Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಗಲಿದೆ ಹೊಸ ಸುಜುಕಿ ಗ್ರ್ಯಾಂಡ್ ವಿಟಾರಾ 7-ಸೀಟರ್ ಎಸ್‍ಯುವಿ
ಜಪಾನ್ ಮೂಲದ ಸುಜುಕಿ ಕಂಪನಿಯು ನ್ಯೂ ಜನರೇಷನ್ ವಿಟಾರಾ ಎಸ್‍ಯುವಿಯನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಸುಜುಕಿ ವಿಟಾರಾ ಎಸ್‍ಯುವಿಯು ಗ್ಲೋಬಲ್ ಸಿ-ಪ್ಲಾಟ್‌ಫಾರ್ಮ್ ಅನ್ನು ಉಳಿಸಿಕೊಳ್ಳುತ್ತದೆ.

ಈ ಸುಜುಕಿ ವಿಟಾರಾ ಎಸ್‍ಯುವಿಯು ವಿಟಾರಾ ಬ್ರೆಝಾಗೆ ಆಧಾರವಾಗಿದೆ. ಸುಜುಕಿ ಕಂಪನಿಯು ವಿಟಾರಾ ಎಂಬ ಹೆಸರಿನಲ್ಲಿ ಹೊಸ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಹೊಸ ಮಾದರಿಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಹೊಸ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯನ್ನು 7-ಸೀಟರ್ ಮಾದರಿಯಾಗಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಎಕ್ಸ್‌ಎಲ್ -7 ಮಾದರಿಯನ್ನು ಆಧರಿಸಿ ಹೊಸ ವಿಟಾರಾ ಎಸ್‍ಯುವಿಯನ್ನು ಬಿಡುಗಡೆಗೊಳಿಸಬಹುದು.

ಇನ್ನು ಲ್ಯಾಡರ್-ಫ್ರೇಮ್ ಚಾಸಿಸ್ ಮತ್ತು ಸಾಪ್ಟ್ ಆಫ್-ರೋಡ್ ಸಾಮರ್ಥ್ಯವನ್ನು ಕೂಡ ಹೊಂದಿರಬಹುದು. ಇನ್ನು ಈ ಹೊಸ ಸುಜುಕಿ ವಿಟಾರಾ 7-ಸೀಟರ್ ಎಸ್‍ಯುವಿಯಲ್ಲಿ ಫ್ಹೋರ್-ವ್ಹೀಲ್-ಡ್ರೈವ್ ಅನ್ನು ಕೂಡ ಅಳವಡಿಸಲಾಗುತ್ತದೆ.
MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಭಾರತದಲ್ಲಿ ಮಾರುತಿ ಸುಜುಕಿ ಮುಂದಿನ 2-3 ವರ್ಷಗಳಲ್ಲಿ 5 ಹೊಸ ಯುಟಿಲಿಟಿ ವಾಹನಗಳನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಸುಜುಕಿ ಕಂಪನಿಯು ಮಿಡ್ ಎಸ್‍ಯುವಿ, ಹೊಸ ಸಿ-ಸೆಗ್ಮೆಂಟ್ ಎಂಪಿವಿ, ಹೊಸ ವಿಟಾರಾ ಬ್ರೆಝಾ, ಹೊಸ ಕಾಂಪ್ಯಾಕ್ಟ್ ಕ್ರಾಸ್ಒವರ್ ಮತ್ತು 5-ಡೋರ್ ಜಿಮ್ನಿ ಎಸ್‌ಯುವಿ ಪರಿಚಯಿಸಲಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆದರೆ ಹೊಸ ಸುಜುಕಿ ವಿಟಾರಾ 7-ಸೀಟರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಬದಲಾಗಿ ಟೊಯೊಟಾದ ಡಿಎನ್‌ಜಿಎ ಪ್ಲಾಟ್‌ಫಾರ್ಮ್‌ನ ಆಧಾರದ ಮೇಲೆ ಎಂಎಸ್‌ಐಎಲ್ ಎಲ್ಲಾ ಹೊಸ ಮಧ್ಯಮ ಗಾತ್ರದ ಎಸ್ಯುವಿಯನ್ನು ಬಿಡುಗಡೆ ಮಾಡಲಿದೆ.

ಸುಜುಕಿ ತನ್ನ ಹೊಸ ಸೊಲಿಯೊ ಬ್ಯಾಂಡಿಟ್ ಕಾಂಪ್ಯಾಕ್ಟ್ ಎಂಪಿವಿಯನ್ನು ತಾಯಿನಾಡಿನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಸೊಲಿಯೊ ಬ್ಯಾಂಡಿಟ್ ಕಾಂಪ್ಯಾಕ್ಟ್ ಎಂಪಿವಿಯನ್ನು 2ಡಬ್ಲ್ಯುಡಿ ಮತ್ತು 4ಡಬ್ಲ್ಯುಡಿ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಸೊಲಿಯೊ ಬ್ಯಾಂಡಿಟ್ ಬಾಕ್ಸೀ ಕಾಂಪ್ಯಾಕ್ಟ್ ಎಂಪಿವಿಯು ಬಾಕ್ಸೀ ಲುಕ್ ಅನ್ನು ಹೊಂದಿದ್ದರೂ, ಅದರ ವಿನ್ಯಾಸ ಮತ್ತು ಸ್ಟೈಲಿಂಗ್ ಆಕರ್ಷಕವಾಗಿದೆ. ಈ ಹೊಸ ಸುಜುಕಿ ಕಾಂಪ್ಯಾಕ್ಟ್ ಎಂಪಿವಿಯ ಮುಂಭಾಗದ ವಿನ್ಯಾಸವು ಎಂಜಿ ಹೆಕ್ಟರ್ ವಿನ್ಯಾಸ ಪ್ರೇರಿತವಗಿರುವಂತಿದೆ.

ಇನ್ನು ಸುಜುಕಿ ಕಂಪನಿಯು ಹೊಸ ತಲೆಮಾರಿನ ವಿಟಾರಾ ಬ್ರೆಝಾ ಎಸ್‍ಯುವಿಯನ್ನು ಭಾರತದಲ್ಲಿ 2022ರಲ್ಲಿ ಪರಿಚಯಿಸಲಿದೆ, ಇನ್ನು ಸುಜುಕಿ ಕಂಪನಿಯು ಬಹುನಿರೀಕ್ಷಿತ ಐಕಾನಿಕ್ ಆಫ್-ರೋಡರ್ ಜಿಮ್ನಿ ಎಸ್‍ಯುವಿಯನ್ನು ಕೂಡ ಭಾರತದಲ್ಲಿ ಪರಿಚಯಿಸಲಿದೆ. 5-ಡೋರಿನ ಜಿಮ್ನಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಜನಪ್ರಿಯ ಸುಜುಕಿ ಜಿಮ್ನಿ ಭಾರತದಲ್ಲಿ ಬಿಡುಗಡೆಯಾದ ಬಳಿಕ ಭರ್ಜರಿಯಾಗಿ ಮಾರಾಟವಾಗುತ್ತಿರುವ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ.