ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. 2019ರ ಜಿನೀವಾ ಮೋಟಾರ್ ಶೋನಲ್ಲಿ ಈ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಪ್ರದರ್ಶಿಸಲಾಗಿತ್ತು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಹೊಸ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಟಾಟಾ ಕಂಪನಿಯು ಹೊಸ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿಯು ಈಗಾಗಲೇ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ವರದಿ ಪ್ರಕಾರ ಹೊಸ ಟಾಟಾ ಆಲ್‌‌ಟ್ರೊಜ್ ಆವೃತ್ತಿಯಲ್ಲಿ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 111 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಡ್ಯುಯಲ್-ಕ್ಲಚ್ ನೊಂದಿಗೆ ಸ್ಟ್ಯಾಂಡರ್ಡ್ 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಇನ್ನು ಹೊಸ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿಯು ಪ್ಯಾಡಲ್ ಶಿಫ್ಟರ್‌ಗಳನ್ನು ಹೊಂದುತ್ತದೆಯೇ ಎಂದು ಕಾದುನೋಡಬೇಕಾಗಿದೆ. ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊರತುಪಡಿಸಿ, ಟಾಟಾ ಆಲ್‌‌ಟ್ರೊಜ್ ಇತರ ಎರಡು ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಇದರಲ್ಲಿ 1.2-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 85 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 1.5-ಲೀಟರ್, ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಕೂಡ ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಈ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಲಭ್ಯವಿಲ್ಲ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಟಾಟಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ಮೊದಲ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿ ಆಲ್‌‌ಟ್ರೊಜ್ ಕಾರನ್ನು ಬಿಡುಗಡೆಗೊಳಿಸಿತು. ಟಾಟಾ ಆಲ್‌‌ಟ್ರೊಜ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಾದ ಮಾರುತಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಉತ್ತಮ ಪೈಪೋಟಿಯನ್ನು ನೀಡುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಟಾಟಾ ಆಲ್‌‌ಟ್ರೊಜ್ ಕಾರಿನ ಮತ್ತೊಂದು ವಿಶೇಷವೆಂದರೆ ಅದರ ಡೋರುಗಳು 90 ಡಿಗ್ರಿಗಳಷ್ಟು ತೆರೆದುಕೊಳ್ಳುತ್ತವೆ. ಇದರಿಂದಾಗಿ ಈ ಕಾರಿನ ಒಳಗೆ ಸುಲಭವಾಗಿ ಪ್ರವೇಶಿಸಬಹುದಾಗಿದೆ. ಆಲ್‌‌ಟ್ರೊಜ್ ಮಾದರಿಯ ಕ್ಯಾಬಿನ್ ಆಕರ್ಷಕವಾಗಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಟಾಟಾ ಆಲ್‌‌ಟ್ರೊಜ್ ಕಾರು ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸದೊಂದಿಗೆ ಸಖತ್ ಬೋಲ್ಡ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್‌ಲೈಟ್ ಮತ್ತು 16 ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಈ ಕಾರಿನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಮೌಂಟಡ್ ಕಂಟ್ರೋಲ್ ಗಳೊಂದಿಗೆ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಇನ್ನು ಆಲ್‌ಟ್ರೊಜ್ ಮಾದರಿಯ ಡೀಸೆಲ್ ಆವೃತ್ತಿಯ ಬೆಲೆಯನ್ನು ರೂ.40,000 ಗಳವರೆಗೆ ಇಳಿಕೆ ಮಾಡಿದೆ. ಡೀಸೆಲ್ ಆವೃತ್ತಿಗಳಿಗಿಂತ ಹ್ಯಾಚ್‌ಬ್ಯಾಕ್‌ನ ಪೆಟ್ರೋಲ್ ಮಾದರಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಕಡಿತಗೊಳಿಸಿರಬಹುದು. ಆಲ್‌ಟ್ರೊಜ್ ಡೀಸೆಲ್ ಆವೃತ್ತಿಯ ಮಾರಾಟವನ್ನು ಹೆಚ್ಚಿಸುವುದಕ್ಕೆ ಬೆಲೆಯನ್ನು ಇಳಿಸಿರಬಹುದು ಎಂದು ನಿರೀಕ್ಷಿಸುತ್ತೇವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಆಲ್‌‌ಟ್ರೊಜ್ ಟರ್ಬೋ ಪೆಟ್ರೋಲ್ ಆವೃತ್ತಿ

ಟಾಟಾ ಆಲ್‌‌ಟ್ರೊಜ್ ದೇಶಿಯ ಮಾರುಕಟ್ಟೆಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಟಾಟಾ ಆಲ್‌‌ಟ್ರೊಜ್ ಕಾರನ್ನು ಪವರ್ ಫುಲ್ ಟರ್ಬೋ ಪೆಟ್ರೋಲ್ ಆವೃತ್ತಿಯಾಗಿ ಬಿಡುಗಡೆಗೊಳಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

Article Published On: Tuesday, September 22, 2020, 19:37 [IST]
English summary
Tata Altroz Turbo Petrol Launch Soon Details. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+