ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಸೊರೆಂಟೊ ಎಸ್‌ಯುವಿ

ಕಿಯಾ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ಎಸ್‌ಯುವಿ ಆವೃತ್ತಿಯಾದ ಸೊರೆಂಟೊ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ 2020ರ ಜಿನೆವಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳುತ್ತಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಸೊರೆಂಟೊ ಎಸ್‌ಯುವಿ

ಜಿನೆವಾದಲ್ಲಿ ಮುಂದಿನ ತಿಂಗಳು ನಡೆಯಲಿರುವ 2020ರ ಆಟೋ ಎಕ್ಸ್‌ಪೋದಲ್ಲಿ ಹೊಸ ತಲೆಮಾರಿನ ಸೊರೆಂಟೊ ಅನಾವರಣಗೊಳಿಸಿದ ನಂತರ ಯುಎಸ್ಎ ಮತ್ತು ಯುರೋಪಿನ್ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಿರುವ ಕಿಯಾ ಸಂಸ್ಥೆಯು ಇದೇ ಕಾರನ್ನು ಭಾರತದಲ್ಲೂ ಬಿಡುಗಡೆಗೊಳಿಸುವ ಸಾಧ್ಯತೆಗಳಿದ್ದು, ಭಾರತದಲ್ಲಿ ಹೋಂಡಾ ಸಿಆರ್-ವಿ, ಮಹೀಂದ್ರಾ ಆಲ್ಟುರಾಸ್ ಜಿ4 ಜೊತೆಗೆ ಫೋರ್ಡ್ ಎಂಡೀವರ್ ಮತ್ತು ಫಾರ್ಚೂನರ್ ಕಾರುಗಳಿಗೂ ಪೈಪೋಟಿ ನೀಡುವ ವೈಶಿಷ್ಟ್ಯತೆಗಳನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಸೊರೆಂಟೊ ಎಸ್‌ಯುವಿ

ಸೆಲ್ಟೊಸ್ ಹಾಗೂ ಕಾರ್ನಿವಾಲ್ ಎಂಪಿವಿ ಬಿಡುಗಡೆಗೊಳಿಸಿದ ನಂತರ ಭಾರತದಲ್ಲಿ ಅತಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿರುವ ಕಿಯಾ ಸಂಸ್ಥೆಯು ಇದೀಗ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದಗೊಳಿಸುತ್ತಿದ್ದು, ಅಮೆರಿಕದಲ್ಲಿ ಬಿಡುಗಡೆಯಾಗಲಿರುವ ಸೊರೆಂಟೊ ಕೂಡಾ ಒಂದಾಗಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಸೊರೆಂಟೊ ಎಸ್‌ಯುವಿ

7 ಸೀಟರ್ ಎಸ್‌ಯುವಿ ಮಾದರಿಯಾಗಿರುವ ಸೊರೆಂಟೊ ಕಾರು ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುವ ಕಾರುಗಳ ಪೈಕಿ ಅಗ್ರಸ್ಥಾನದಲ್ಲಿದ್ದು, ಹೊಸ ಕಾರು ಹಲವು ಹೊಸ ಫೀಚರ್ಸ್‌ಗಳೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಸೊರೆಂಟೊ ಎಸ್‌ಯುವಿ

ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಫಾರ್ಚೂನರ್ ಕಾರಿಗಿಂತಲೂ 40-ಎಂಎಂ ಹೆಚ್ಚುವರಿ ಉದ್ದಳತೆ ಹೊಂದಿದ್ದು, ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಹೆಚ್ಚುವರಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಸೊರೆಂಟೊ ಕಾರು 4,835-ಎಂಎಂ ಉದ್ದ, 1,890-ಎಂಎಂ ಅಗಲ, 1,685-ಎಂಎಂ ಎತ್ತರ ಮತ್ತು 2,785-ಎಂಎಂ ವೀಲ್ಹ್ ಬೆಸ್ ಹೊಂದಿದ್ದು, ಪೆಟ್ರೋಲ್ ಹೈಬ್ರಿಡ್, ಡೀಸೆಲ್ ಮತ್ತು ಪ್ಲಗ್ ಇನ್ ಹೈಬ್ರಿಡ್ ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಸೊರೆಂಟೊ ಎಸ್‌ಯುವಿ

ಸದ್ಯಕ್ಕೆ ಪೆಟ್ರೋಲ್ ಹೈಬ್ರಿಡ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಸೊರೆಂಟೊ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 202-ಬಿಎಚ್‌ಪಿ ಪ್ರೇರಿತ 2.2-ಲೀಟರ್ ಡೀಸೆಲ್ ಮತ್ತು 230-ಬಿಎಚ್‌ಪಿ ಪ್ರೇರಿತ 1.6-ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಸೊರೆಂಟೊ ಎಸ್‌ಯುವಿ

ಇದರಲ್ಲಿ ಬಿಡುಗಡೆಗಾಗಿ ಅಭಿವೃದ್ದಿಪಡಿಸಲಾಗುತ್ತಿರುವ ಪ್ಲಗ್ ಇನ್ ಹೈಬ್ರಿಡ್ ಆವೃತ್ತಿಯು 16.6-kWh ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿರಲಿದ್ದು, ಪೆಟ್ರೋಲ್ ಎಂಜಿನ್ ಹೊರತುಪಡಿಸಿ ಕೇವಲ ಎಲೆಕ್ಟ್ರಿಕ್ ಮೋಟಾರ್ ಮೂಲಕವೇ 90-ಬಿಎಚ್‌ಪಿ ಉತ್ಪಾದನೆಯೊಂದಿಗೆ ಉತ್ತಮ ಮೈಲೇಜ್ ಹಿಂದಿರುಗಿಸಬಲ್ಲದು.

ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಸೊರೆಂಟೊ ಎಸ್‌ಯುವಿ

ಸೊರೆಂಟೊ ಕಾರಿನಲ್ಲಿ ಹೈ ಎಂಡ್ ಆವೃತ್ತಿಯಾಗಲಿರುವ ಪ್ಲಗ್ ಇನ್ ಹೈಬ್ರಿಡ್ ಆವೃತ್ತಿಯು 4x4 ಡ್ರೈವ್ ಟೆಕ್ನಾಲಜಿ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರಿನ ಕುರಿತಾಗಿ ಹೆಚ್ಚಿನ ಮಾಹಿತಿಯು ಜಿನೆವಾ ಆಟೋ ಎಕ್ಸ್‌ಪೋದಲ್ಲಿ ಬಹಿರಂಂಗಗೊಳ್ಳಲಿದೆ.

ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಸೊರೆಂಟೊ ಎಸ್‌ಯುವಿ

ಸೊರೆಂಟೊ ಕಾರು ಸದ್ಯ ಅಮೆರಿಕದಲ್ಲಿ ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ ರೂ.26 ಲಕ್ಷದಿಂದ ರೂ. 32 ಲಕ್ಷ ಬೆಲೆ ಹೊಂದಿದ್ದು, ಭಾರತದಲ್ಲಿ ಈ ಕಾರು ಬಿಡುಗಡೆಗೊಂಡಲ್ಲಿ ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಸೊರೆಂಟೊ ಎಸ್‌ಯುವಿ

ಇನ್ನು ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ವಿವಿಧ ಮಾದರಿಯ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಸೆಲ್ಟೊಸ್, ಕಾರ್ನಿವಾಲ್ ನಂತರ ಸೊನೆಟ್, ಸ್ಟೊನಿಕ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

Article Published On: Monday, February 17, 2020, 18:45 [IST]
English summary
Next-gen Kia Sorento Revealed Ahead Of Debut At Geneva Motor Show. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+