ಡೀಲರ್ ಬಳಿ ತಲುಪಿದ ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‍ಸ್ಪೇಸ್ ಎಸ್‍ಯುವಿ
ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಹೊಸ ಏಳು ಸೀಟರ್‍ಗಳ ಟಿಗ್ವಾನ್ ಆಲ್‍ಸ್ಪೇಸ್ ಎಸ್‍ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಟಿಗ್ವಾನ್ ಆಲ್‍ಸ್ಪೇಸ್ ಎಸ್‍ಯುವಿಯ ಪ್ರಾರಂಬಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.33.12 ಲಕ್ಷಗಳಾಗಿದೆ.

ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ ಟಿಗ್ವಾನ್ ಆಲ್‍ಸ್ಪೇಸ್ ಎಸ್‍ಯುವಿಯ ಏಳು ಸೀಟರ್‍ನ ಆವೃತ್ತಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿರುವ ಐದು ಸೀಟರ್‍ನ ಟಿಗ್ವಾನ್ ಎಸ್‍ಯುವಿಯ ಸುಧಾರಿತ ಆವೃತ್ತಿಯಾಗಿದೆ. ಹೊಸ ಟಿಗ್ವಾನ್ ಆಲ್‍ಸ್ಪೇಸ್ ಎಸ್‍ಯುವಿಯನ್ನು ಭಾರತಕ್ಕೆ ಸಿಕೆಡಿ ರೂಪದಲ್ಲಿ ಆಮದು ಮಾಡಿಕೊಳ್ಳಲಾಗಿದೆ. ಏಳು ಸೀಟುಗಳ ಈ ಎಸ್‍ಯುವಿ ಫೋಕ್ಸ್‌ವ್ಯಾಗನ್ ಕಂಪನಿಯ ಎಂಕ್ಯೂಬಿ ಎ0 ಐಎನ್ ಪ್ಲಾಟ್‌ಫಾರಂನ ಭಾಗವಾಗಿದೆ. ಇದು ಜಾಗತಿಕ ಮಟ್ಟದಲ್ಲಿರುವ ಎಂಕ್ಯೂಬಿ ಎ0 ಆರ್ಕಿಟೆಕ್ಚರ್‍ನ ಭಾರತದ ಆವೃತ್ತಿಯಾಗಿದೆ.

ಹೊಸ ಟಿಗ್ವಾನ್ ಆಲ್ಸ್ಪೇಸ್ ಎಸ್‍ಯುವಿಯು ಡೀಲರ್ ಬಳಿ ತಲುಪಿದೆ. ಈ ಎಸ್‍ಯುವಿಯು ಡೀಲರ್ ಬಳಿ ತಲುಪಿರುವುದನ್ನು ಟೀಂ ಬಿಹೆಚ್‍ಪಿ ಬಹಿರಂಗಪಡಿಸಿದೆ. ಈ ಎಸ್‍ಯುವಿಯಲ್ಲಿ 2.0 ಲೀಟರಿನ ಟರ್ಬೊಚಾರ್ಜ್ಡ್ ಟಿಎಸ್‍ಐ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 187 ಬಿಹೆಚ್‍ಪಿ ಪವರ್ ಹಾಗೂ 370 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಈ ಎಂಜಿನ್ ಎಲ್ಲಾ ನಾಲ್ಕು ವ್ಹೀಲ್‍ಗಳಿಗೆ ಫೋಕ್ಸ್‌ವ್ಯಾಗನ್ ಕಂಪನಿಯ 4 ಮೋಷನ್ ಆಲ್ ವ್ಹೀಲ್ ಡ್ರೈವ್ (ಎಡಬ್ಲ್ಯುಡಿ) ಮೂಲಕ ಪವರ್ ಕಳುಹಿಸುತ್ತದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‍ಸ್ಪೇಸ್ ಐದು ಸೀಟ್‍ನ ಟಿಗ್ವಾನ್ ಹೊಂದಿರುವ ವಿನ್ಯಾಸವನ್ನು ಹೊಂದಿದೆ.

ಮೂರನೇ ಸಾಲಿನ ಸೀಟಿಂಗ್‍ಗಳಿಗಾಗಿ ಹೊಸ ಎಸ್‍ಯುವಿಯ ಗಾತ್ರ ಹಾಗೂ ವ್ಹೀಲ್‍ಬೇಸ್ ಅನ್ನು ಹೆಚ್ಚಿಸಲಾಗಿದೆ. ಹೊಸ ಟಿಗ್ವಾನ್ ಆಲ್ಸ್ಪೇಸ್ ಎಸ್‍ಯುವಿಯು ಇಂಟಿಗ್ರೇಟೆಡ್ ಎಲ್‍ಇಡಿ ಡಿಆರ್‍ಎಲ್ ಹೊಂದಿರುವ ಎಲ್‍ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್, ಟರ್ನ್ ಇಂಡಿಕೇಟರ್, ಎಲ್‍ಇಡಿ ಫಾಗ್ ಲ್ಯಾಂಪ್ ಹಾಗೂ ಹಿಂಭಾಗದಲ್ಲಿ ಎಲ್‍ಇಡಿ ಟೇಲ್‍ಲೈಟ್‍ಗಳನ್ನು ಹೊಂದಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಏಳು ಸೀಟ್‍ಗಳ ಎಸ್‍ಯುವಿಯಲ್ಲಿ 18 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಈ ಎಸ್‍ಯುವಿಯ ಇಂಟಿರಿಯರ್‍ನಲ್ಲಿ ಬ್ಲಾಕ್/ಬೀಜ್ ಡ್ಯುಯಲ್ ಟೋನ್ ಹೊಂದಿರುವ ಡ್ಯಾಶ್‍ಬೋರ್ಡ್ ನೀಡಲಾಗಿದೆ.

ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಲೆದರ್‍ನಲ್ಲಿ ವ್ರಾಪ್ ಮಾಡಲಾದ ಮಲ್ಟಿಫಂಕ್ಷನಲ್ ಸ್ಟೀಯರಿಂಗ್ ವ್ಹೀಲ್, ಪ್ಯಾಡಲ್ ಶಿಫ್ಟರ್, ಪನೋರಾಮಿಕ್ ಸನ್‌ರೂಫ್, ಮೂರು ಜೋನ್ ಕ್ಲೈಮೆಟ್ ಕಂಟ್ರೋಲ್, ಒಆರ್‌ವಿಎಂಗಳಿಗೆ ಪವರ್ ಅಡ್ಜಸ್ಟಬಲ್ ಹಾಗೂ ಮೆಮೊರಿ ಫಂಕ್ಷನ್‍ಗಳಿವೆ.
MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಇದರ ಜೊತೆಗೆ ಪ್ರೀಮಿಯಂ ವಿಯೆನ್ನಾ ಲೆದರ್ ಅಪ್‍ಹೊಲೆಸ್ಟರ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಹೀಟ್ ಇನ್ಸೂಲೇಟೆಡ್ ವಿಂಡ್‌ಶೀಲ್ಡ್, ಆಟೋ ಹೆಡ್‌ಲ್ಯಾಂಪ್, ರೇನ್ ಸೆನ್ಸಾರ್, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ಕೀಲೆಸ್ ಎಂಟ್ರಿ ಹಾಗೂ ಡ್ರೈವ್ ಮೋಡ್ ಸೆಲೆಕ್ಟರ್ ಸೇರಿದಂತೆ ಹಲವಾರು ಫೀಚರ್‍ಗಳನ್ನು ಹೊಂದಿದೆ.

ಈ ಹೊಸ ಏಳು ಸೀಟುಗಳ ಟಿಗ್ವಾನ್ ಆಲ್ಸ್ಪೇಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಕೊಡಿಯಾಕ್, ಫೋರ್ಡ್ ಎಂಡೀವರ್, ಟೊಯೊಟಾ ಫಾರ್ಚೂನರ್ ಹಾಗೂ ಮಹೀಂದ್ರಾ ಅಲ್ತುರಾಸ್ ಜಿ4ಗಳಿಗೆ ಪೈಪೋಟಿ ನೀಡುತ್ತದೆ..


Click it and Unblock the Notifications