ವಿವಿಧ ನಗರಗಳಲ್ಲಿ ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗಳನ್ನು ತೆರೆದ ಫೋಕ್ಸ್‌ವ್ಯಾಗನ್

ಕರೋನಾ ವೈರಸ್‌ನಿಂದಾಗಿ ಸ್ವಂತ ವಾಹನ ಬಳಕೆಯು ಹೆಚ್ಚುತ್ತಿರುವುದರಿಂದ ಆಟೋ ಕಂಪನಿಗಳಿಗೆ ವರವಾಗಿ ಪರಿಣಮಿಸಿದ್ದು, ಹೊಸ ವಾಹನಗಳ ಮಾರಾಟದ ಜೊತೆ ಜೊತೆಗೆ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಉದ್ಯಮದ ಮೇಲೂ ಹೆಚ್ಚು ಗಮನಹರಿಸಿವೆ.

ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆ ತೆರೆದ ಫೋಕ್ಸ್‌ವ್ಯಾಗನ್

ಹೊಸ ವಾಹನಗಳ ಜೊತೆಗೆ ಬಳಕೆ ಮಾಡಿದ ವಾಹನಗಳಿಗೂ ಹೆಚ್ಚು ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಉದ್ಯಮವನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ಗುರಿ ಯೋಜನೆ ಹೊಂದಿರುವ ಹಲವಾರು ಆಟೋ ಕಂಪನಿಗಳು ಹೊಸ ಉದ್ಯಮ ವ್ಯವಹಾರದ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಜರ್ಮನ್ ಕಾರು ತಯಾರಿಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಕೂಡಾ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳನ್ನು ಹಂತ-ಹಂತವಾಗಿ ದೇಶದ ಪ್ರಮುಖ ನಗರಗಳಿಗೆ ವಿಸ್ತರಣೆ ಮಾಡುತ್ತಿದೆ.

ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆ ತೆರೆದ ಫೋಕ್ಸ್‌ವ್ಯಾಗನ್

ದಾಸ್ ವೆಲ್ಟ್ ಆಟೋ 3.0 ಮಳಿಗೆಗಳ ಮೂಲಕ ಒಂದೇ ಸೂರಿನಡಿ ವಿವಿಧ ಬ್ರಾಂಡ್‌ಗಳ ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಅತ್ಯಂತ ವ್ಯವಸ್ಥಿತವಾಗಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮತ್ತು ಮರುಮಾರಾಟ ಪ್ರಕ್ರಿಯೆಯನ್ನು ಕೈಗೊಳ್ಳುತ್ತಿದೆ.

ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆ ತೆರೆದ ಫೋಕ್ಸ್‌ವ್ಯಾಗನ್

ಲಾಕ್‌ಡೌನ್‌ಗೂ ಮೊದಲು ಹೊಸ ವಾಹನ ಖರೀದಿ ಯೋಜನೆಯಲ್ಲಿದ್ದ ಹಲವು ಗ್ರಾಹಕರು ಪರಿಸ್ಥಿತಿಗೆ ಅನುಗುಣವಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದು, ವೈರಸ್ ಭೀತಿ ಪರಿಣಾಮ ಹೊಸ ವಾಹನಗಳ ಮಾರಾಟ ಪ್ರಮಾಣಕ್ಕಿಂತಲೂ ಹೆಚ್ಚು ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮರು ಮಾರಾಟ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆ ತೆರೆದ ಫೋಕ್ಸ್‌ವ್ಯಾಗನ್

ಒಂದೇ ಸೂರಿನಡಿ ವಿವಿಧ ಬ್ರಾಂಡ್ ಕಾರುಗಳನ್ನು ಮಾರಾಟ ಮಾರಾಟ ಮಾಡಲಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಇದಕ್ಕಾಗಿಯೇ ಪ್ರತ್ಯೇಕ ವೆಬ್‌ಸೈಟ್ ಕೂಡಾ ತೆರೆದಿದ್ದು, ಇಂಡಿಯನ್ ಬ್ಲ್ಯೂ ಬುಕ್ ಎನ್ನುವ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆ ತೆರೆದ ಫೋಕ್ಸ್‌ವ್ಯಾಗನ್

ಆಸಕ್ತ ಗ್ರಾಹಕರ ತಮ್ಮ ಇಷ್ಟದ ವಾಹನಗಳನ್ನು ಖರೀದಿಗೂ ಮುನ್ನ ಟೆಸ್ಟ್ ಡ್ರೈವ್‌ಗೆ ವೆಬ್‌ಸೈಟ್ ಮೂಲಕವೇ ನೊಂದಣಿ ಮಾಡಿಕೊಳ್ಳಬಹುದಾಗಿದ್ದು, ಆಕರ್ಷಕ ಬೆಲೆಗಳಲ್ಲಿ ಬಳಕೆ ಮಾಡಿದ ಕಾರುಗಳನ್ನು ಖರೀದಿ ಮಾಡಬಹುದಾಗಿದೆ.

ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆ ತೆರೆದ ಫೋಕ್ಸ್‌ವ್ಯಾಗನ್

ಗ್ರಾಹಕರು ಒಂದೇ ಸೂರಿನಡಿಯಲ್ಲಿ ಬಳಕೆ ಮಾಡಿದ ಕಾರುಗಳನ್ನು ಅತ್ಯುತ್ತಮ ಬೆಲೆಗೆ ಮರು ಮಾರಾಟ ಕೂಡಾ ಮಾಡಬಹುದಾದ ಸೌಲಭ್ಯ ಕೂಡಾ ಲಭ್ಯವಿದ್ದು, ಬಳಕೆ ಮಾಡಿದ ಕಾರುಗಳನ್ನು ಕಾರ್ಯನಿರ್ವಹಣಾ ಸಾಮರ್ಥ್ಯದ ಮೇಲೆ ಉತ್ತಮ ಬೆಲೆಗೆ ಖರೀದಿ ಮಾಡಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆ ತೆರೆದ ಫೋಕ್ಸ್‌ವ್ಯಾಗನ್

ಜೊತೆಗೆ ಹೊಸ ಕಾರು ಮಾರಾಟ ಮಾದರಿಯಲ್ಲೇ ಬಳಕೆ ಮಾಡಿದ ಕಾರುಗಳಿಗೂ ವಾರಂಟಿ, ಬ್ಯಾಂಕ್ ಸಾಲ ಸೌಲಭ್ಯ, ಎಕ್ಸ್‌ಚೆಂಜ್ ಆಫರ್ ಮತ್ತು ಆಕ್ಸೆಸರಿಸ್ ಪ್ಯಾಕೇಜ್ ಒದಗಿಸಲಿದೆ.

ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆ ತೆರೆದ ಫೋಕ್ಸ್‌ವ್ಯಾಗನ್

ಇದಕ್ಕಾಗಿ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮತ್ತು ಖರೀದಿ ಪ್ರಕ್ರಿಯೆಗಾಗಿ ನುರಿತ ಉದ್ಯೋಗಿಗಳನ್ನು ಒಳಗೊಂಡ ತಂಡದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದ್ದು, ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿ ಮತ್ತು ಮಾರಾಟದ ವೇಳೆ ಆಗುವ ಮೋಸದ ವ್ಯವಹಾರಗಳಿಗೆ ಬ್ರೇಕ್ ಹಾಕಲು ಅತ್ಯುತ್ತಮ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆ ತೆರೆದ ಫೋಕ್ಸ್‌ವ್ಯಾಗನ್

ಸದ್ಯ ಬೆಂಗಳೂರು, ಹೈದ್ರಾಬಾದ್, ಕೊಯಮತ್ತೂರು, ಕೊಚ್ಚಿ, ತ್ರಿಶೂರ್ ಮತ್ತು ಅಹಮದಾಬಾದ್ ನಗರಗಳಲ್ಲಿ 105ಕ್ಕೂ ಹೆಚ್ಚು ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿದೆ.

Article Published On: Monday, December 21, 2020, 17:57 [IST]
English summary
New Volkswagen Das Welt Auto Centres Opened In Bangalore & Ahemdabad. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+