ಹೊಸ ಸುರಕ್ಷತಾ ಕ್ರಮಗಳೊಂದಿಗೆ ಆಕ್ಟೀವಿಯಾ ಆರ್‍ಎಸ್ 245 ಕಾರಿನ ವಿತರಿಸಿದ ಸ್ಕೋಡಾ
ಸ್ಕೋಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು ಕೇವಲ 200 ಯುನಿಟ್‍ಗಳಿಗೆ ಸೀಮಿತಗೊಳಿಸಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಸ್ಕೋಡಾ ಇಂಡಿಯಾ ಕಂಪನಿಯು ಆಕ್ಟೀವಿಯಾ ಆರ್‍ಎಸ್ 245 ಕಾರಿನ ವಿತರಣೆಯನ್ನು ಆರಂಭಿಸಿದೆ.

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.36 ಲಕ್ಷಗಳಾಗಿದೆ. ಈ ಹೊಸ ಕಾರಿಗಾಗಿ ಇತ್ತೀಚೆಗೆ ಸ್ಕೋಡಾ ಕಂಪನಿಯು ಅಧಿಕೃತ ಬುಕ್ಕಿಂಗ್ ಅನ್ನು ಪ್ರಾರಂಭಿಸಿದರು. ಆದರೆ ಎಲ್ಲಾ ಕಾರುಗಳು ಮಾರಾಟವಾಗಿರುವುದರಿಂದ ಬುಕ್ಕಿಂಗ್ ಅನ್ನು ಕ್ಲೋಸ್ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು ಕೇವಲ 200 ಯುನಿಟ್‍ಗಳಿಗೆ ಸೀಮಿತಗೊಳಿಸಿ ಬಿಡುಗಡೆಗೊಳಿಸಿತ್ತು.

ಈ 200 ಯುನಿಟ್‍ಗಳಲ್ಲಿ ಬೆಂಗಳೂರಿಗರು 44 ಯುನಿಟ್‍ಗಳನ್ನು ಖರೀದಿಸಿದ್ದಾರೆ. ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರಿನ ಶೇ.22 ರಷ್ಟು ಬೆಂಗಳೂರಿನಲ್ಲಿ ಮಾರಾಟವಾಗಿವೆ. ಇನ್ನು ಉಳಿದ ಯುನಿಟ್‍ಗಳು ಚಿನ್ನೈ, ಮುಂಬೈ, ಹೈದರಾಬಾದ್ ಮತ್ತು ಇನ್ನಿತರ ಪ್ರಮುಖ ನಗರಗಳಲ್ಲಿ ಮಾರಾಟವಾಗಿವೆ.
MOST READ: ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಕಾರುಗಳು

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರಿನ ಮೊದಲ ಯುನಿಟ್ ಅನ್ನು ಗೋವಾದಲ್ಲಿ ವಿತರಣೆ ಮಾಡಿದ. ಬ್ಲೂ ಬಣ್ಣದ ಈ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು ಹಲವು ರೀತಿಯ ಸುರಕ್ಷತಾ ಕ್ರಮವನ್ನು ಪಾಲಿಸಿ ವಿತರಿಸಲಾಗಿದೆ. ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಆಕ್ಟೀವಿಯಾ ಆರ್‍ಎಸ್ ಒಂದಾಗಿದೆ.

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಸೆಡಾನ್ ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್, ಟ್ರೆಪೆಜ್ ಆಕರಾದ ಎಕ್ಸಾಸ್ಟ್ ಟಿಪ್ಸ್ ಮತ್ತು ಮುಂಭಾಗದಲ್ಲಿ ಬ್ಲ್ಯಾಕ್ ಗ್ರಿಲ್‍ನಲ್ಲಿ ಆರ್‍ಎಸ್ ಬ್ಯಾಡ್ಜ್ ಹೊಂದಿರುವ ಡ್ಯುಯಲ್ ಸ್ಪ್ಲಿಟ್ ಹೆಡ್‍ಲ್ಯಾಂಪ್‍ಗಳನ್ನು ಒಳಗೊಂಡಿದೆ.
MOST READ: ಲಾಕ್‌ಡೌನ್ ಮುಗಿದ ಬಳಿಕ ಬಿಡುಗಡೆಯಾಗಲಿದೆ 2020ರ ಮಹೀಂದ್ರಾ ಥಾರ್

ಇನ್ನೂ ಇಂಟಿರಿಯರ್‍ನಲ್ಲಿ ಎಲೆಕ್ಟ್ರಾನಿಕಾನಿಕಲ್ ಅಡ್ಜಂಟಬಲ್ ಫ್ರಂಟ್ ಸೀಟ್ ಮುಂಭಾಗದ ಸೀಟ್ ಅಲ್ಕಾಂಟರ್ ಲೆದರ್, ಸ್ಟ್ಯಾಂಡರ್ಡ್ ಲ್ಯಾಪ್ ಟೈಮರ್ ಮತ್ತು ಇಂಟರ್‍ನೆಟ್ ಕನೆಕ್ಟಿವಿಟಿ ಫೀಚರ್ಸ್‍ಗಳೊಂದಿಗೆ ಎಂಟು ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಅಳವಡಿಸಿದೆ.

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಸೆಡಾನ್ 2.0 ಲೀಟರ್ ಟಿಎಸ್‍ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 242 ಬಿಹೆಚ್‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍ಜಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್245 ಸೆಡಾನ್ ಕೇವಲ 6.6 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್, ಬಿಎಂಡಬ್ಲ್ಯೂ 3 ಸೀರಿಸ್ ಮತ್ತು ಜಾಗ್ವಾರ್ ಎಕ್ಸ್‌ಇ ಕಾರುಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








