ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ನಿಸ್ಸಾನ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಕಿಕ್ಸ್ ಎಸ್‌ಯುವಿ ಬಿಡುಗಡೆ ಮಾಡಿ ಒಂದು ವರ್ಷ ಪೂರೈಸುತ್ತಿದ್ದು, ತನ್ನ ನೆಚ್ಚಿನ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಕಿಕ್ಸ್ ಖರೀದಿಗೆ ಮೇಲೆ ಬರೋಬ್ಬರಿ 1.50 ಲಕ್ಷ ಮೌಲ್ಯ ವಿವಿಧ ಆಫರ್ ನೀಡುತ್ತಿದ್ದು, ಸೀಮಿತ ಅವಧಿಗೆ ಮಾತ್ರವೇ ಈ ಆಫರ್ ಲಭ್ಯವಿರಲಿದೆ.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

2019ರ ಜನವರಿ ಕೊನೆಯ ವಾರದಲ್ಲಿ ಬಿಡುಗಡೆಗೊಂಡಿದ್ದ ನಿಸ್ಸಾನ್ ಕಿಕ್ಸ್ ಕಾರು ಹಲವು ವಿಶೇಷತೆಗಳೊಂದಿಗೆ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಯಾಗಲು ಸಜ್ಜುಗೊಳ್ಳುತ್ತಿದೆ. ಈ ಹಿನ್ನಲೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-4 ಆವೃತ್ತಿಯ ಮೇಲೆ ವಿವಿಧ ಆಫರ್ ಘೋಷಣೆ ಮಾಡಿರುವ ನಿಸ್ಸಾನ್ ಸಂಸ್ಥೆಯು ರೂ. 1.50 ಲಕ್ಷ ಮೌಲ್ಯದ ವಿವಿಧ ಆಫರ್‍‌ಗಳನ್ನು ಘೋಷಣೆ ಮಾಡಿದೆ.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ಕಿಕ್ಸ್ ಖರೀದಿಸುವ ಗ್ರಾಹಕರಿಗೆ ರೂ.40 ಸಾವಿರ ತನಕ ಕ್ಯಾಶ್ ಆಫರ್ ದೊರೆಯಲ್ಲಿದ್ದು, ರೂ.40 ಸಾವಿರ ಎಕ್ಸ್‌ಚೆಂಜ್ ಬೋನಸ್, ರೂ.10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್, ರೂ.25,500 ಮೌಲ್ಯದ ಎರಡು ವರ್ಷಗಳ ವಿಸ್ತರಿತ ಉಚಿತ ವಾರಂಟಿ ನೀಡಲಿದೆ.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ಜೊತೆಗೆ ಕಾರು ಖರೀದಿ ಮಾಡಿದ ಮೊದಲ ಮೂರು ವರ್ಷಗಳ ಅವಧಿಗೆ ವಾರ್ಷಿಕವಾಗಿ ರೂ.6.99 ಬಡ್ಡಿದರದಲ್ಲಿ ಸಾಲ ಸೌಲಭ್ಯ ಕೂಡಾ ಲಭ್ಯವಿರಲಿದ್ದು, ಈ ಮೂಲಕ ಹೊಸ ಕಾರು ಖರೀದಿಯನ್ನು ಇದು ಮತ್ತಷ್ಟು ಸುಲಭವಾಗಿಸಲಿದೆ.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ಇನ್ನು ನಿಸ್ಸಾನ್ ಕಿಕ್ಸ್ ಕಾರು ಮಾದರಿಯು ಎಕ್ಸ್ಇ, ಎಕ್ಸ್ಎಲ್, ಎಕ್ಸ್‌ವಿ, ಮತ್ತು ಎಕ್ಸ್‌ವಿ ಪ್ರೀ ಎಂಬ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.13.69 ಲಕ್ಷ ಬೆಲೆ ಹೊಂದಿದೆ. ಕಿಕ್ಸ್ ಕಾರು ಮಾದರಿಯಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಕೆ9ಕೆ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಡಿಸೇಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ಕಂಪ್ಯಾಕ್ಟ್ ಎಸ್‍ಯುವಿ ಕಾರುಗಳಲ್ಲಿ ವಿಶೇಷವೆನ್ನಿಸುವ ಹಾಗೆ ಈ ಕಾರು ಹಲವಾರು ವೈಶಿಷ್ಟ್ಯತೆಗಳೊಂದಿಗೆ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಅನ್ನು ಪಡೆದುಕೊಂಡಿದ್ದು, ಈ ಕಾರಿನ ಪೆಟ್ರೋಲ್ ಮಾದರಿಗಳು ಒಂದು ಲೀಟರ್‍‍ಗೆ 14.23 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಡೀಸೆಲ್ ಎಂಜಿನ್ ಕಾರು ಪ್ರತಿ ಲೀಟರ್‍‍ಗೆ 20.45 ಕಿ.ಮೀ ಮೈಲೇಜ್ ನೀಡಬಲ್ಲದು.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ನಿಸ್ಸಾನ್ ಕಿಕ್ಸ್ ಎಸ್‍ಯುವಿ ಕಾರು ಪರ್ಲ್ ವೈಟ್, ಬ್ಲೇಡ್ ಸಿಲ್ವರ್, ಬ್ರಾಂಝ್ ಗ್ರೇ, ಫೈರ್ ರೆಡ್, ಆ್ಯಂಬರ್ ಆರೆಂಜ್, ಡೀಪ್ ಬ್ಲೂ ಪರ್ಲ್, ನೈಟ್ ಶೇಡ್, ಫೈರ್ ರೆಡ್ ಮತ್ತು ಆನಿಕ್ಸ್ ಬ್ಲಾಕ್, ಬ್ರಾಂಝ್ ಗ್ರೇ ಮತ್ತು ಆಂಬರ್ ಆರೆಂಜ್, ಪರ್ಲ್ ವೈಟ್ ಮತ್ತು ಆನಿಕ್ಸ್ ಬ್ಲಾಕ್, ಹಾಗು ಪರ್ಲ್ ಬೈಟ್ ಮತ್ತು ಆ್ಯಂಬರ್ ಆರೆಂಜ್ ಸೇರಿ ಒಟ್ಟು 11 ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್‌ಗೆ ಪ್ರೀಮಿಯಂ ವೈಶಿಷ್ಟ್ಯತೆಯು ಮೆರಗು ತಂದಿದ್ದು, ವಿ ಮೊಷನ್ ಗ್ರಿಲ್, ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಕೆಳಭಾಗದಲ್ಲಿ ಅಳವಡಿಸಲಾಗಿರುವ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಪ್ರೋಫೈಲ್ ನೀಡಲಾಗಿದೆ.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ಕಿಕ್ಸ್ ಕಾರುಗಳಿಗೆ ಮತ್ತಷ್ಟು ಮೆರಗು ತರುವ ಉದ್ದೇಶದಿಂದ ಕಾರಿನ ಎಡ್ಜ್‌ಗಳಲ್ಲಿ ಶಾರ್ಪ್ ಡಿಸೈನ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಹಾಗೂ ಕಾರಿನ ಎರಡು ಬದಿಗಳಲ್ಲೂ ನೀಡಲಾಗಿರುವ ಕ್ರೋಮ್ ಸೌಲಭ್ಯವು ಕಾರಿನ ಸೈಡ್ ಪ್ರೋಫೈಲ್‌ಗೆ ಲುಕ್ ನೀಡಿದೆ.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ಹಾಗೆಯೇ ಕಾರಿನಲ್ಲಿ 17-ಇಂಚಿನ 5 ಸ್ಪೋಕ್ ಅಲಾಯ್ ಚಕ್ರಗಳ ಜೋಡಣೆ, 210 ಎಂಎಂ ನಷ್ಟು ಗ್ರೌಂಡ್ ಕ್ಲಿಯೆರೆನ್ಸ್, ಬೂಮೆರ್ಗ್ ಟೈಲ್ ಲ್ಯಾಂಪ್ಸ್, ಗಮನ ಸೆಳೆಯುವ ರಿಯರ್ ಬಂಪರ್ ಸೇರಿದಂತೆ ಹಲವು ಸುಧಾರಿತ ಸೌಲಭ್ಯಗಳು ಕಿಕ್ಸ್ ಕಾರಿನಲ್ಲಿವೆ.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ವಿನೂತನ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ 360 ಡಿಗ್ರಿ ವಿವ್ಯೂ ಮಾನಿಟರ್ ವ್ಯವಸ್ಥೆಯಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ಈ ಕಾರು ವಿಶೇಷ ಎನ್ನಿಸಲಿದೆ.

ವರ್ಷದ ಹರುಷ- ನಿಸ್ಸಾನ್ ಕಿಕ್ಸ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್..!

ಇದರೊಂದಿಗೆ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ನಾಲ್ಕು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದ್ದು, ಮುಂಬರುವ ಮಾರ್ಚ್ ಹೊತ್ತಿಗೆ ಹೊಸ ಬಿಎಸ್-6 ಎಂಜಿನ್ ಪ್ರೇರಿತ ಕಿಕ್ಸ್ ಮಾದರಿಯು ಮತ್ತಷ್ಟು ಹೊಸ ಬದಲಾವಣೆಯೊಂದಿಗೆ ರಸ್ತೆಗಳಿಯಲಿದೆ.

Article Published On: Thursday, January 9, 2020, 15:12 [IST]
English summary
Nissan is celebrating the one-year anniversary of the Kicks SUV in the Indian market. To celebrate the anniversary, the company is offering exclusive offers and benefits on the Nissan Kicks in the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+