ಲಾಕ್‌ಡೌನ್ ಸಂಕಷ್ಟ- ಉದ್ಯೋಗ ಕಡಿತಕ್ಕೆ ಮುಂದಾದ ನಿಸ್ಸಾನ್

ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಆತಂಕದಲ್ಲಿದ್ದು, ವಾಣಿಜ್ಯ ಚಟುವಟಿಕೆಗಳು ಕುಂಠಿತಗೊಂಡಿರುವುದರಿಂದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದೆ. ಹೀಗಿರುವಾಗ ಆರ್ಥಿಕ ನಷ್ಟದಿಂದ ಪಾರಾಗಲು ಕಠಿಣ ಕ್ರಮಕ್ಕೆ ಮುಂದಾಗಿರುವ ಖಾಸಗಿ ಕಂಪನಿಗಳು ಉದ್ಯೋಗ ಕಡಿತಕ್ಕೆ ಸಿದ್ದವಾಗುತ್ತಿವೆ.

ಲಾಕ್‌ಡೌನ್ ಸಂಕಷ್ಟ- ಉದ್ಯೋಗ ಕಡಿತಕ್ಕೆ ಮುಂದಾದ ನಿಸ್ಸಾನ್

ಭಾರತದಲ್ಲೂ ಕೂಡಾ ಕರೋನಾ ವೈರಸ್‌ನಿಂದಾಗಿ ಭಾರೀ ಪ್ರಮಾಣದ ಆರ್ಥಿಕ ಸಂಕಷ್ಟ ಶುರುವಾಗಿದ್ದು, ಮಾರ್ಚ್ ಮಧ್ಯಂತರದಲ್ಲೇ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಇನ್ನು ಕೂಡಾ ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿಸಿದೆ. ಹೀಗಿರುವಾಗ ಕಳೆದ ಎರಡು ತಿಂಗಳಿನಿಂದ ಯಾವುದೇ ಆದಾಯವಿಲ್ಲದ ಲಕ್ಷಾಂತರ ಖಾಸಗಿ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಉದ್ಯೋಗ ಕಡಿತ ಮಾಡುತ್ತಿವೆ.

ಲಾಕ್‌ಡೌನ್ ಸಂಕಷ್ಟ- ಉದ್ಯೋಗ ಕಡಿತಕ್ಕೆ ಮುಂದಾದ ನಿಸ್ಸಾನ್

ವೈರಸ್ ತಡೆಗಾಗಿ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಭಾರತೀಯ ಆಟೋ ಉದ್ಯಮವು ಸಹ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಆಟೋ ಕ್ಷೇತ್ರಕ್ಕೆ ವಿನಾಯ್ತಿ ನೀಡಲಾಗಿದೆಯಾದರೂ ಆರ್ಥಿಕ ಮುಗ್ಗಟ್ಟು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಲಾಕ್‌ಡೌನ್ ಸಂಕಷ್ಟ- ಉದ್ಯೋಗ ಕಡಿತಕ್ಕೆ ಮುಂದಾದ ನಿಸ್ಸಾನ್

ಹೊಸ ಸುರಕ್ಷಾ ಮಾರ್ಗಸೂಚಿತಂತೆ ಆಟೋ ಉದ್ಯಮವು ಮರು ಚಾಲನೆಗೊಂಡರು ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿದ್ದು, ಆದಾಯವೇ ಇಲ್ಲದೆ ಭಾರೀ ನಷ್ಟ ಅನುಭವಿಸುತ್ತಿರುವ ಪ್ರಮುಖ ಕಾರು ಕಂಪನಿಗಳು ಉದ್ಯೋಗ ಕಡಿತದ ಯೋಜನೆಯಲ್ಲಿವೆ.

ಲಾಕ್‌ಡೌನ್ ಸಂಕಷ್ಟ- ಉದ್ಯೋಗ ಕಡಿತಕ್ಕೆ ಮುಂದಾದ ನಿಸ್ಸಾನ್

ಜಪಾನ್ ಬ್ರಾಂಡ್ ನಿಸ್ಸಾನ್ ಕೂಡಾ ವಿಶ್ವಾದ್ಯಂತ ಸುಮಾರು 20 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲು ಮುಂದಾಗಿದ್ದು, ಭಾರತದಲ್ಲೂ ಕೂಡಾ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಲಾಕ್‌ಡೌನ್ ಸಂಕಷ್ಟ- ಉದ್ಯೋಗ ಕಡಿತಕ್ಕೆ ಮುಂದಾದ ನಿಸ್ಸಾನ್

ಲಾಕ್‌ಡೌನ್‌ಗೂ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಇದೀಗ ಬುಕ್ಕಿಂಗ್ ಹಣ ವಾಪಸ್‌ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಇದು ಆಟೋ ಕಂಪನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಲಾಕ್‌ಡೌನ್ ಸಂಕಷ್ಟ- ಉದ್ಯೋಗ ಕಡಿತಕ್ಕೆ ಮುಂದಾದ ನಿಸ್ಸಾನ್

ಸದ್ಯ ಕರೋನಾ ವೈರಸ್ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕೂಡಾ ಹೊಸ ವಾಹನಗಳ ಖರೀದಿದಾರರಿಗೂ ಚಿಂತೆಗೀಡು ಮಾಡಿದ್ದು, ವಾಹನ ಖರೀದಿ ನಂತರ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾದರೆ ಹೇಗೆ? ಎನ್ನುವ ಭಯ ಕೂಡಾ ಗ್ರಾಹಕರನ್ನು ಕಾಡತೊಡಗಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಲಾಕ್‌ಡೌನ್ ಸಂಕಷ್ಟ- ಉದ್ಯೋಗ ಕಡಿತಕ್ಕೆ ಮುಂದಾದ ನಿಸ್ಸಾನ್

ಹೀಗಿರುವಾಗ ಕಾರು ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಲು ನಿರ್ಧರಿಸಿರುವ ಆಟೋ ಕಂಪನಿಗಳು ವೆಚ್ಚ ನಿರ್ವಹಣೆಗಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇತರೆ ಆಟೋ ಕಂಪನಿಗಳು ಕೂಡಾ ಉದ್ಯೋಗ ಕಡಿತದ ಹಾದಿಯಲ್ಲವೆ.

Most Read Articles

Kannada
English summary
Nissan Motors to cut 20,000 jobs worldwide. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X