ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್

ಟಾಟಾ ಮೋಟಾರ್ಸ್ ಕಂಪನಿಯ ಹ್ಯಾರಿಯರ್ ಭಾರತೀಯ ಮಾರುಕಟ್ಟೆಯ ಎಸ್‍ಯುವಿಗಳ ವಿಭಾಗದಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಈ ಜನಪ್ರಿಯ ಟಾಟಾ ಹ್ಯಾರಿಯರ್ ಎಸ್‍ಯುವಿ ಪೆಟ್ರೋಲ್ ವೆರಿಯೆಂಟ್ ನಲ್ಲಿ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್

ಈ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್ ಇತ್ತೀಚೆಗೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ರಶ್ಲೇನ್ ಬಹಿರಂಗಪಡಿಸಿದೆ. ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಮಾದರಿ ಹ್ಯಾರಿಯರ್ ಅನ್ನು ಪೆಟ್ರೋಲ್ ವೆರಿಯೆಂಟ್ ನಲ್ಲಿ ಬಿಡುಗಡೆಗೊಳಿಸಲು ಆನೇಕ ಕಾರಣಗಳಿವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್

ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮಾದರಿಗಳಿಗೆ ಬೇಡಿಕೆಯು ಹೆಚ್ಚಾಗುತ್ತಿದೆ. ಹ್ಯಾರಿಯರ್ ಎದುರಾಳಿ ಅಥವಾ ಪ್ರತಿಸ್ಪರ್ಥಿಯಾದ ಎಂಜಿ ಹೆಕ್ಟರ್ ಪೆಟ್ರೋಲ್ ವೆರಿಯೆಂಟ್ ನಲ್ಲಿ ಲಭ್ಯವಿದೆ. ಹ್ಯಾರಿಯರ್ ಎಸ್‍ಯುವಿಯ ಮಾರಾಟವನ್ನು ಹೆಚ್ಚಿಸಲು ಟಾಟಾ ಕಂಪನಿಯು ಪೆಟ್ರೋಲ್ ವೆರಿಯೆಂಟ್ ನಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್

ಕಳೆದ ತಿಂಗಳು ಎಂಜಿ ಹೆಕ್ಟರ್ ಮಾದರಿಯ 3,500 ಯುನಿಟ್ ಗಳು ಮಾರಾಟವಾಗಿವೆ. ಇನ್ನು ಟಾಟಾ ಕಂಪನಿಯು ಹ್ಯಾರಿಯರ್ ಎಸ್‍ಯುವಿಯ ಸುಮಾರು 2,200 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾದರು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್

ಎಂಜಿ ಹೆಕ್ಟರ್ ಮಾದರಿಯ ಶೇ,50 ರಷ್ಟು ಪೆಟ್ರೋಲ್ ವೆರಿಯೆಂಟ್ ಮಾರಾಟವಾಗಿವೆ, ಇದರಿಂದ ಎಂಜಿ ಹೆಕ್ಟರ್ ಎಸ್‍ಯುವಿಗೆ ಟಕ್ಕರ್ ನೀಡಲು ಪೆಟ್ರೋಲ್ ವೆರಿಯೆಂಟ್ ನಲ್ಲಿ ಹ್ಯಾರಿಯರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇನ್ನು ಹ್ಯಾರಿಯರ್ ಡೀಸೆಲ್ ವೆರಿಯೆಂಟ್ ಬೆಲೆಗೆ ಹೋಲಿಸಿದರೆ ಪೆಟ್ರೋಲ್ ವೆರಿಯೆಂಟ್ ಬೆಲೆಯು ತುಸು ಕಡಿಮೆಯಾಗಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್

ಹೊಸ ಟಾಟಾ ಹ್ಯಾರಿಯರ್ ಎಸ್‍ಯುವಿಯಲ್ಲಿ ಹೊಸ 1.5-ಲೀಟರ್, ಡೈರೆಕ್ಟ್-ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 150 ಗಿಂತ ಹೆಚ್ಚಿನ ಬಿಹೆ‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್

ಟಾಟಾ ಮೋಟಾರ್ಸ್ ಕಂಪನಿಯು ಹ್ಯಾರಿಯರ್ ಎಸ್‍ಯುವಿಯನ್ನು ಒಟ್ಟು ಆರು ರೂಪಾಂತರಗಳಲ್ಲಿ ಲಭ್ಯವಿದೆ. ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವರ್ಷ ಒಮೆಗಾ-ಎಆರ್ಸಿ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಹ್ಯಾರಿಯರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದ್ದರು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್

ಇತ್ತೀಚೆಗೆ ಹ್ಯಾರಿಯರ್ ಎಸ್‍ಯುವಿಯ ಎಕ್ಸ್‌ಟಿ ಪ್ಲಸ್ ಎನ್ನುವ ವೆರಿಯೆಂಟ್‌ವೊಂದನ್ನು ಬಿಡುಗಡೆಗೊಳಿಸಿತು. ಹ್ಯಾರಿಯರ್ ಎಸ್‍ಯುವಿಯ ಹೊರಭಾಗವು ಬೋಲ್ಡ್ ಲುಕ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್ಎಲ್ಗಳು, ಬಂಪರ್ ನಲ್ಲಿ ಅಳವಡಿಸಲಾದ ಹೆಡ್ ಲ್ಯಾಂಪ್ ಮತ್ತು ಮಸ್ಕ್ಯುಲರ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹ್ಯಾರಿಯರ್ ಪೆಟ್ರೋಲ್ ವೆರಿಯೆಂಟ್

ಹ್ಯಾರಿಯರ್ ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ ಏರ್‍‍ಬ್ಯಾಗ್‍ಗಳು, ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಗಳನ್ನು ಹೊಂದಿವೆ.

Most Read Articles

Kannada
English summary
2021 Tata Harrier Petrol SUV Spied. Read In Kannada.
Story first published: Friday, December 11, 2020, 17:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X