ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245
ಸ್ಕೋಡಾ ಇಂಡಿಯಾ ತನ್ನ ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪರಿಚಯಿಸಿತು. ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.36 ಲಕ್ಷಗಳಾಗಿದೆ.

ರ್ಯಾಲಿ ಗ್ರೀನ್ ಬಣ್ಣದ ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು ಕಂಪನಿಯ ಡಾಕ್ ಯಾರ್ಡ್‌ನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಕೊರಿಡಾ ರೆಡ್, ರೇಸ್ ಬ್ಲೂ, ಕ್ಯಾಂಡಿ ವೈಟ್ ಮತ್ತು ಬ್ಲ್ಯಾಕ್ ಮ್ಯಾಜಿಕ್ ಎಂಬ ಬಣ್ಣಗಳ ಆಯ್ಕೆಯ ಆಕ್ಟೀವಿಯಾ ಆರ್‍ಎಸ್ 245 ಕಾರುಗಳು ಕೂಡ ಕಾಣಿಸಿಕೊಂಡಿದೆ. ಈ ಚಿತ್ರವನ್ನು ಟೀಮ್ ಬಿಹೆಚ್‍ಪಿ ಬಹಿರಂಗಪಡಿಸಿದೆ.

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಸೆಡಾನ್ ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್, ಟ್ರೆಪೆಜ್ ಆಕರಾದ ಎಕ್ಸಾಸ್ಟ್ ಟಿಪ್ಸ್ ಮತ್ತು ಮುಂಭಾಗದಲ್ಲಿ ಬ್ಲ್ಯಾಕ್ ಗ್ರಿಲ್‍ನಲ್ಲಿ ಆರ್‍ಎಸ್ ಬ್ಯಾಡ್ಜ್ ಹೊಂದಿರುವ ಡ್ಯುಯಲ್ ಸ್ಪ್ಲಿಟ್ ಹೆಡ್‍ಲ್ಯಾಂಪ್‍ಗಳನ್ನು ಒಳಗೊಂಡಿದೆ.
MOST READ: ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್

ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಬ್ಲ್ಯಾಕ್ ಗ್ರಿಲ್, ಮ್ಯಾಚಿಂಗ್ ಒಆರ್‍ವಿಎಂಗಳು ದೊಡ್ಡದಾದ 19 ಇಂಚಿನ ಅಲಾಯ್ ವ್ಹೀಲ್‍ಗಳು, ವೈಡರ್ ಏರ್ ಡ್ಯಾಮ್‍ಗಳು ಮತ್ತು ಫ್ರಂಟ್ ಬಂಪರ್‍ಗಳನ್ನು ಹೊಂದಿವೆ.

ವಾಹನವು ಬೂಟ್ ಲಿಡ್ ಸ್ಪಾಯ್ಲರ್ ಮತ್ತು ಹಿಂಭಾಗದಲ್ಲಿ ಸಿ - ಆಕಾರಾದ ಟೇಲ್‍ಲ್ಯಾಂಪ್‍ಗಳನ್ನು ಒಳಗೊಂಡಿದೆ. ಇನ್ನೂ ಇಂಟಿರಿಯರ್‍ನಲ್ಲಿ ಎಲೆಕ್ಟ್ರಾನಿಕಾನಿಕಲ್ ಅಡ್ಜಂಟಬಲ್ ಫ್ರಂಟ್ ಸೀಟ್ ಮುಂಭಾಗದ ಸೀಟ್ ಅಲ್ಕಾಂಟರ್ ಲೆದರ್, ಸ್ಟ್ಯಾಂಡರ್ಡ್ ಲ್ಯಾಪ್ ಟೈಮರ್ ಮತ್ತು ಇಂಟರ್‍ನೆಟ್ ಕನೆಕ್ಟಿವಿಟಿ ಫೀಚರ್ಸ್‍ಗಳೊಂದಿಗೆ ಎಂಟು ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಅಳವಡಿಸಿದೆ.
MOST READ: ಬೆಂಗಳೂರಿನಲ್ಲಿ ತುರ್ತು ಸೇವೆ ಆರಂಭಿಸಿದ ಓಲಾ, ಉಬರ್

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಸೆಡಾನ್ 2.0 ಲೀಟರ್ ಟಿಎಸ್‍ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 242 ಬಿಹೆಚ್‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍ಜಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್245 ಸೆಡಾನ್ ಕೇವಲ 6.6 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.
MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಆಕ್ಟೀವಿಯಾ ಆರ್‍ಎಸ್ 245 ಕಾರು ರ್ಯಾಲಿ ಗ್ರೀನ್, ರೇಸ್ ಬ್ಲೂ, ಕೊರಿಡಾ ರೆಡ್, ಮ್ಯಾಜಿಕ್ ಬ್ಲ್ಯಾಕ್ ಮತ್ತು ಕ್ಯಾಂಡಿ ವೈಟ್ ಎಂಬ 5 ಬಣ್ಣಗಳಲ್ಲಿ ಲಭ್ಯವಿರಲಿದೆ. ಆರ್‍ಎಸ್ ಮಾದರಿಯು ಪ್ರಸ್ತುತ ತಲೆಮಾರಿನ ಸ್ಕೋಡಾ ಆಕ್ಟೀವಿಯಾವನ್ನು ಆಧರಿಸಿದೆ.

ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್, ಬಿಎಂಡಬ್ಲ್ಯೂ 3 ಸೀರಿಸ್ ಮತ್ತು ಜಾಗ್ವಾರ್ ಎಕ್ಸ್‌ಇ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








