1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ವೆರ್ನಾ ಫೇಸ್‌ಲಿಫ್ಟ್

ಹ್ಯುಂಡೈ ಇಂಡಿಯಾ ಕಂಪನಿಯು ಬಿಎಸ್6 ಎಂಜಿನ್ ಪ್ರೇರಿತ ವೆರ್ನಾ ಫೇಸ್‌ಲಿಫ್ಟ್ ಆವೃತ್ತಿಯನ್ನು ಇದೇ ತಿಂಗಳು 26ಕ್ಕೆ ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನಲ್ಲಿ ಹಲವಾರು ತಾಂತ್ರಿಕ ಅಂಶಗಳ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುತ್ತಿದೆ.

1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ವೆರ್ನಾ ಫೇಸ್‌ಲಿಫ್ಟ್

ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗುತ್ತಿದ್ದು, ಹ್ಯುಂಡೈ ವೆರ್ನಾ ಸೆಡಾನ್ ಫೇಸ್‌ಲಿಫ್ಟ್ ಆವೃತ್ತಿಯು ಬಿಎಸ್-6 ಎಂಜಿನ್ ಪ್ರೇರಿತ ಹೊಸ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳುವುದರ ಜೊತೆಗೆ ಕಾರಿನ ಹೊರ ಭಾಗದ ವಿನ್ಯಾಸದಲ್ಲೂ ಕೂಡಾ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ. ಸಿ ಸೆಗ್ಮೆಂಟ್ ಸೆಡಾನ್ ಆವೃತ್ತಿಗಳಲ್ಲೇ ವಿಶೇಷ ಎನ್ನಿಸಲಿರುವ ಹೊಸ ಫೇಸ್‌ಲಿಫ್ಟ್ ಕಾರು ಈ ಬಾರಿ ನ್ಯೂ ಜನರೇಷನ್ ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ವೆರ್ನಾ ಫೇಸ್‌ಲಿಫ್ಟ್

ಸದ್ಯ ಅನಾವರಣಗೊಳಿಸಲಾಗಿರುವ ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತಲೂ ವಿಭಿನ್ನ ವಿನ್ಯಾಸ ಹೊಂದಿರುವುದರ ಜೊತೆಗೆ 35ಕ್ಕೂ ಹೆಚ್ಚು ಫೀಚರ್ಸ್‌ಗಳನ್ನು ಒಳಗೊಂಡ ಬ್ಲ್ಯೂ ಲಿಂಕ್ ತಂತ್ರಜ್ಞಾನವನ್ನು ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ವೆರ್ನಾ ಫೇಸ್‌ಲಿಫ್ಟ್

ಇದರೊಂದಿಗೆ ವೆರ್ನಾ ಫೇಸ್‌ಲಿಫ್ಟ್ ಕಾರಿನ ಮುಂಭಾಗದ ಗ್ರಿಲ್ ಸ್ಲಾಟ್ ಸಹ ಸಾಕಷ್ಟು ಬದಲಾವಣೆ ಹೊಂದಿದ್ದು, ವಿದೇಶಿ ಮಾರುಕಟ್ಟೆಗಳಲ್ಲಿ ಸದ್ಯ ಮಾರಾಟದಲ್ಲಿರುವ ಸೊನಾಟಾ ಸೆಡಾನ್ ಮಾದರಿಯ ಹೋಲಿಕೆಯನ್ನು ಪಡೆದುಕೊಂಡಿರುವುದು ಪ್ರಮುಖ ಆಕರ್ಷಣೆಯಾಗಲಿದೆ.

1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ವೆರ್ನಾ ಫೇಸ್‌ಲಿಫ್ಟ್

ಹಾಗೆಯೇ ಹೊಸ ಕಾರು ಮಾದರಿಯ ಹೆಡ್‌ಲ್ಯಾಂಪ್ ಸೌಲಭ್ಯವು ಸಹ ಕಾರಿನ ನೋಟಕ್ಕೆ ಮತ್ತಷ್ಟು ಬಲಿಷ್ಠತೆಯನ್ನು ತುಂಬಲಿದ್ದು, ಮೂರು ಲೈಟ್‌ಗಳೂ ಪ್ರತ್ಯೇಕ ಹೋಸ್ ವಿನ್ಯಾಸವನ್ನು ಪಡೆದುಕೊಂಡಿರುವುದು ಪ್ರೀಮಿಯಂ ಹೆಚ್ಚಿಸಿದೆ. ಜೊತೆಗೆ ಎಲ್ಇಡಿ ಹೆಡ್‌ಲ್ಯಾಂಪ್ ಭೀಮ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಸನ್‌ರೂಫ್ ಇದರಲ್ಲಿದ್ದು,ಕಾರಿನ ಹಿಂಭಾಗದ ತಾಂತ್ರಿಕ ವಿನ್ಯಾಸದಲ್ಲೂ ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ವೆರ್ನಾ ಫೇಸ್‌ಲಿಫ್ಟ್

ಇನ್ನು ಟೈಲ್ ಲ್ಯಾಂಪ್, ಬೂಟ್ ಲಿಡ್ ಮತ್ತು ಸ್ಪೋರ್ಟಿ ಮಾದರಿಯ ಕ್ರೊಮ್ ನೀಡಿರುವುದು ಕೂಡಾ ಮಹತ್ವದ ಬದಲಾವಣೆ ಕಾರಣವಾಗಿದ್ದು, ಕಾರಿನ ಹೊರವಿನ್ಯಾಸದ ಹೊರತಾಗಿ ಇಂಟಿರಿಯರ್ ಮಾಹಿತಿ ಲಭ್ಯವಾಗಿಲ್ಲವಾದರೂ ಪ್ರಸ್ತುತ ಮಾದರಿಗಿಂತಲೂ ಅತ್ಯುತ್ತಮ ಫೀರ್ಚಸ್ ಹೊಂದಿರಲಿದೆ.

1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ವೆರ್ನಾ ಫೇಸ್‌ಲಿಫ್ಟ್

ಹೊಸ ಕಾರಿನ ಎಂಜಿನ್‌ನಲ್ಲಿ ಭಾರೀ ಬದಲಾವಣೆ

ಸದ್ಯ ಮಾರುಕಟ್ಟೆಯಲ್ಲಿರುವ ವೆರ್ನಾ ಮಾದರಿಯು 1.6-ಲೀಟರ್ ಡೀಸೆಲ್ ಮತ್ತು 1.6-ಲೀಟರ್ ಪೆಟ್ರೋಲ್ ಜೊತೆಗೆ 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಬಿಎಸ್-6 ನಿಯಮಾವಳಿಗೆ ಅನುಗುಣವಾಗಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ವೆರ್ನಾ ಫೇಸ್‌ಲಿಫ್ಟ್

ಹೊಸ ಎಮಿಷನ್‌ ನಿಯಮದಿಂದಾಗಿ ಹಳೆಯ ಎಂಜಿನ್ ಆಯ್ಕೆಗಳಿಗೆ ಗುಡ್‌ಬೈ ಹೇಳಿರುವ ಹ್ಯುಂಡೈ ಸಂಸ್ಥೆಯು ಹೊಸದಾಗಿ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಗಳನ್ನು ಪರಿಚಯಿಸುತ್ತಿದ್ದು, ಇದೇ ಎಂಜಿನ್ ಮಾದರಿಯು ವೆರ್ನಾದಲ್ಲಿ ಮಾತ್ರವಲ್ಲ ಕ್ರೆಟಾ ಮತ್ತು ವೆನ್ಯೂನಲ್ಲೂ ಬಳಕೆ ಮಾಡಲಾಗಿದೆ.

1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ವೆರ್ನಾ ಫೇಸ್‌ಲಿಫ್ಟ್

ಇದರೊಂದಿಗೆ ಹೊಸ ಕಾರಿನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಪ್ರೇರಿತ 1.0-ಲೀಟರ್ ಟರ್ಬೋ ಎಂಜಿನ್ ನೀಡುವ ಸುಳಿವು ನೀಡಿದ್ದು, ಹೊಸ ಕಾರಿನ ಹಾರ್ಸ್ ಪವರ್ ಕುರಿತಾಗಿ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಟರ್ಬೋ ಆವೃತ್ತಿಯು ಈಗಾಗಲೇ ಚೀನಿ ಮತ್ತು ಥೈಲ್ಯಾಂಡ್ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಸೆಡಾನ್ ಕಾರುಗಳಲ್ಲೇ ಬಲಿಷ್ಠ ಟರ್ಬೋ ಆವೃತ್ತಿಯು ಇದಾಗಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Source: Autocarindia

Most Read Articles

Kannada
English summary
Hyundai readies sporty Verna 1.0 turbo-petrol with paddleshifters. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more