ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನಿರೀಕ್ಷಿತ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿಯನ್ನು ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ ಆಲ್ಫಾ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ

ಈ ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿಯು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳು ಬಹಿರಂಗಪಡಿಸಿವೆ. ಭಾರತದಲ್ಲಿ ಬಿಡುಗಡೆಯಾದ ನಂತರ ಹೆಚ್‍‍ಬಿಎಕ್ಸ್ ಟಾಟಾ ಮೋಟಾರ್ಸ್ ಸರಣಿಯಲ್ಲಿ ನೆಕ್ಸಾನ್‍ ಕಾರಿ‍ಗಿಂತ ಕೆಳಗಿನ ಸ್ಥಾನದಲ್ಲಿರಲಿದೆ. ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍ಯುವಿಯು ಆಲ್‍‍ಟ್ರೊಜ್‍‍ನಂತೆಯೇ ಬ್ರ್ಯಾಂಡ್‍‍ನ ಆಲ್ಫಾ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ

ಟಾಟಾ ಮೋಟಾರ್ಸ್‍‍ನ ಮೈಕ್ರೊ-ಎಸ್‍‍ಯುವಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮೈಕ್ರೊ ಎಸ್‍‍ಯುವಿಯ ಮುಂಭಾಗ ಟ್ರಿ-ಏರೋ ಗ್ರಿಲ್ ಮತ್ತು ಡ್ಯುಯಲ್ ಎಲ್‍ಇಡಿ ಹೆಡ್‍ಲ್ಯಾಂ‍ಪ್‍ಗಳನ್ನು ಹೊಂದಿದೆ. ಇನ್ನೂ ಡಿ‍ಆರ್‍ಎಲ್‍ ಮತ್ತು ಹೆಡ್‍‍ಲ್ಯಾಂಪ್‍ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ

ಹೆಚ್‍ಬಿಎಕ್ಸ್ ಮೈಕ್ರೊ-ಎಸ್‍ಯುವಿಯು ವಿನೂತನ ಸ್ಟೈಲ್ ಅನ್ನು ಹೊಂದಿದೆ. ಅಲ್ಲದೇ ಮೈಕ್ರೊ ಎಸ್‍‍ಯುವಿಯು ದೊಡ್ಡ ಟಯರ್‍‍ಗಳು ಮತ್ತು ಫ್ಲೋಟಿಂಗ್ ರೂಪ್‍‍ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮೈಕ್ರೊ ಎಸ್‍‍ಯುವಿಯ ಟಯರ್‍‍ಗಳು ಪ್ರೀಮಿಯಂ ಬ್ಲ್ಯಾಕ್ಡ್ -ಔಟ್ ಅಲಾಯ್ ರಿಮ್ ವಿನ್ಯಾಸವನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ

ಹೊಸ ಹೆಚ್‍ಬಿಎಕ್ಸ್ ಮೈಕ್ರೊ ಎಸ್‍‍ಯುವಿಯು ಟಾಟಾ ಆಲ್‍‍ಟ್ರೊಜ್‍‍ನ ಹೆಚ್ಚಿನ ಫೀಚರ್ಸ್‍‍ಗಳನ್ನು ಹಂಚಿಕೊಳ್ಳಬಹುದು. ಇದರಲ್ಲಿ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ

ಈ ಹೊಸ ಹೆಚ್‍ಬಿಎಕ್ಸ್ ಮೈಕ್ರೊ ಎಸ್‍‍ಯುವಿಯಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಕ್ಲೈಮೇಟ್ ಕಂಟ್ರೋಲ್, ಸ್ಟೀಯರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್ಸ್, ಕ್ರೂಸ್ ಕಂಟ್ರೋಲ್, ಮಲ್ಟಿ-ಇನ್ಫೋರ್ ಡಿಸ್ಪ್ಲೇ ಮತ್ತು ಕೀ ಲೆಸ್ ಎಂಟ್ರಿ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ

ಇನ್ನು ಈ ಮೈಕ್ರೊ ಎಸ್‍ಯುವಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ವಿತ್ ಇಬಿಡಿ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ

ಟಾಟಾ ಹೆಚ್‍ಬಿಎಕ್ಸ್ ಮೈಕ್ರೊ ಎಸ್‍‍ಯುವಿಯಲ್ಲಿ ಟಿಯಾಗೋ ಮಾದರಿಯಲ್ಲಿರುವ 1.2 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 86 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಬಹುದು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಟಾಟಾ ಹೆಚ್‍‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ

ಈ ಹೊಸ ಟಾಟಾ ಹೆಚ್‍ಬಿಎಕ್ಸ್ ಮೈಕ್ರೊ ಎಸ್‍‍ಯುವಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಹೆಚ್‍‍ಬಿಎಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಇಗ್ನಿಸ್ ಮತ್ತು ಮಹೀಂದ್ರಾ ಕೆಯುವಿ 100 ಮೈಕ್ರೊ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tata HBX Micro SUV With Tri-Arrow Grille Spotted Testing. Read In Kannada.
Story first published: Saturday, October 3, 2020, 17:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X