೈರಸ್ ಭೀತಿಯಿಂದ ಹೂಸ ಸ್ಕೋಡಾ ಆಕ್ಟೀವಿಯಾ ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ.

ಸ್ಕೋಡಾ ಆಕ್ಟೀವಿಯಾ ಕಾರನ್ನು 2021ರ ಒಳಗೆ ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಸ್ಕೋಡಾ ಆಕ್ಟೀವಿಯಾ ಬ್ಲ್ಯಾಕ್ ಗ್ರಿಲ್, ಮ್ಯಾಚಿಂಗ್ ಒಆರ್‍ವಿಎಂಗಳು ದೊಡ್ಡದಾದ ಇಂಚಿನ ಅಲಾಯ್ ವ್ಹೀಲ್‍ಗಳು, ವೈಡರ್ ಏರ್ ಡ್ಯಾಮ್‍ಗಳು ಮತ್ತು ಫ್ರಂಟ್ ಬಂಪರ್‍ಗಳನ್ನು ಹೊಂದಿದೆ. ಹೊಸ ಸ್ಕೋಡಾ ಆಕ್ಟೀವಿಯಾ ಆಕರ್ಷಕ ಲುಕ್ ಅನ್ನು ಹೊಂದಿದೆ.

ಇಂಟಿರಿಯರ್‍ನಲ್ಲಿ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟ್ ಮುಂಭಾಗದ ಸೀಟ್ ಅಲ್ಕಾಂಟರ್ ಲೆದರ್, ಸ್ಟ್ಯಾಂಡರ್ಡ್ ಲ್ಯಾಪ್ ಟೈಮರ್ ಮತ್ತು ಇಂಟರ್‍ನೆಟ್ ಕನೆಕ್ಟಿವಿಟಿ ಫೀಚರ್ಸ್‍ಗಳೊಂದಿಗೆ ಎಂಟು ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಅಳವಡಿಸಿದೆ.
MOST READ: ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245

ಸ್ಕೋಡಾ ಅಕ್ಟೀವಾ ಕ್ರ್ಯಾಶ್ ಟೆಸ್ಟ್ ನಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡಿದೆ. 2020ರ ಸ್ಕೋಡಾ ಆಕ್ಟೀವಿಯಾ ಹೊಸ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಯುರೋ ಎನ್‍ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಸ್ಕೋಡಾ ಆಕ್ಟೀವಾ ಸಂಪೂರ್ಣ 5 ಸ್ಟಾರ್ ರೇಟಿಂಗ್ ಪಡೆದಿದೆ.

ಸೈಡ್ ಬ್ಯಾರಿಯರ್ ಟೆಸ್ಟ್ ನಲ್ಲಿ ಕಾರಿನ ಕ್ರಿಟಿಕಲ್ ಬಾಡಿಯು ಉತ್ತಮ ರಕ್ಷಣೆಯನ್ನು ಹೊಂದಿದೆ ಎಂದು ರೇಟಿಂಗ್ ನೀಡಲಾಗಿದೆ. 2020ರ ಸ್ಕೋಡಾ ಅಕ್ಟೀವಿಯಾ ಚಿಲ್ಡ್ ಒಕಿಪ್ಯಾಡ್ ಪ್ರೊಟಕ್ಷನ್ ಟೆಸ್ಟ್ ನಲ್ಲಿ 43.2 ಅಂಕಗಳನ್ನು ಗಳಿಸಿದೆ, ಅಂದರೆ ಶೇ.92 ಪ್ರತಿಶತ ದಷ್ಟು ಆಗಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಅಲ್ಲದೇ ಹೊಸ ಆಕ್ಟೀವಿಯಾ ಕಾಂಬಿ ವರ್ಷನ್ ಟೆಸ್ಟ್ ನಲ್ಲಿ 48ಕ್ಕೆ 35.3 ಅಂಕಗಳು, ಪೆಡಸ್ಟ್ರೈನ್ ಸುರಕ್ಷತಾ ಟೆಸ್ಟ್ ನಲ್ಲಿ 13ಕ್ಕೆ 10.3 ಅಂಕಗಳನ್ನು ಪಡೆದಿದೆ. ಕಂಪನಿಯ ಜನಪ್ರಿಯ ಮಾದರಿ ಹೊಸ ಆಕ್ಟೀವಿಯಾ 4,690 ಎಂಎಂ ಉದ್ದ, 1,829 ಎಂಎಂ ಅಗಲ ಮತ್ತು 1,470 ಎಂಎಂ ಎತ್ತರವನ್ನು ಹೊಂದಿದೆ.

ಈ ಕಾರು 2,686 ಎಂಎಂ ವ್ಹೀಲ್‍ಬೇಸ್ ಹೊಂದಿದೆ. ಹೊಸ ಆಕ್ಟೀವಿಯಾದ ಬೂಟ್ ಸ್ಪೇಸ್ 600 ಲೀಟರ್ ಆಗಿದ್ದು, ಹಿಂದಿನ ಕಾರಿಗೆ ಹೋಲಿಸಿದರೆ 30 ಲೀಟರ್‍ನಷ್ಟು ಹೆಚ್ಚಾಗಿದೆ. ಹೊಸ ಕಾರಿನಲ್ಲಿ ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್, ಟ್ರೆಪೆಜ್ ಆಕರಾದ ಎಕ್ಸಾಸ್ಟ್ ಟಿಪ್ಸ್ ಮತ್ತು ಮುಂಭಾಗದ ಬ್ಲ್ಯಾಕ್ ಗ್ರಿಲ್‍ನಲ್ಲಿ ಡ್ಯುಯಲ್ ಸ್ಪ್ಲಿಟ್ ಹೆಡ್‍ಲ್ಯಾಂಪ್‍ಗಳನ್ನು ಹೊಂದಿರಲಿದೆ.
MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಹೊಸ ಆಕ್ಟೀವಿಯಾದಲ್ಲಿ 1.0 ಲೀಟರ್ ಮೂರು ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ. ಜೊತೆಗೆ 2.0 ಲೀಟರ್ ಟಿಎಸ್ಐ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಪ್ಲಗ್ ಇನ್ ಹೈಬ್ರಿಡ್ ಆಯ್ಕೆಯೂ ಸಹ ಲಭ್ಯವಿದ್ದು ಅದು 1.4 ಲೀಟರ್ ಎಂಜಿನ್ ಆಗಿರಲಿದೆ.

ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಸೆಡಾನ್ ಆಗಿದೆ. ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಬಹುನಿರೀಕ್ಷಿತ ಸ್ಕೋಡಾ ಆಕ್ಟೀವಿಯಾ ಕಾರು ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ.


Click it and Unblock the Notifications