Just In
Don't Miss!
- News
ಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಇಂದು ಸಿಎಂ ಯಡಿಯೂರಪ್ಪ ಭೇಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಸುಜುಕಿ ಸೊಲಿಯೊ ಬ್ಯಾಂಡಿಟ್ ಹೈಬ್ರಿಡ್ ಆವೃತ್ತಿ
ಜಪಾನ್ ಮೂಲದ ಜನಪ್ರಿಯ ವಾಹನ ಉತ್ಪಾದನಾ ಕಂಪನಿಯಾದ ಸುಜುಕಿ ತನ್ನ ಹೊಸ ಸೊಲಿಯೊ ಬ್ಯಾಂಡಿಟ್ ಕಾಂಪ್ಯಾಕ್ಟ್ ಎಂಪಿವಿಯನ್ನು ತಾಯಿನಾಡಿನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸೊಲಿಯೊ ಬ್ಯಾಂಡಿಟ್ ಕಾಂಪ್ಯಾಕ್ಟ್ ಎಂಪಿವಿಯನ್ನು 2ಡಬ್ಲ್ಯುಡಿ ಮತ್ತು 4ಡಬ್ಲ್ಯುಡಿ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಸೊಲಿಯೊ ಬ್ಯಾಂಡಿಟ್ ಬಾಕ್ಸೀ ಕಾಂಪ್ಯಾಕ್ಟ್ ಎಂಪಿವಿಯು ಬಾಕ್ಸೀ ಲುಕ್ ಅನ್ನು ಹೊಂದಿದ್ದರೂ, ಅದರ ವಿನ್ಯಾಸ ಮತ್ತು ಸ್ಟೈಲಿಂಗ್ ಆಕರ್ಷಕವಾಗಿದೆ. ಈ ಹೊಸ ಸುಜುಕಿ ಕಾಂಪ್ಯಾಕ್ಟ್ ಎಂಪಿವಿಯ ಮುಂಭಾಗದ ವಿನ್ಯಾಸವು ಎಂಜಿ ಹೆಕ್ಟರ್ ವಿನ್ಯಾಸ ಪ್ರೇರಿತವಗಿರುವಂತಿದೆ. ಈ ಹೊಸ ಸುಜುಕಿ ಸೊಲಿಯೊ ಬ್ಯಾಂಡಿಟ್ ಕಾಂಪ್ಯಾಕ್ಟ್ ಎಂಪಿವಿಯ ಮುಂಭಾಗ ದಪ್ಪ ಕ್ರೋಮ್ ಗಳೊಂದಿಗೆ ನಯವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು, ದೊಡ್ಡ ಮುಂಭಾಗದ ಬಂಪರ್ ಮತ್ತು ರೌಂಡ್ ಫಾಗ್ ಲ್ಯಾಂಪ್‌ಗಳನ್ನು ಹೊಂದಿವೆ.

ಇನ್ನು ಈ ಹೊಸ ಸುಜುಕಿ ಕಾಂಪ್ಯಾಕ್ಟ್ ಎಸ್‍ಯುವಿ ಟ್ರೆಂಡಿ ಅಲಾಯ್ ವ್ಹೀಲ್‌ಗಳು, ಬ್ಲ್ಯಾಕ್ ಔಟ್ ಪಿಲ್ಲರ್ಸ್ ಮತ್ತು ಲಂಬವಾಗಿ ಇರಿಸಲಾಗಿರುವ ಎಲ್‌ಇಡಿ ಟೈಲ್ ಲೈಟ್‌ಗಳನ್ನು ಒಳಗೊಂಡಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಸುಜುಕಿ ಸೊಲಿಯೊ ಬ್ಯಾಂಡಿಟ್ ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇನ್ನು ಈ ಹೊಸ ಸುಜುಕಿ ಸೊಲಿಯೊ ಬ್ಯಾಂಡಿಟ್ ಕಾಂಪ್ಯಾಕ್ಟ್ ಎಂಪಿವಿಯ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಡ್ಯುಯಲ್ ಟೋನ್ ಥೀಮ್ ಅನ್ನು ಒಳಗೊಂಡಿದೆ.

ಹೊಸ ಸುಜುಕಿ ಕಾಂಪ್ಯಾಕ್ಟ್ ಎಂಪಿವಿಯಲ್ಲಿ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್, 9 ಇಂಚಿನ ಎಚ್‌ಡಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸ್ಪೀಕರ್ ಆಡಿಯೊ ಸಿಸ್ಟಂ, ಕೀಲೆಸ್ ಎಂಟ್ರಿ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಪವರ್ ಸ್ಟೀರಿಂಗ್, ಸ್ಲೈಡಿಂಗ್ ಡೋರ್ಸ್, ಡ್ರೈವರ್ / ಪ್ಯಾಸೆಂಜರ್ ಸೀಟ್ ಹೀಟರ್ ಮತ್ತು ರಿಯರ್ ಹೀಟರ್ ಡಕ್ಟ್ ಫೀಚರ್ ಗಳನ್ನು ಹೊಂದಿವೆ.
MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಹೊಸ ಸುಜುಕಿ ಕಾಂಪ್ಯಾಕ್ಟ್ ಎಂಪಿವಿಯ ಇಂಟಿರಿಯರ್ ನಲ್ಲಿ ಸಾಕಷ್ಟು ಸ್ಪೇಸ್ ಅನ್ನು ಹೊಂದಿದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಸೀಟುಗಳನ್ನು ಸಂಪೂರ್ಣವಾಗಿ ಹೊಂದಾಣಿಕೆ ಮತ್ತು ವಿವಿಧ ರೀತಿಯಲ್ಲಿ ಬಳಸಬಹುದು.

ಇನ್ನು ಹಿಂಭಾಗದಲ್ಲಿ ಲಾಗೇಜ್ ಸ್ಪೇಸ್ ಅನ್ನು ಹೆಚ್ಚಿಸಲು ಇದರ ಎರಡನೇ ಸಾಲಿನ ಸೀಟುಗಳು ಬೇಡ್ ರೀತಿಯಲ್ಲಿ ಮಡಚಬಹುದು. ಸುರಕ್ಷತೆಯ ದೃಷ್ಟಿಯಿಂದ ಈ ಹೊಸ ಸುಜುಕಿ ಕಾಂಪ್ಯಾಕ್ಟ್ ಎಂಪಿವಿಯಲ್ಲಿ ಸಾಕಷ್ಟು ಫಿಚರ್ ಗಳನ್ನು ನೀಡಲಾಗಿದೆ.
MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಇದರಲ್ಲಿ ಎಸ್‌ಆರ್‌ಎಸ್ ಏರ್‌ಬ್ಯಾಗ್, ಎಸ್‌ಆರ್‌ಎಸ್ ಕರ್ಟನ್ ಏರ್‌ಬ್ಯಾಗ್, ಲೇನ್ ಡಿವೆಷನ್ ಅಲರ್ಟ್ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಹೆಡ್-ಅಪ್ ಡಿಸ್ಪ್ಲೇಯನ್ನು ಹೊಂದಿದೆ.

ಇದರೊಂದಿಗೆ ಇಎಸ್‌ಪಿ, ಎಬಿಎಸ್ ವಿಥ್ ಇಬಿಡಿ, ಫ್ರಂಟ್ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್, ಹಿಲ್ ಹೋಲ್ಡ್ ಕಂಟ್ರೋಲ್ , 360 ವ್ಯೂ ಕ್ಯಾಮೆರಾ, ಸೆಕ್ಯುರಿಟಿ ಅಲಾರ್ಮ್ ಸಿಸ್ಟಮ್, ಎಂಜಿನ್ ಇಮೊಬೈಲೈಸರ್ ಮತ್ತು ಎಮರ್ಜನ್ಸಿ ಪಂಕ್ಚರ್ ರಿಪೇರಿ ಕಿಟ್ ಅನ್ನು ಕೂಡ ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಹೊಸ ಸುಜುಕಿ ಸೊಲಿಯೊ ಬ್ಯಾಂಡಿಟ್ ಕಾಂಪ್ಯಾಕ್ಟ್ ಎಂಪಿವಿಯಲ್ಲಿ 1.2 ಲೀಟರ್ ಗ್ಯಾಸೋಲಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡಿಸಿ ಸಿಂಕ್ರೊನಸ್ ಮೋಟರ್ ಅನ್ನು ಒಳಗೊಂಡಿರುವ ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದೆ.

ಗ್ಯಾಸೋಲಿನ್ ಎಂಜಿನ್ 6,000 ಆರ್‌ಪಿಎಂನಲ್ಲಿ 91 ಬಿಹೆಚ್‍ಪಿ ಪವರ್ ಮತ್ತು 4,400 ಆರ್‌ಪಿಎಂನಲ್ಲಿ 118 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಸಿವಿಟಿ ಯುನಿಟ್ ನೊಂದಿಗೆ ಜೋಡಿಸಲಾಗಿದೆ. ಎಲೆಕ್ಟ್ರಿಕ್ ಮೋಟರ್ 3.1 ಬಿಹೆಚ್‍ಪಿ ಪವರ್ ಮತ್ತು 50 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.