ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ನಿಸ್ಸಾನ್ ಹಾಗೂ ದಟ್ಸನ್ ಕಂಪನಿಗಳು ಹೊಸ ವರ್ಷದ ಆರಂಭದಿಂದ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಲಿವೆ. ಎರಡು ಕಂಪನಿಗಳು 2021ರ ಜನವರಿ 1ರಿಂದ ಅನ್ವಯವಾಗುವಂತೆ ಬೆಲೆ ಏರಿಕೆಯನ್ನು ಘೋಷಿಸಿವೆ.

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ನಿಸ್ಸಾನ್ ಹಾಗೂ ದಟ್ಸನ್ ಕಂಪನಿಯ ಕಾರುಗಳ ಬೆಲೆ ಹೊಸ ವರ್ಷದಿಂದ ಭಾರತದಲ್ಲಿ 5%ನಷ್ಟು ದುಬಾರಿಯಾಗಲಿವೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚುತ್ತಿರುವ ಕಾರಣ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇದರಿಂದಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕಂಪನಿಗಳು ಹೇಳಿವೆ.

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ಕಾರುಗಳನ್ನು ತಯಾರಿಸಲು ಅಗತ್ಯವಿರುವ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಕಳೆದ ಕೆಲವು ತಿಂಗಳುಗಳಿಂದ ಹೆಚ್ಚಾಗಿದೆ. ಇದರಿಂದಾಗಿ ನಿರ್ಮಾಣ ವೆಚ್ಚವೂ ಹೆಚ್ಚಾಗಿದೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಹೇಳಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ಮಾರುಕಟ್ಟೆಯಲ್ಲಿನ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ನಿಸ್ಸಾನ್ ಹಾಗೂ ದಟ್ಸನ್ ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.ಇತ್ತೀಚೆಗೆ ಬಿಡುಗಡೆಯಾದ ನಿಸ್ಸಾನ್ ಮ್ಯಾಗ್ನೈಟ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಬೆಲೆಯೂ ಸಹ ಹೆಚ್ಚಾಗಲಿದೆ.

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ಈ ಎಸ್‌ಯುವಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.4.99 ಲಕ್ಷಗಳಾಗಿದೆ. ಈ ಎಸ್‌ಯುವಿಯು ಬಿಡುಗಡೆಯಾದ ಕೇವಲ 15 ದಿನಗಳಲ್ಲಿ 15,000 ಬುಕ್ಕಿಂಗ್'ಗಳನ್ನು ಪಡೆದುಕೊಂಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ನಿಸ್ಸಾನ್ ಕಂಪನಿ ಮಾತ್ರವಲ್ಲದೇ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರಾ, ರೆನಾಲ್ಟ್, ಎಂಜಿ ಮೋಟಾರ್, ಆಡಿ, ಬಿಎಂಡಬ್ಲ್ಯು ಸೇರಿದಂತೆ ಹಲವಾರು ಕಂಪನಿಗಳು ಜನವರಿಯಿಂದ ತಮ್ಮ ಕಂಪನಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ.

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ನಿರ್ವಹಣಾ ವೆಚ್ಚವು ಈ ಸೆಗ್ ಮೆಂಟಿನಲ್ಲಿರುವ ಇತರ ಎಸ್‌ಯುವಿಗಳಿಗಿಂತ ಕಡಿಮೆಯಿರುವುದರಿಂದ ಮ್ಯಾಗ್ನೈಟ್ ಎಸ್‌ಯುವಿಯನ್ನು ಖರೀದಿಸುವ ಗ್ರಾಹಕರು ಅದರ ನಿರ್ವಹಣೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ನಿಸ್ಸಾನ್ ಕಂಪನಿ ಹೇಳಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಯ ಮೇಲೆ 2 ವರ್ಷಗಳ (50,000 ಕಿ.ಮೀ) ವಾರಂಟಿ ನೀಡಲಾಗುತ್ತಿದ್ದು, ಇದನ್ನು 5 ವರ್ಷಗಳವರೆಗೆ ವಿಸ್ತರಿಸಬಹುದು. ಇದಲ್ಲದೆ ಕಂಪನಿಯು ತನ್ನ ಅಧಿಕೃತ ವರ್ಕ್ ಶಾಪ್'ಗಳಲ್ಲಿ ಲೇಬರ್ ಚಾರ್ಜ್ ಮೇಲೆ ರಿಯಾಯಿತಿ ನೀಡಲಿದೆ.

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ಕಂಪನಿಯು ನಿಸ್ಸಾನ್ ಮ್ಯಾಗ್ನೆಟ್ ಕೇರ್ ಹೆಸರಿನಲ್ಲಿ ಪ್ರಿಪೇಯ್ಡ್ ನಿರ್ವಹಣೆಯನ್ನು ಆರಂಭಿಸಿದೆ. ಇದರಿಂದಾಗಿ ಗ್ರಾಹಕರಿಗೆ 22%ನಷ್ಟು ಹಣ ಉಳಿಸಲು ಸಾಧ್ಯವಾಗಲಿದೆ. ಮುಂದಿನ ವರ್ಷ ಬೆಲೆಯನ್ನು ಹೆಚ್ಚಿಸುವ ಮೊದಲು ನಿಸ್ಸಾನ್ ಕಂಪನಿಯು ಡಿಸೆಂಬರ್‌ ತಿಂಗಳಿನಲ್ಲಿ ತನ್ನ ಕಾರುಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ನಿಸ್ಸಾನ್ ಕಿಕ್ಸ್‌ ಕಾರಿನ ಮೇಲೆ ರೂ.65,000ಗಳ ರಿಯಾಯಿತಿ, ರೂ.50,000ಗಳ ವಿನಿಮಯ ಲಾಭ ಹಾಗೂ ರೂ.15,000ಗಳ ವರ್ಷಾಂತ್ಯದ ಕೊಡುಗೆಯನ್ನು ನೀಡಲಾಗುತ್ತಿದೆ. ಈ ಕೊಡುಗೆಗಳು ಡಿಸೆಂಬರ್ 31ರವರೆಗೆ ಲಭ್ಯವಿರಲಿವೆ.

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ಕೊಡುಗೆಗಳು ಡೀಲರ್'ಗಳ ಸ್ಥಳವನ್ನು ಅವಲಂಬಿಸಿರುತ್ತವೆ ಎಂದು ಕಂಪನಿ ಹೇಳಿದೆ. ಕೊಡುಗೆಗಳ ಬಗ್ಗೆ ತಿಳಿಯಲು ಗ್ರಾಹಕರು ಹತ್ತಿರದ ಡೀಲರ್'ಗಳನ್ನು ಸಂಪರ್ಕಿಸಬೇಕು. ಇದೇ ವೇಳೆ ದಟ್ಸನ್ ತನ್ನ ಕಾರುಗಳ ಮೇಲೆ ರೂ.51,000ಗಳವರೆಗೆ ವರ್ಷಾಂತ್ಯದ ಕೊಡುಗೆಗಳನ್ನು ನೀಡುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜನವರಿಯಿಂದ ಹೆಚ್ಚಾಗಲಿವೆ ನಿಸ್ಸಾನ್ ದಟ್ಸನ್ ಕಾರುಗಳ ಬೆಲೆಗಳು

ಕಂಪನಿಯು ರೆಡಿಗೋ ಫೇಸ್‌ಲಿಫ್ಟ್‌ ಕಾರಿನ ಮೇಲೆ ರೂ.45,000ಗಳವರೆಗೆ, ಕೊಡುಗೆ, ರೂ.9,000ಗಳ ನಗದು ರಿಯಾಯಿತಿ, ರೂ.11,000 ವರ್ಷಾಂತ್ಯದ ಬೋನಸ್, ರೂ.20,000ಗಳವರೆಗೆ ವಿನಿಮಯ ಬೋನಸ್ ಹಾಗೂ ರೂ.5,000ಗಳ ಕಾರ್ಪೊರೇಟ್ ಕೊಡುಗೆಗಳನ್ನು ನೀಡುತ್ತಿದೆ.

Most Read Articles

Kannada
English summary
Nissan Datsun car prices to increase from January 2021. Read in Kannada.
Story first published: Thursday, December 24, 2020, 14:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X