ಹೊಸ ಟೊಯೊಟಾ ಯಾರಿಸ್ ಕಾರಿನ ಟೀಸರ್ ಬಿಡುಗಡೆ

ಟೊಯೊಟಾ ಕಂಪನಿಯು ತನ್ನ ಯಾರಿಸ್ ಸೆಡಾನ್‌ನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಇದು ಯಾರಿಸ್ ಫೇಸ್‌ಲಿಫ್ಟ್ ಅಥವಾ ಲಿಮಿಟೆಡ್ ಎಡಿಷನ್ ಮಾದರಿಯ ಟೀಸರ್ ಆಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಟೊಯೊಟಾ ಯಾರಿಸ್ ಕಾರಿನ ಟೀಸರ್ ಬಿಡುಗಡೆ

ಟೀಸರ್ ವೀಡಿಯೋದಲ್ಲಿರುವ ಬರಹಗಳನ್ನು ಗಮನಿಸಿದರೆ, ಹೊಸ ಯಾರಿಸ್ ಮಾದರಿಯ ಒಳಾಂಗಣ ಮತ್ತು ಹೊರಭಾಗದಲ್ಲಿ ಬದಲಾವಣೆಯನ್ನು ಹೊಂದಿರುತ್ತದೆ. ಈ ಹೊಸ ಟೀಸರ್ ಅನ್ನು ಹೊರತುಪಡಿಸಿ ಹೊಸ ಯಾರಿಸ್ ಸೆಡಾನ್ ಮಾದರಿಯ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಈ ಯಾರಿಸ್ ಮಾದರಿಯಲ್ಲಿ ಹೊಸ ಎಂಜಿನ್ ಅನ್ನು ಒಳಗೊಂಡಿರಬಹುದು. ಈ ಹೊಸ ಎಂಜಿನ್ ಬ್ರಾಂಡ್‌ನ ಸಣ್ಣ ಹೈಬ್ರಿಡ್ ಪವರ್‌ಟ್ರೇನ್‌ಗಳಲ್ಲಿ ಒಂದಾಗಿರಬಹುದು, ಅದು ಹೊಸ ಯಾರಿಸ್ ಸೆಡಾನ್‌ನಲ್ಲಿ ಮೊದಲು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಟೊಯೊಟಾ ಯಾರಿಸ್ ಕಾರಿನ ಟೀಸರ್ ಬಿಡುಗಡೆ

ಈ ಯಾರಿಸ್ ಫೇಸ್‌ಲಿಫ್ಟ್ ಮಾದರಿಯಲ್ಲಿ ಹೊಸ ಹೆಡ್‌ಲ್ಯಾಂಪ್ ಯುನಿಟ್ ಗಳೊಂದಿಗೆ ಹೊಸ ಮುಂಭಾಗದ ಗ್ರಿಲ್ ಮತ್ತು ಏರ್ ಡ್ಯಾಮ್ ಲೆಕ್ಸಸ್‌ನ ಸಿಗ್ನೇಚರ್ ‘ಸ್ಪಿಂಡಲ್-ಗ್ರಿಲ್' ನಿಂದ ಎರವಲು ಪಡೆದಂತೆ ಕಾಣುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಟೊಯೊಟಾ ಯಾರಿಸ್ ಕಾರಿನ ಟೀಸರ್ ಬಿಡುಗಡೆ

ಆದರೆ ಕಂಪನಿಯು ಬಿಡುಗಡೆಗೊಳಿಸಿದ ಟೀಸರ್‌ನಲ್ಲಿ ಹೆಡ್‌ಲ್ಯಾಂಪ್‌ಗಳು ಮತ್ತು ಗ್ರಿಲ್ ಪ್ರಸ್ತುತ ಮಾದರಿಯಲ್ಲಿರುವಂತೆ ಇದೆ, ಇದು ಫೇಸ್‌ಲಿಫ್ಟೆಡ್ ಯಾರಿಸ್ ವಿಯೋಸ್ ಆಗಿರುವುದಿಲ್ಲವೆಂದು ಇದು ಸೂಚಿಸುತ್ತದೆ. ಯಾರಿಸ್ ಫೇಸ್‌ಲಿಫ್ಟ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಬಹುದು.

ಹೊಸ ಟೊಯೊಟಾ ಯಾರಿಸ್ ಕಾರಿನ ಟೀಸರ್ ಬಿಡುಗಡೆ

ಹೊಸ ಯಾರಿಸ್ ಮಾದರಿಯು ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಅಲಾಯ್ ವ್ಹೀಲ್ ಗಳು, ಡ್ಯುಯಲ್-ಟೋನ್ ಒಳಾಂಗಣಗಳಂತಹ ಹಲವಾರು ಪ್ರೀಮಿಯಂ ಪೀಚರ್ ಗಳನ್ನು ಹೊಂದಿರಬಹುದು.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಇದರೊಂದಿಗೆ ರೂಫ್ ಮೌಂಟಡ್ ಏರ್ ವೆಂಟ್ಸ್, ಹೊಂದಾಣಿಕೆ ಮಾಡಬಹುದಾದ ಪವರ್ ಡ್ರೈವರ್ ಸೀಟ್ ಮತ್ತು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಅನ್ನು ಕೂಡ ಹೊಂದಿರಲಿದೆ.

ಹೊಸ ಟೊಯೊಟಾ ಯಾರಿಸ್ ಕಾರಿನ ಟೀಸರ್ ಬಿಡುಗಡೆ

ಹೊಸ ಯಾರಿಸ್ ಮಾದರಿಯಲ್ಲಿ ಸುರಕ್ಷಯೆಗಾಗಿ 7 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ಹಾಗೆಯೇ ಇನ್ಫ್ರಾರೆಡ್ ಕಟ್ ಆಫ್, ಎಚ್‌ಎಸ್‌ಇಎ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅನ್ನು ಹೊಂದಿರಲಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಹೊಸ ಟೊಯೊಟಾ ಯಾರಿಸ್ ಕಾರಿನ ಟೀಸರ್ ಬಿಡುಗಡೆ

ಟೊಯೋಟಾ ಯಾರಿಸ್ ಮಾದರಿಯು ಸಿಂಗಲ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ, ಈ ಎಂಜಿನ್ 106 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

ಹೊಸ ಟೊಯೊಟಾ ಯಾರಿಸ್ ಕಾರಿನ ಟೀಸರ್ ಬಿಡುಗಡೆ

ಟೊಯೊಟಾ ಕಂಪನಿಯು ಹೊಸ ಯಾರಿಸ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇನ್ನು ಇದೇ ತಿಂಗಳು ಟೊಯೊಟಾ ಕಂಪನಿಯು ಅರ್ಬನ್ ಕ್ರೂಸರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಟೊಯೊಟಾ ಕಂಪನಿಯು ಸಜ್ಜಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Releases New Teaser For Yaris. Read In Kannada.
Story first published: Thursday, September 3, 2020, 20:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X