ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಹೊಸ ಸ್ಕೋಡಾ ರ‍್ಯಾಪಿಡ್ ಸಿಎನ್‌ಜಿ ಆವೃತ್ತಿ
ಸ್ಕೋಡಾ ಕಂಪನಿಯು ಹೊಸ ರ‍್ಯಾಪಿಡ್ ಸಿಎನ್‌ಜಿ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಇನ್ನು ಭಾರತದಲ್ಲಿ ಮೊದಲ ಬಾರಿಗೆ ಸ್ಕೋಡಾ ರ‍್ಯಾಪಿಡ್ ಸಿಎನ್‌ಜಿ ಆವೃತ್ತಿಯು ಸ್ಪಾಟ್ ಟೆಸ್ಟ್ ನಡೆಸಿದೆ.

ಸ್ಕೋಡಾ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಝಾಕ್ ಹೋಲಿಸ್ ಅವರು ಕಳೆದ ವರ್ಷ ಮಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಭಾರತದಲ್ಲಿ ಸಿಎನ್‌ಜಿ ಕಾರುಗಳು ಬಿಡುಗಡೆಗೊಳಿಸುವುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇನ್ನು ಸರ್ಕಾರವು ಸಿಎನ್‌ಜಿ ನೆಟ್‌ವರ್ಕ್ ಅನ್ನು ವಿಸ್ತರಿಸಿದಾಗ ಸಿಎನ್‌ಜಿ ಪರಿಚಯಿಸುತ್ತೇವೆ ಎಂದು ಹೇಳಿದ್ದರು.

ಸ್ಕೋಡಾ ರ‍್ಯಾಪಿಡ್ ಸಿಎನ್‌ಜಿ ಆವೃತ್ತಿಯಲ್ಲಿ 1.0-ಲೀಟರ್ ಟಿಎಸ್‌ಐ ಎಂಜಿನ್ ಅನ್ನು ಅಳವಡಿಸಬಹುದು. ಇದು ಯುರೋಪಿನಲ್ಲಿ ಮಾರಾಟವಾಗುವ ಅನೇಕ ಫೋಕ್ಸ್ ವ್ಯಾಗನ್ ಮತ್ತು ಸ್ಕೋಡಾ ಕಾರುಗಳಲ್ಲಿ ಇದೇ ಎಂಜಿನ್ ಅನ್ನು ಕಂಡು ಬರುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಪೆಟ್ರೋಲ್ ಆವೃತ್ತಿಗೆ ಹೋಲಿಸಿದರೆ ಇದು ಕಡಿಮೆ ಪವರ್ ಅನ್ನು ಹೊಂದಿದೆ. ಉದಾಹರಣೆಗೆ, ಯುರೋ-ಸ್ಪೆಕ್ ಪೊಲೊ 1.0-ಲೀಟರ್ ಟಿಜಿಐ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 90 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಇನ್ನು ರ‍್ಯಾಪಿಡ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಇನ್ನು ಸಾಮಾನ್ಯ ಸ್ಕೋಡಾ ರ‍್ಯಾಪಿಡ್ ಸಿಎನ್‌ಜಿ ಆವೃತ್ತಿಯಲ್ಲಿ ಲೀಟರ್ 1.0-ಲೀಟರ್, 3-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಎಂಜಿನ್ 109 ಬಿಹೆಚ್ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ರ‍್ಯಾಪಿಡ್ ಸಿಎನ್‌ಜಿ ಆವೃತ್ತಿಯು ಪೊಲೊ ಮಾದರಿಗೆ ಹೋಲುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ರ‍್ಯಾಪಿಡ್ ಸಿಎನ್‌ಜಿ ಆವೃತ್ತಿಯು ಫ್ಯಾಕ್ಟರಿ-ಫಿಟ್ ತಂತ್ರಜ್ಞಾನದಲ್ಲಿ ಬಿಡುಗಡೆಗೊಳಿಸಬಹುದು.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಹೊಸ ಸ್ಕೋಡಾ ರ‍್ಯಾಪಿಡ್ ಸಿಎನ್‌ಜಿ ಆವೃತ್ತಿ ಸಾಮಾನ್ಯ ಮಾದರಿ ರೀತಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಸ್ಕೋಡಾ ರ‍್ಯಾಪಿಡ್ ಸಿಎನ್‌ಜಿ ಆವೃತ್ತಿಯು ಡ್ಯುಯಲ್-ಟೋನ್ ಬಣ್ಣವನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳನ್ನು ಕೂಡ ಹೊಂದಿವೆ.

ರ‍್ಯಾಪಿಡ್ ಸಿಎನ್‌ಜಿ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಸ್ಕೋಡಾ ಕಂಪನಿಯು ಇನ್ನೂ ನಿರ್ಧರಿಸಲಾಗಿಲ್ಲ, ಆದರೆ ಸ್ಕೋಡಾ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಸಿಎನ್‌ಜಿ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.


Click it and Unblock the Notifications