ಬಿಡುಗಡೆಯಾಯ್ತು ಜನಪ್ರಿಯ ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ

ಟೊಯೊಟಾ ಕಂಪನಿಯು ತನ್ನ ಕಾಂಪ್ಯಾಕ್ಟ್ ಎಸ್‍ಯುವಿಯಾದ ಯಾರೀಸ್ ಕ್ರಾಸ್ ಅನ್ನು ತವರುಮನೆ ಜಪಾನ್ನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಟೊಯೊಟಾ ಕಂಪನಿಯ ಸರಣಿಯಲ್ಲಿ ಕಾರುಗಳಲ್ಲಿ ಕಾರುಗಳಲ್ಲಿ ಯಾರೀಸ್ ಕ್ರಾಸ್ ಒಂದಾಗಿದೆ.

ಬಿಡುಗಡೆಯಾಯ್ತು ಜನಪ್ರಿಯ ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ

ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯನ್ನು 2020ರ ಜಿನೀವಾ ಮೋಟಾರು ಶೋನಲ್ಲಿ ಪ್ರದರ್ಶನ ಪಡಿಸಲು ನಿರ್ಧರಿಸಲಾಗಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದಾಗಿ 2020ರ ಜಿನೀವಾ ಮೋಟಾರು ಶೋ ರದ್ದುಗೊಂಡಿತ್ತು. ಇದರಿಂದಾಗಿ ಈ ಕಾಂಪ್ಯಾಕ್ಟ್ ಎಸ್‍ಯುವಿಯನ್ನು ಪ್ರತ್ಯೇಕವಾಗಿ ಅನಾವರಣಗೊಳಿಸಲಾಗಿತ್ತು. ಈ ಹೊಸ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ ಕಂಪನಿಯ ಟಿಎನ್‌ಜಿಎ-ಬಿ ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿದೆ.

ಬಿಡುಗಡೆಯಾಯ್ತು ಜನಪ್ರಿಯ ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ

ಯಾರೀಸ್ ಕ್ರಾಸ್ 4,180 ಎಂಎಂ ಉದ್ದ, 1765 ಎಂಎಂ ಅಗಲ, 1560 ಎಂಎಂ ಎತ್ತರ ಮತ್ತು 2560 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಹೊಸ ಯಾರೀಸ್ ಕ್ರಾಸ್ ಜಾಗತಿಕವಾಗಿ ಜನಪ್ರಿಯ ಸಿ-ಎಚ್‌ಆರ್‌ ಕಾಂಪ್ಯಾಕ್ಟ್ ಎಸ್‍ಯುವಿಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಡುಗಡೆಯಾಯ್ತು ಜನಪ್ರಿಯ ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ

ಹೊಸ ಕಾಂಪ್ಯಾಕ್ಟ್ ಎಸ್‍ಯುವಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟೊಯೊಟಾ ಎಸ್‍ಯಿವಿಗಳಿಗಿಂತ ವಿಭಿನ್ನ ವಿನ್ಯಾಸವನ್ನು ಹೊಂದಿದೆ. ಟೊಯೊಟಾ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ಮುಂಭಾಗ ಟೊ-ಟೈರ್ ಗ್ರಿಲ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಜನಪ್ರಿಯ ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ

ಈ ಹೊಸ ಎಸ್‍ಯುವಿಯಲ್ಲಿ ಡಿಆರ್‌ಎಲ್‌ಗಳೊಂದಿಗೆ ಹೆಡ್ ಲ್ಯಾಂಪ್ ಮತ್ತು ಬಂಪರ್ ಕೆಳಭಾಗದಲ್ಲಿ ವೃತ್ತಾಕಾರದ ಫಾಂಗ್ ಲ್ಯಾಂಪ್ ಅನ್ನು ಅಳವಡಿಸಿದ್ದಾರೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು ಸ್ಕ್ವೇರ್ ಆಫ್ ವ್ಹೀಲ್ ಕಮಾನುಗಳು ಮತ್ತು ಬ್ಲ್ಯಾಕ್ ಪ್ಲೋಟಿಂಗ್ ರೂಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಬಿಡುಗಡೆಯಾಯ್ತು ಜನಪ್ರಿಯ ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ

ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಸ್ಲೀಕ್ ಟೇಲ್ ಲ್ಯಾಂಪ್ ಅನ್ನು ಹೊಂದಿದೆ, ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ 18 ಇಂಚಿನ ವ್ಹೀಲ್ ಅನ್ನು ಅಳವಡಿಸಲಾಗಿದೆ. ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಂಬಿಯೆಂಟ್ ಲೈಟಿಂಗ್, ದೊಡ್ಡ ಫ್ಲೋಟಿಂಗ್ ಟಚ್‌ಸ್ಕ್ರೀನ್ ಡಿಸ್‍ ಪ್ಲೇ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನೊಂದಿಗೆ ಆಕರ್ಷಕ ಇಂಟಿರಿಯರ್ ಅನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಜನಪ್ರಿಯ ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ

ಇಂಟಿರಿಯರ್ ನಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆರಾಮದಾಯಕವಾಗಿ ದೂರ ಪ್ರಯಾಣ ಮಾಡಬಹುದು. ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಹೈಬ್ರಿಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಯ್ತು ಜನಪ್ರಿಯ ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ

ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ 1.5-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್ 108 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯಲ್ಲಿ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಜನಪ್ರಿಯ ಟೊಯೊಟಾ ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿ

ಯಾರೀಸ್ ಕ್ರಾಸ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿನ್ಯಾಸವು ಆಕರ್ಷಕವಾಗಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ. ಒಂದು ವೇಳೆ ಭಾರತೀಯ ಮಾರುಕಟ್ಟೆಯಲ್ಲಿ ಯಾರೀಸ್ ಕ್ರಾಸ್ ಬಿಡುಗಡೆಯಾದರೆ ಮಾರುತಿ ಸುಜುಕಿ ವಿಟಾರಾ ಬ್ರೇಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ 300 ಮತ್ತು ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota Yaris Cross Launched In Japan. Read In Kannada.
Story first published: Tuesday, September 1, 2020, 14:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X