ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯ ಟೀಸರ್ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಡಿಸಿಟಿ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಿದೆ. ಇದೀಗ ಟಾಟಾ ಕಂಪನಿಯು ಹೊಸ ನೆಕ್ಸಾನ್ ಡಿಸಿಟಿ ಆವೃತ್ತಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯ ಟೀಸರ್ ಬಿಡುಗಡೆ

ಟೀಸರ್ ಚಿತ್ರದಲ್ಲಿರುವ ಬರಹಗಳನ್ನು ಗಮನಿಸಿದರೆ ಟಾಟಾ ಮೋಟಾರ್ಸ್ ಕಂಪನಿಯು ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್(ಡಿಸಿಟಿ) ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ ಎಂದು ನಿರೀಕ್ಷಿಸುತ್ತೇವೆ. ಇನ್ನು ನೆಕ್ಸಾನ್ ಮಾದರಿಯ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಮುಂದಿನ ತಿಂಗಳ 2 ರಂದು ಬಿಡುಗಡೆಯಾಗಲಿದೆ. ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೊನೆಟ್ ಮಾದರಿಗೆ ಪೈಪೋಟಿಯನ್ನು ನೀಡುತ್ತದೆ.

ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯ ಟೀಸರ್ ಬಿಡುಗಡೆ

ನೆಕ್ಸಾನ್ ಡಿಸಿಟಿ ಆವೃತ್ತಿಯು ಬಿಡುಗಡೆಯಾದ ಬಳಿಕ ಮಾರಾಟವನ್ನು ಹೆಚ್ಚಿಸಲು ಸಹಕಾರಿಯಾಗಬಹುದು ಎಂದು ಟಾಟಾ ಕಂಪನಿಯು ಭಾವಿಸಿದೆ. ಇನ್ನು ಇದರ ಪ್ರತಿಸ್ಪರ್ಧಿ ಕಿಯಾ ಸೊನೆಟ್ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ ಕೇವಲ 24 ಗಂಟೆಗಳಲ್ಲಿ ಬರೊಬ್ಬರಿ 6,500ಕ್ಕೂ ಹೆಚ್ಚು ಯುನಿಟ್ ಗಳ ಬುಕ್ಕಿಂಗ್ ಅನ್ನು ದಾಖಲಿಸಿದೆ. ನೆಕ್ಸಾನ್ ಡಿಸಿಟಿ ಆವೃತ್ತಿಗೆ ಕಿಯಾ ಸೊನೆಟ್ ಪ್ರಬಲ ಪೈಪೋಟಿ ನೀಡುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯ ಟೀಸರ್ ಬಿಡುಗಡೆ

ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯು ಭಾರತದಲ್ಲಿ ಕಳೆದ ತಿಂಗಳು ಸ್ಪಾಟ್ ಟೆಸ್ಟ್ ನಡೆಸಿತು. ಹೊಸ ನೆಕ್ಸಾನ್ ಡಿಸಿಟಿ ಆವೃತ್ತಿಯು ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆ ಮತ್ತು ಅಲಾಯ್ ವ್ಹೀಲ್ ಅನ್ನು ಹೊಂದಿರಲಿದೆ. ಇನ್ನು ಇಂಟಿರಿಯರ್ ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ಹೊಂದಿರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯ ಟೀಸರ್ ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಆವೃತ್ತಿಯಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 120 ಬಿಹೆಚ್‍ಪಿ ಪವರ್ ಮತ್ತು 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯ ಟೀಸರ್ ಬಿಡುಗಡೆ

ಇನ್ನು ಡೀಸೆಲ್ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 270 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಫೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯ ಟೀಸರ್ ಬಿಡುಗಡೆ

ಟಾಟಾ ನೆಕ್ಸಾನ್ ಮಾದರಿಯನ್ನು ಭಾರತದಲ್ಲಿ 2017ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಅಂದಿನಿಂದ ಇಲ್ಲಿಯವರೆಗೆ ಟಾಟಾ ನೆಕ್ಸಾನ್ ಮಾದರಿಯು ಉತ್ತಮವಾಗಿ ಮಾರಾಟವಾಗುತ್ತಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯ ಟೀಸರ್ ಬಿಡುಗಡೆ

ಕಂಪನಿಯು 2020ರಲ್ಲಿ ನೆಕ್ಸಾನ್ ಮಾದರಿಯನ್ನು ತನ್ನ ಹೊಸ ಇಂಪ್ಯಾಕ್ಟ್ 2.0 ವಿನ್ಯಾಸದ ಭಾಗವಾಗಿ ನವೀಕರಿಸಿತು. ಡಿಸಿಟಿ ಆವೃತ್ತಿಯ ಬೆಲೆಯು ಪ್ರಸ್ತುತ ತಲೆಮಾರಿನ ನೆಕ್ಸಾನ್ ಗಿಂತ ತುಸು ದುಬಾರಿಯಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಟಾಟಾ ನೆಕ್ಸಾನ್ ಡಿಸಿಟಿ ಆವೃತ್ತಿಯ ಟೀಸರ್ ಬಿಡುಗಡೆ

ಟಾಟಾ ನೆಕ್ಸಾನ್ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 300 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಮುಂಬರು ತಿಂಗಳಲ್ಲಿ ಟಾಟಾ ನೆಕ್ಸಾನ್ ಮಾದರಿಗೆ ಟೊಯೊಟಾ ಅರ್ಬನ್ ಕ್ರೂಸರ್, ಕಿಯಾ ಸೊನೆಟ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಎಸ್‍ಯುವಿಗಳು ಪ್ರತಿಸ್ಪರ್ಧಿಗಳ ಪಟ್ಟೆಯಲ್ಲಿ ಹೊಸ ಸೇರ್ಪಡೆಯಾಗುತ್ತದೆ

Most Read Articles

Kannada
English summary
New Tata Nexon Teaser Released. Read In Kannada.
Story first published: Monday, August 31, 2020, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X